ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡಿಯಾ ಗೇಟ್‌ ಬಳಿ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರತಿಮೆ

|
Google Oneindia Kannada News

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನದ ಮೊದಲು, ಅವರ ಸ್ಮರಣಾರ್ಥ ಇಂಡಿಯಾ ಗೇಟ್‌ನಲ್ಲಿ ಗ್ರಾನೈಟ್‌ನಿಂದ ಮಾಡಿದ ಭವ್ಯವಾದ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿ ಟ್ವೀಟ್ ಮಾಡಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. "ಇಡೀ ರಾಷ್ಟ್ರವು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನವನ್ನು ಆಚರಿಸುತ್ತಿರುವ ಸಮಯದಲ್ಲಿ, ಗ್ರಾನೈಟ್‌ನಿಂದ ಮಾಡಿದ ಅವರ ಭವ್ಯವಾದ ಪ್ರತಿಮೆಯನ್ನು ಇಂಡಿಯಾ ಗೇಟ್‌ನಲ್ಲಿ ಸ್ಥಾಪಿಸಲಾಗುವುದು ಎಂದು ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ. ಇದು ಇದರ ಸಂಕೇತವಾಗಿದೆ. ಅವರಿಗೆ ಭಾರತ ಋಣಿಯಾಗಿದೆ,'' ಎಂದಿದ್ದಾರೆ.

ಪ್ರತಿಮೆ ಪೂರ್ಣಗೊಳ್ಳುವವರೆಗೆ ಅದೇ ಸ್ಥಳದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹೊಲೊಗ್ರಾಮ್ ಇರುತ್ತದೆ ಎಂದು ಅವರು ಹೇಳಿದರು. "ನೇತಾಜಿ ಬೋಸ್ ಅವರ ಭವ್ಯ ಪ್ರತಿಮೆ ಪೂರ್ಣಗೊಳ್ಳುವವರೆಗೆ, ಅವರ ಹೊಲೊಗ್ರಾಮ್ ಪ್ರತಿಮೆಯು ಅದೇ ಸ್ಥಳದಲ್ಲಿ ಇರುತ್ತದೆ. ನಾನು ನೇತಾಜಿ ಅವರ ಜನ್ಮದಿನವಾದ ಜನವರಿ 23 ರಂದು ಹೊಲೊಗ್ರಾಮ್ ಪ್ರತಿಮೆಯನ್ನು ಅನಾವರಣಗೊಳಿಸುತ್ತೇನೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.

Statue of Netaji Subhas Chandra Bose to Be Installed at India Gate, Announces PM Modi

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವಾದ ಜನವರಿ 23 ರಂದು ಪ್ರತಿಮೆಯ ಅನಾವರಣ ನಡೆಯಲಿದೆ.

ಭಾರತ ಸರ್ಕಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತಿಯನ್ನು ವರ್ಷಾಪೂರ್ತಿ ಆಚರಿಸುತ್ತಿದೆ. 2021ರ ಜನವರಿ 23ರಂದು ಕೋಲ್ಕತ್ತಾದ ವಿಕ್ಟೋರಿಯಾ ಮೆಮೋರಿಯಲ್ ಹಾಲ್‌ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ಜಯಂತಿಯ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿತ್ತು, ಮಾನ್ಯ ಪ್ರಧಾನಮಂತ್ರಿಯವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ಈ ಆಚರಣೆಗಾಗಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಗಣ್ಯ ವ್ಯಕ್ತಿಗಳು, ಇತಿಹಾಸತಜ್ಞರು, ಲೇಖಕರು, ವಿಷಯ ತಜ್ಞರು, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬದ ಸದಸ್ಯರು ಹಾಗೂ ಆಜಾದ್ ಹಿಂದ್ ಸೇನೆ (ಐ.ಎನ್.ಎ.)ಯೊಂದಿಗೆ ಸಂಪರ್ಕಿತರಾದ ಗಣ್ಯ ವ್ಯಕ್ತಿಗಳೂ ಇದ್ದಾರೆ. ಜನವರಿ 23ನ್ನು ಪ್ರತಿವರ್ಷ ಪರಾಕ್ರಮ ದಿವಸವಾಗಿ ಆಚರಿಸಲು ಗೆಜೆಟ್ ಅಧಿಸೂಚನೆಯನ್ನೂ ಹೊರಡಿಸಲಾಗಿದೆ.

ಭಾರತ ಸರ್ಕಾರ, ಐಎನ್ಎಯ ಹುತಾತ್ಮರ ಸ್ಮಾರಕವನ್ನು ಕೆಂಪು ಕೋಟೆಯಲ್ಲಿ ಮತ್ತು ಕೋಲ್ಕತ್ತಾ ಬಳಿಯ ನೀಲ್ ಗಂಜ್ ನಲ್ಲಿ ಸ್ಥಾಪಿಸಲು, ನೇತಾಜಿ ಮತ್ತು ಐ.ಎನ್.ಎ.ಕುರಿತ ಕಿರು ವಿಡಿಯೋ, ಐಎನ್ಎ ಟ್ರಯಲ್ ಕುರಿತ ಸಾಕ್ಷ್ಯ ಚಿತ್ರ ನಿರ್ಮಾಣ, ಕರ್ನಲ್ ದಿಲ್ಲಾನ್ ಮತ್ತು ಜನರಲ್ ಶಹನವಾಜ್ ಖಾನ್ ಅವರ ಜೀವನ ಚರಿತ್ರೆಯ ಪ್ರಕಟಣೆ, ಐ.ಎನ್.ಎ. ಚಿತ್ರಗಳನ್ನು ಸಚಿತ್ರ ಪುಸ್ತಕವಾಗಿ ಪ್ರಕಟಿಸುವ, ನೇತಾಜಿ ಕುರಿತಂತೆ ಮಕ್ಕಳ-ಸ್ನೇಹಿ ಕಾಮಿಕ್ ನಂಥ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ವಿವಿಧ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದೆ.

ಡಿಸೆಂಬರ್ 30, 1943ರಂದು ಭಾರತೀಯ ರಾಷ್ಟ್ರೀಯ ಸೇನೆ(ಐಎನ್ಎ)ಯ ಬೋಸ್ ಮೊದಲ ಬಾರಿಗೆ ಪೋರ್ಟ್‌ ಬ್ಲೇರ್ ನ ಜೈಲಿನಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿದ್ದರು. ಬ್ರಿಟಿಷರಿಂದ ದಾಸ್ಯದಿಂದ ಮುಕ್ತಗೊಂಡ ಭಾರತದ ಪ್ರಥಮ ಭೂ ಪ್ರದೇಶ ಎಂದು ಸ್ವಾತಂತ್ಯದ ಘೋಷಣೆ ಮಾಡಿದ್ದರು. ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನ್ನಿಯರು ಈ ದ್ವೀಪವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು.

ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಪೋರ್ಟ್ ಬ್ಲೇರ್ ನಲ್ಲಿ ಪ್ರಥಮ ಬಾರಿಗೆ ತ್ರಿವರ್ಣಧ್ವಜಾರೋಹಣ ಮಾಡಿದ ಸವಿನೆನಪಿಗೆ 75 ವರ್ಷ ಸಂದಿದೆ. ಅಂಡಮಾನ್ ಸೆಲ್ಯುಲಾರ್ ಜೈಲಿನಲ್ಲಿ ಧ್ವಜಕ್ಕೆ ವಂದಿಸುತ್ತಿರುವ ದೃಶ್ಯ ಇರುವ 75 ರು ಮೌಲ್ಯದ ನಾಣ್ಯವನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಲಾಗಿದೆ.

Recommended Video

ನಾಯಕನಾಗಿ ಮೊದಲ ಸರಣಿಯಲ್ಲೇ ಹೀನಾಯವಾದ ಸೋಲು !! | Oneindia Kannada

ಅಂಡಮಾನ್ ಹಾಗೂ ನಿಕೋಬಾರ್ ದ್ವೀಪ ಸಮೂಹದ ರೋಸ್ ದ್ವೀಪವನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪ, ನೀಲ್ ದ್ವೀಪವನ್ನು ಶಹೀದ್ ದ್ವೀಪ ಹಾಗು ಹಾವೆಲ್ ಲಾಕ್ ದ್ವೀಪವನ್ನು ಸ್ವರಾಜ್ ದ್ವೀಪ ಎಂದು ಹೆಸರಿಸಲಾಗಿದೆ.

English summary
Ahead of the 125th birth anniversary of Netaji Subhas Chandra Bose, Prime Minister Narendra Modi has said that a grand statue made of granite will be installed at India Gate in his remembrance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X