ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್‌ ಲಸಿಕೆ ವ್ಯರ್ಥ: ಕೇಂದ್ರ,ರಾಜ್ಯಗಳ ನಡುವೆ ವಾಕ್ಸಮರ

|
Google Oneindia Kannada News

ನವದೆಹಲಿ, ಮೇ 28: ಕೋವಿಡ್‌ ಲಸಿಕೆಗಳು ವ್ಯರ್ಥವಾಗುವ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ವಾಕ್ಸಮರ ಆರಂಭವಾಗಿದೆ. 1.84 ಕೋಟಿಗೂ ಹೆಚ್ಚು ಕೋವಿಡ್‌ ಲಸಿಕೆ ಡೋಸ್‌ಗಳು (1,84,90,522) ಇನ್ನೂ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಇದೆ. ಹೆಚ್ಚಿನ ಲಸಿಕೆ ರಾಜ್ಯಗಳಿಗೆ ದೊರೆಯಲಿದೆ. ಆದರೆ ರಾಜ್ಯ ಸರ್ಕಾರಗಳು ಲಸಿಕೆ ವ್ಯರ್ಥ ಪ್ರಮಾಣವನ್ನು ಕಡಿಮೆ ಮಾಡಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಬುಧವಾರ, ಆರೋಗ್ಯ ಸಚಿವಾಲಯವು ಪತ್ರಿಕಾ ಹೇಳಿಕೆಯಲ್ಲಿ ಜಾರ್ಖಂಡ್ ಸುಮಾರು ಶೇ. 37 ಲಸಿಕೆಗಳನ್ನು 'ವ್ಯರ್ಥ ಮಾಡಿದೆ' ಮತ್ತು ಛತ್ತೀಸ್‌ಗಢ ಶೇ. 30 ಲಸಿಕೆಗಳನ್ನು 'ವ್ಯರ್ಥ ಮಾಡಿದೆ' ಎಂದು ಹೇಳಿತ್ತು. ಈ ವಿಚಾರದಲ್ಲೇ ಕೇಂದ್ರ, ರಾಜ್ಯ ಸರ್ಕಾರಗಳ ನಡುವೆ ವಾಗ್ವಾದ ನಡೆದಿದೆ.

ಏ.11 ರವರೆಗೆ ದೇಶದಲ್ಲಿ ಶೇ.23ರಷ್ಟು ಲಸಿಕೆ ವ್ಯರ್ಥ..!

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್, ''ಆರೋಗ್ಯ ಸಚಿವಾಲಯದ ಈ ಲೆಕ್ಕಾಚಾರ ನೋಡುವಾಗ ನಗು ಬರುತ್ತದೆ. ರಾಜ್ಯದ ಲಸಿಕೆ ವ್ಯರ್ಥ ಪ್ರಮಾಣವು ಶೇ. 4.65 ರಷ್ಟಿದ್ದು, ರಾಷ್ಟ್ರೀಯ ಸರಾಸರಿ ಶೇ. 6.3 ರಷ್ಟಿದೆ'' ಎಂದು ಹೇಳಿದ್ದಾರೆ. ಇನ್ನು ಛತ್ತೀಸ್‌ಗಢದ ಆರೋಗ್ಯ ಸಚಿವ ಟಿ.ಎಸ್. ಸಿಂಗ್‌ ಡಿಯೋ, "ತಪ್ಪಾದ ಮತ್ತು ಸಂಪೂರ್ಣವಾಗಿ ಆಧಾರರಹಿತವಾದ ಮಾಹಿತಿ ಸರ್ಕಾರ ನೀಡಿದೆ" ಎಂದು ಹೇಳಿದ್ದಾರೆ.

States, Centre spar over covid vaccine wastage

ಛತ್ತೀಸ್‌ಗಢದ ಆರೋಗ್ಯ ಸಚಿವ ಟಿ.ಎಸ್. ಸಿಂಗ್‌ ಡಿಯೋ, ''ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಕೇಂದ್ರ ಪೂರೈಸಿದ ಲಸಿಕೆಗಳಲ್ಲಿ, ಕೇವಲ ಶೇ. 0.95 ರಷ್ಟು ವ್ಯರ್ಥವಾಗಿದೆ. 18-45 ವಯಸ್ಸಿನವರಿಗೆ ನೀಡಿದ ಲಸಿಕೆಯಲ್ಲಿ ಶೇ. 0.29 ವ್ಯರ್ಥವಾಗಿದೆ. ಒಟ್ಟು ರಾಷ್ಟ್ರೀಯ ಸರಾಸರಿ ಶೇ. 6 ಕ್ಕಿಂತ ಕಡಿಮೆ'' ಎಂದು ಕೇಂದ್ರ ಸರ್ಕಾರದ ಹೇಳಿಕೆಯನ್ನು ವಿರೋಧಿಸಿದ್ದಾರೆ.

ಕೊವಿಡ್-19 ಲಸಿಕೆ ವ್ಯರ್ಥ ಮಾಡುವುದು ಅಪರಾಧ ಎಂದ ಹೈಕೋರ್ಟ್!ಕೊವಿಡ್-19 ಲಸಿಕೆ ವ್ಯರ್ಥ ಮಾಡುವುದು ಅಪರಾಧ ಎಂದ ಹೈಕೋರ್ಟ್!

ಲಸಿಕೆ ವ್ಯರ್ಥವನ್ನು ಶೇ.1 ಕ್ಕಿಂತ ಕಡಿಮೆ ಇರುವಂತೆ ನೋಡಿಕೊಳ್ಳಲು ರಾಜ್ಯಗಳಿಗೆ ಪದೇ ಪದೇ ಒತ್ತಾಯಿಸಲಾಗಿದೆ, ಜಾರ್ಖಂಡ್‌ನಲ್ಲಿ ಶೇ. 37.3, ಛತ್ತೀಸ್‌ಗಢ ಶೇ. 30.2, ತಮಿಳುನಾಡು ಶೇ. 15.5, ಜಮ್ಮು ಮತ್ತು ಕಾಶ್ಮೀರ ಶೇ. 10.8, ಮಧ್ಯಪ್ರದೇಶ ಶೇ. 10.7 ಲಸಿಕೆ ವ್ಯರ್ಥ ಮಾಡಿದೆ. ರಾಷ್ಟ್ರೀಯ ಸರಾಸರಿ ಶೇ. 6.3 ರಷ್ಟಿದೆ ಎಂದು ಕೇಂದ್ರ ಪ್ರಕಟಿಸಿತ್ತು.

English summary
States, Centre spar over covid vaccine wastage. Central says States have been urged repeatedly to keep vaccine wastage below 1%.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X