ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ತಪ್ಪಿಗೆ ಪ್ರಜಾಪ್ರಭುತ್ವವನ್ನೇಕೆ ದೂಷಿಸುತ್ತೀರಿ: ರಾಹುಲ್‌ ಗಾಂಧಿ ವಿರುದ್ಧ ತಿರುಗಿ ಬಿದ್ದ ಬಿಜೆಪಿ

|
Google Oneindia Kannada News

ನವದೆಹಲಿ, ಆಗಸ್ಟ್ 5: ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ್ದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ತಿರುಗಿಬಿದ್ದಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಚುನಾವಣೆ ಎದುರಿಸಿರುವ ಕಾಂಗ್ರೆಸ್ ದೇಶದೆಲ್ಲೆಡೆ ಸೋಲನುಭವಿಸಿರುವುದಕ್ಕೆ ಮತ್ತು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಅವರ ವಿರುದ್ಧ ನಡೆಯುತ್ತಿರುವ ಇ.ಡಿ ತನಿಖೆಗೆ ಭಾರತೀಯ ಪ್ರಜಾಪ್ರಭುತ್ವ ಮತ್ತು ಅದರ ಸಂಸ್ಥೆಗಳನ್ನು ದೂಷಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ದೆಹಲಿಯಲ್ಲಿ ರಾಹುಲ್‌ ಗಾಂಧಿ ಪತ್ರಿಕಾಗೋಷ್ಠಿ ನಡೆಸಿದ ನಂತರ, ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಕಾಂಗ್ರೆಸ್ ನಾಯಕ "ನಾಚಿಕೆಗೇಡಿನ ಮತ್ತು ಬೇಜವಾಬ್ದಾರಿ" ಹೇಳಿಕೆ ನೀಡಿದ್ದಾರೆ. ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಅಮಾನತುಗೊಳಿಸಿದ್ದು ಅವರ ಅಜ್ಜಿ ಮತ್ತು ಆಗಿನ ಪ್ರಧಾನಿ ಇಂದಿರಾ ಗಾಂಧಿ ಎಂದು ತಿರುಗೇಟು ನೀಡಿದರು.

Breaking: ಭಾರತದಲ್ಲಿ ಸರ್ವಾಧಿಕಾರದ ಆರಂಭ ಕಾಣುತ್ತಿದೆ: ರಾಹುಲ್Breaking: ಭಾರತದಲ್ಲಿ ಸರ್ವಾಧಿಕಾರದ ಆರಂಭ ಕಾಣುತ್ತಿದೆ: ರಾಹುಲ್

ಭಾರತದಲ್ಲಿ ಪ್ರಜಾಪ್ರಭುತ್ವ ಅಂತ್ಯದತ್ತ ಸಾಗುತ್ತಿದೆ ಮತ್ತು ಸರ್ಕಾರದ ಸರ್ವಾಧಿಕಾರದ ವಿರುದ್ಧ ನಿಂತಿರುವ ಯಾರಾದರೂ "ಕೆಟ್ಟ ದಾಳಿಗೆ ಒಳಗಾಗುತ್ತಾರೆ" ಎಂದು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಸುದ್ದಿಗೋಷ್ಠಿಯಲ್ಲಿ ಆರೋಪ ಮಾಡಿದ್ದರು.

 ಭಾರತದ ಸಂಸ್ಥೆಗಳನ್ನು ಕೀಳಾಗಿ ಕಾಣಬೇಡಿ

ಭಾರತದ ಸಂಸ್ಥೆಗಳನ್ನು ಕೀಳಾಗಿ ಕಾಣಬೇಡಿ

ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್, "ನಿಮ್ಮ ಭ್ರಷ್ಟಾಚಾರ ಮತ್ತು ದುಷ್ಕೃತ್ಯಗಳನ್ನು ರಕ್ಷಿಸಲು ಭಾರತದ ಸಂಸ್ಥೆಗಳನ್ನು ಕೀಳಾಗಿಸುವುದನ್ನು ನಿಲ್ಲಿಸಿ, ಜನರು ನಿಮ್ಮ ಮಾತನ್ನು ಕೇಳದಿದ್ದರೆ ನಮ್ಮನ್ನು ಏಕೆ ದೂಷಿಸುತ್ತೀರಿ" ಎಂದು ಹೇಳಿದರು.

ಜನರು ಸರ್ವಾಧಿಕಾರವನ್ನು ಕಂಡಿದ್ದಾರೆ, ತುರ್ತು ಪರಿಸ್ಥಿತಿಯಲ್ಲಿ ವಿರೋಧ ಪಕ್ಷದ ನಾಯಕರು ಮತ್ತು ಸಂಪಾದಕರು ಸೇರಿದಂತೆ ಜನರನ್ನು ಜೈಲಿಗೆ ಹಾಕಲಾಯಿತು, ನ್ಯಾಯಾಧೀಶರನ್ನು ರದ್ದುಗೊಳಿಸಲಾಯಿತು ಮತ್ತು ಸೆನ್ಸಾರ್ ಶಿಪ್ ವಿಧಿಸಲಾಯಿತು. ಆಗ ಇಂದಿರಾಗಾಂಧಿ ಅವರು "ನ್ಯಾಯಾಂಗ ಬದ್ಧತೆ" ಬಗ್ಗೆ ಮಾತನಾಡಿದ್ದರು ಎಂದು ರಾಹುಲ್ ಗಾಂಧಿ ಅವರ ಆರೋಪಗಳಿಗೆ ಉತ್ತರ ನೀಡಿದರು.

 ಪ್ರಜಾಪ್ರಭುತ್ವನ್ನು ದೂಷಿಸುವುದನ್ನು ಬಿಡಿ

ಪ್ರಜಾಪ್ರಭುತ್ವನ್ನು ದೂಷಿಸುವುದನ್ನು ಬಿಡಿ

"ಭಾರತದ ಜನರು ಪದೇ ಪದೇ ನಿಮ್ಮನ್ನು ತಿರಸ್ಕರಿಸಿದಾಗ ನೀವು ಪ್ರಜಾಪ್ರಭುತ್ವವನ್ನು ಏಕೆ ದೂಷಿಸುತ್ತೀರಿ" ಎಂದಿರುವ ರವಿಶಂಕರ್ ಪ್ರಸಾದ್ ಕೆಲವು "ಒಳ್ಳೆಯ ನಾಯಕರನ್ನು" ಹೊಂದಿರುವ ಅವರ ಪಕ್ಷದೊಳಗೆ ಪ್ರಜಾಪ್ರಭುತ್ವವಿದೆಯೇ ಎಂದು ರಾಹುಲ್‌ ಗಾಂಧಿಯ ಕುಟುಂಬ ರಾಜಕಾರಣವನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ.

ರಾಹುಲ್ ಗಾಂಧಿ ಅವರು 2019 ರ ಚುನಾವಣೆಯಲ್ಲೂ ಮೋದಿ ವಿರುದ್ಧ ಎಲ್ಲಾ ರೀತಿಯ ಆರೋಪಗಳನ್ನು ಮಾಡಿದ್ದರು ಆದರೆ ಮತದಾರರು ಅವರನ್ನು ದೊಡ್ಡ ಜನಾದೇಶದೊಂದಿಗೆ ಆಯ್ಕೆ ಮಾಡಿದ್ದಾರೆ ಎಂದು ರವಿಶಂಕರ್ ಪ್ರಸಾದ್ ಹೇಳಿದರು.

 ಆರೋಪ ರದ್ದುಗೊಳಿಸಲು ಕೋರ್ಟ್ ನಿರಾಕರಿಸಿದೆ

ಆರೋಪ ರದ್ದುಗೊಳಿಸಲು ಕೋರ್ಟ್ ನಿರಾಕರಿಸಿದೆ

ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯದ ಪ್ರಕರಣವನ್ನು ತರಾಟೆಗೆ ತೆಗೆದುಕೊಂಡ ರವಿಶಂಕರ್ ಪ್ರಸಾದ್, ಇಬ್ಬರು ಗಾಂಧಿಗಳು ಶೇಕಡಾ 76 ರಷ್ಟು ಪಾಲನ್ನು ಹೊಂದಿರುವ ಯಂಗ್ ಇಂಡಿಯನ್ ಸಂಸ್ಥೆಯು ಕೇವಲ 5 ಲಕ್ಷ ರುಪಾಯಿ ಹೂಡಿಕೆ ಮಾಡುವ ಮೂಲಕ ನ್ಯಾಷನಲ್ ಹೆರಾಲ್ಡ್‌ನ 5,000 ಕೋಟಿ ರುಪಾಯಿ ಮೌಲ್ಯದ ಆಸ್ತಿಯನ್ನು ಹೇಗೆ ಸಂಪಾದಿಸಿದೆ ಎಂಬುದಕ್ಕೆ ಉತ್ತರಿಸಬೇಕು ಎಂದು ಕೇಳಿದರು.

ಪ್ರಕರಣದಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಇತರರ ವಿರುದ್ಧದ ಆರೋಪಗಳನ್ನು ರದ್ದುಗೊಳಿಸಲು ನ್ಯಾಯಾಂಗ ನಿರಾಕರಿಸಿದೆ ಮತ್ತು ಅವರು ಈಗ ಸಂಸ್ಥೆಗಳನ್ನು ದೂಷಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕ ಹೇಳಿದರು.

 ತಪ್ಪು ಮಾಡಿದ್ದಕ್ಕೆ ಪರಿಣಾಮ ಎದುರಿಸಬೇಕು

ತಪ್ಪು ಮಾಡಿದ್ದಕ್ಕೆ ಪರಿಣಾಮ ಎದುರಿಸಬೇಕು

ರಾಹುಲ್ ಗಾಂಧಿ ಮಾಡಿದ ತಪ್ಪಿಗೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ. "ನೀವು ವಿಚಾರಣೆಯನ್ನು ಎದುರಿಸಬೇಕಾಗುತ್ತದೆ ಮತ್ತು ಇಡಿ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ" ಎಂದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ ಮತ್ತು ವಿರೋಧ ಪಕ್ಷವು ಅಧಿಕಾರದಲ್ಲಿದ್ದಾಗ ಪ್ರಜಾಪ್ರಭುತ್ವವು ಹಣಕಾಸಿನ ಅಕ್ರಮಗಳಿಂದ ತುಂಬಿತ್ತು ಎಂದು ಅವರು ಆರೋಪಿಸಿದ್ದಾರೆ.


ದೆಹಲಿಯಿಂದ ಮುಂಬೈ ಮತ್ತು ಕೋಲ್ಕತ್ತಾದವರೆಗೆ ವಿವಿಧ ಸ್ಥಳಗಳಲ್ಲಿ ಹಲವಾರು ವಿರೋಧ ಪಕ್ಷದ ನಾಯಕರು ಮತ್ತು ಅವರ ಸಹಚರರು ಅಕ್ರಮ ಹಣದ ಮೂಲಕ ಸಂಪಾದಿಸಿದ ಆಸ್ತಿಗಳನ್ನು ಇಡಿ ವಶಪಡಿಸಿಕೊಂಡಿದೆ ಎಂದು ಅವರು ಹೇಳಿದರು.

English summary
Shortly after Rahul Gandhi's press conference in Delhi, former Union minister Ravi Shankar Prasad said the Congress leader made "shameful and irresponsible" comments. Prasad said, "Stop demeaning the institutions of India to safeguard your corruption and misdeeds. If people don't listen to you why are you blaming us."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X