ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ 1 ನಕಲಿ ವಿವಿ ಸೇರಿ 23 ಅನಧಿಕೃತ ಸಂಸ್ಥೆ ಪಟ್ಟಿ ಬಹಿರಂಗ

|
Google Oneindia Kannada News

ನವದೆಹಲಿ, ಜುಲೈ 24: ವಿಶ್ವವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ) ದೇಶದಲ್ಲಿ 23 ನಕಲಿ/ಅನಧಿಕೃತ ವಿಶ್ವವಿದ್ಯಾನಿಲಯಗಳು ಕಾರ್ಯ ನಿರ್ವಹಿಸುತ್ತಿರುವುದನ್ನು ಪತ್ತೆ ಹಚ್ಚಿದೆ. ಈ ಪೈಕಿ 8 ವಿಶ್ವವಿದ್ಯಾನಿಲಯಗಳು ಉತ್ತರಪ್ರದೇಶ ರಾಜ್ಯದಲ್ಲಿವೆ.

ದೆಹಲಿಯಲ್ಲದೆ, ಕರ್ನಾಟಕ, ಬಿಹಾರ, ಕೇರಳ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಒಡಿಶಾ ಹಾಗೂ ಪಾಂಡಿಚೇರಿಗಳಲ್ಲಿ ನಕಲಿ ವಿವಿಗಳಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಒಂದು ವಿದ್ಯಾಸಂಸ್ಥೆ ಸಂಖ್ಯೆ ಕಡಿಮೆಯಾಗಿದೆ.

ನಕಲಿ ವಿಶ್ವವಿದ್ಯಾಲಯ ಪಟ್ಟಿ ಪ್ರಕಟ, ದೆಹಲಿಯಲ್ಲೇ ಅಧಿಕ ನಕಲಿ ವಿಶ್ವವಿದ್ಯಾಲಯ ಪಟ್ಟಿ ಪ್ರಕಟ, ದೆಹಲಿಯಲ್ಲೇ ಅಧಿಕ

ಮಾನ್ಯತೆಯಿಲ್ಲದಿದ್ದರೂ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ಪದವಿ ನೀಡುವ ಮೂಲಕ ವಿದ್ಯಾರ್ಥಿಗಳನ್ನು ವಂಚಿಸುತ್ತಿರುವ ಕುರಿತು ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

State-wise fake university released by UGC

ವಿಶ್ವವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ) ಕಾಯ್ದೆ 1956ರ ಸೆಕ್ಷನ್ 22(1) ರ ಅನ್ವಯ ಮಾನ್ಯತೆ ಪಡೆದ ಕೇಂದ್ರ/ರಾಜ್ಯ/ಸ್ವಯುತ್ತ ಸಂಸ್ಥೆಗಳು ಯುಜಿಸಿ ಕಾಯ್ದೆ ಸೆಕ್ಷನ್ 3 ಅನ್ವಯ ಪದವಿಯನ್ನು ಪ್ರದಾನ ಮಾಡಬಹುದಾಗಿದೆ

ನಕಲಿ ವಿಶ್ವವಿದ್ಯಾಲಯಗಳ ಕುರಿತ ಹೆಚ್ಚಿನ ಮಾಹಿತಿ ವಿಶ್ವವಿದ್ಯಾನಿಲಯಗಳ ಅನುದಾನ ಆಯೋಗ(UGC) ದ ವೆಬ್ ಸೈಟ್ ನಲ್ಲಿ ಲಭ್ಯವಿದೆ.

ದೆಹಲಿ
1) ಕಮರ್ಷಿಯಲ್ ಯೂನಿವರ್ಸಿಟಿ ಲಿಮಿಟೆಡ್, ದರಿಯಾಗಂಜ್, ದೆಹಲಿ.
2) ಯುನೈಟೆಡ್ ನೇಶನ್ಸ್ ಯೂನಿವರ್ಸಿಟಿ, ದೆಹಲಿ.
3) ವೋಕೇಶನಲ್ ಯೂನಿವರ್ಸಿಟಿ, ದೆಹಲಿ.
4) ADR- ಸೆಂಟ್ರಿಕ್ ಜುರಿಡಿಕಲ್ ಯೂನಿವರ್ಸಿಟಿ, ರಾಜೇಂದ್ರ ಪ್ಲೇಸ್, ನವದೆಹಲಿ.
5) ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಇಂಜಿನಿಯರಿಂಗ್, ನವದೆಹಲಿ.
6) ವಿಶ್ವಕರ್ಮ ಓಪನ್ ಯೂನಿವರ್ಸಿಟಿ ಫಾರ್ ಸೆಲ್ಫ್ ಎಂಪ್ಲಾಯ್ ಮೆಂಟ್, ದೆಹಲಿ.
7) ಆಧ್ಯಾತ್ಮಿಕ ವಿಶ್ವವಿದ್ಯಾಲಯ, ವಿಜಯ್ ವಿಹಾರ್, ರೋಹಿಣಿ, ದೆಹಲಿ.

ಕರ್ನಾಟಕ
8) ಬಡಗಾನ್ವಿ ಸರ್ಕಾರ್ ವರ್ಲ್ಡ್ ಓಪನ್ ಯೂನಿವರ್ಸಿಟಿ ಎಜುಕೇಷನ್ ಸೊಸೈಟಿ, ಗೋಕಾಕ್, ಬೆಳಗಾವಿ, ಕರ್ನಾಟಕ.

ಕೇರಳ
9) ಸೇಂಟ್ ಜಾನ್ಸ್ ಯೂನಿವರ್ಸಿಟಿ, ಕಿಶನಟ್ಟಂ, ಕೇರಳ. ಮಹಾರಾಷ್ಟ್ರ 10) ರಾಜಾ ಅರೇಬಿಕ್ ಯೂನಿವರ್ಸಿಟಿ, ನಾಗ್ಪುರ್, ಮಹಾರಾಷ್ಟ್ರ.

ಪಶ್ಚಿಮ ಬಂಗಾಳ
10) ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್, ಕೋಲ್ಕತ್ತಾ.
11) ಇನ್ ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್ ಅಂಡ್ ರೀಸರ್ಚ್, ಠಾಕೂರ್ಪುರ್ಕರ್, ಕೋಲ್ಕತ್ತಾ.

ಉತ್ತರ ಪ್ರದೇಶ
12) ವಾರಣಸೇಯ ಸಂಸ್ಕೃತ ವಿಶ್ವವಿದ್ಯಾನಿಲಯ, ವಾರಣಾಸಿ, ಉತ್ತರ ಪ್ರದೇಶ -ದೆಹಲಿ ವಿಭಾಗ.
13) ಮಹಿಳಾ ಗ್ರಾಮ್ ವಿದ್ಯಾಪೀಠ/ವಿಶ್ವವಿದ್ಯಾಲಯ, ಪ್ರಯಾಗ, ಅಲಹಾಬಾದ್, ಉತ್ತರ ಪ್ರದೇಶ.
14) ಗಾಂಧಿ ಹಿಂದಿ ವಿದ್ಯಾಪೀಠ, ಪ್ರಯಾಗ, ಅಲಹಾಬಾದ್, ಉತ್ತರ ಪ್ರದೇಶ.
15) ನೇತಾಜಿ ಸುಭಾಶ್ ಚಂದ್ರ ಬೋಸ್ ಯೂನಿವರ್ಸಿಟಿ (ಓಪನ್ ಯೂನಿವರ್ಸಿಟಿ), ಆಲಿಘರ್, ಉತ್ತರ ಪ್ರದೇಶ.
16) ನ್ಯಾಷನಲ್ ಯೂನಿವರ್ಸಿಟಿ ಆಫ್ ಎಲೆಕ್ಟ್ರೋ ಕಾಂಪ್ಲೆಕ್ಸ್ ಹೋಮಿಯೋಪತಿ, ಕಾನ್ಪುರ್, ಉತ್ತರ ಪ್ರದೇಶ.
17) ಉತ್ತರ ಪ್ರದೇಶ ವಿಶ್ವವಿದ್ಯಾಲಯ, ಕೋಸಿ ಕಲ್ಯಾಣ್, ಮಥುರಾ, ಉತ್ತರ ಪ್ರದೇಶ.
18) ಮಹಾರಾಣ ಪ್ರತಾಪ್ ಶಿಕ್ಷಾ ನಿಕೇತನ್ ವಿಶ್ವವಿದ್ಯಾಲಯ, ಪ್ರತಾಪ್ ಘರ್, ಉತ್ತರ ಪ್ರದೇಶ.
19) ಇಂದ್ರಪ್ರಸ್ಥ ಶಿಕ್ಷಾ ಪರಿಷದ್, ನೋಯ್ಡಾ, ಉತ್ತರ ಪ್ರದೇಶ.

ಒಡಿಶಾ
20) ನಭಭಾರತ್ ಶಿಕ್ಷಾ ಪರಿಷದ್, ಶಕ್ತಿನಗರ್, ರೂರ್ಕೆಲಾ, ಒಡಿಶಾ.

21) ನಾರ್ತ್ ಒರಿಸ್ಸಾ ಯೂನಿವರ್ಸಿಟಿ ಆಫ್ ಅಗ್ರಿಕಲ್ಚರ್ ಅಂಡ್ ಟೆಕ್ನಾಲಜಿ, ಒಡಿಶಾ.

ಪಾಂಡಿಚೇರಿ (ಪುದುಚೇರಿ)
22) ಶ್ರೀಬೋಧಿ ಅಕಾಡೆಮಿ ಆಫ್ ಹೈಯರ್ ಎಜುಕೇಷನ್, ಥಿಲಸ್ ಪೇಠ್, ವಳತ್ತೂರ್ ರಸ್ತೆ, ಪಾಂಡಿಚೇರಿ

ಮಹಾರಾಷ್ಟ್ರ
23) ರಾಜಾ ಅರಬೇಕ್ ವಿಶ್ವವಿದ್ಯಾಲಯ, ನಾಗ್ಪುರ್.

English summary
The UGC has released a public notice listing 23 fake universities. State wise list of UGC fake university list is here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X