ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರದಲ್ಲಿ ಸಂಕ್ರಾಂತಿ ಕೋಳಿ ಅಂಕಕ್ಕೆ ಸುಪ್ರೀಂ ಹೇಳಿದ್ದೇನು?

By Ananthanag
|
Google Oneindia Kannada News

ನವದೆಹಲಿ, ಜನವರಿ 13: ಸಂಕ್ರಾಂತಿ ಹಬ್ಬವೆಂದರೆ ಆಂಧ್ರ ಪ್ರದೇಶದಲ್ಲಿ ಏನೋ ವಿಶೇಷ. ಕೋಳಿ ಅಂಕ ನಡೆಸಿ ಜೂಜನ್ನಾಡುವುದು ಇನ್ನು ವಿಶೇಷ ಆದರೆ ಈ ಬಾರಿ ಈ ಆಚರಣೆ ತಡೆಕೋರಿ ಅರ್ಜಿ ಸಲ್ಲಿಸಿದವರಿಗೆ ಸುಪ್ರೀಂ ಮುಖಭಂಗ ಮಾಡಿದೆ. ಅಲ್ಲದೆ ರಾಜ್ಯ ಕೋರ್ಟಿನ ಆದೇಶ ಇರುವಾಗಲೆ ಮತ್ತೊಂದು ಆದೇಶ ಹೊರಡಿಸುವುದಿಲ್ಲ ಎಂದಿದೆ.

ಆಂಧ್ರ ಪ್ರದೇಶದಲ್ಲಿ ಕೋಳಿಕಾಳಗ ಸಂಬಂಧಿಸಿದಂತೆ ಜೂಜು, ಅವ್ಯವಾಹರ ನಡೆಯುತ್ತದೆ ಎಂಬ ಕಾರಣಕ್ಕೆ ಆಂಧ್ರ ಹೈಕೋರ್ಟ್ ಆಚರಣೆಗೆ ತಡೆಯೊಡ್ಡಿತ್ತು. ಆದರೆ ಹಿಂದಿನ ಬಾರಿ ಆಂಧ್ರದಲ್ಲಿ ಆಚರಣೆ ಎಂದಿನ ವರ್ಷದಂತೆಯೇ ನಡೆಯಿತು. ಹೀಗಾಗಿ ರಾಜ್ಯದಲ್ಲಿ ಕೋಳಿ ಜಗಳಗಳನ್ನು ನಿಷೇಧಿಸುವಂತೆ ಹೈಕೋರ್ಟ್ ಹೊರಡಿಸಲಾದ ಆದೇಶವನ್ನು ರಾಜ್ಯ ಸರ್ಕಾರ ಪಾಲಿಸುತ್ತಿಲ್ಲ ಎಂದು ಕಾರ್ಯಕರ್ತರಾದ ಗೌರಿ ಮೌಲ್ಲೆಖಿ ಅವರು ಸಲ್ಲಿಸಿರುವ ಹೊಸ ಮನವಿಯನ್ನು ಹಿರಿಯ ವಕೀಲ ಸಿದ್ಧಾರ್ಥ್ ನ್ಯಾಯಾಲಯದಲ್ಲಿ ಪ್ರಸ್ತಾಪಿಸಿದರು[ಇನ್ಮುಂದೆ ಆಂಧ್ರದ ಸಂಕ್ರಾಂತಿ ಹಬ್ಬದಲ್ಲಿ ಕೋಳಿ ಅಂಕವಿಲ್ಲ]

State High Court issued an order will not be issued again: SC

ಇದಕ್ಕೆ ಉತ್ತರ ನೀಡಿರುವ ಸುಪ್ರೀಂ ಕೋರ್ಟ್ ಆಂಧ್ರಪ್ರದೇಶ ಹೈಕೋರ್ಟ್ ಕೋಳಿ ಅಂಕ ವಿಚಾರವಾಗಿ ನೀಡಿರುವ ನಿರ್ದೇಶನಗಳನ್ನು ಸರ್ಕಾರ ಪಾಲಿಸದೇ ಇರುವಾಗ ಹೊಸ ಆದೇಶ ಹೊರಡಿಸಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಮತ್ತು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿದೆ.[ಚಾಮರಾಜನಗರ ಕೋಳಿ ಕಾಳಗಕ್ಕೆ ಬಂದು ಜೈಲು ಸೇರಿದ್ರು]

ಆಂಧ್ರಪ್ರದೇಶ ಹೈಕೋರ್ಟ್ ಈ ಸಂಬಂಧ ಆದೇಶ ನೀಡಿದೆ. ಹೊಸ ಆದೇಶ ಸಾಧ್ಯವಿಲ್ಲ ಎಂದು ಸುಪ್ರೀಂ ತಿಳಿಸಿದೆ. ಈಗಾಗಲೇ ತಮಿಳುನಾಡಿನಲ್ಲಿ ಜಲ್ಲಿಕಟ್ಟಿಗೆ ಚಿಂತಕರ ತೀವ್ರ ವಿರೋಧ ಇರುವಂತೆ ಆಂಧ್ರ ಪ್ರದೇಶದಲ್ಲಿ ಕೋಳಿ ಅಂಕಕ್ಕೆ ವಿರೋಧವಿದೆ ಈ ಹಿನ್ನೆಲೆ ಸುಪ್ರೀಂ ತಮ್ಮ ಆದೇಶ ಹೊರಡಿಸಿರುವುದು ಆಂಧ್ರ ಸರಕಾರ ಕ್ರಮ ಜರುಗಿಸಲು ನೀಡಿರುವ ಎಚ್ಚರಿಕೆಯಂತಿದೆ.

English summary
Andra pradesh High Court ordered to stop cock fight. But before year the the cock fight celebration is common. The Supreme court said that the State High Court issued an order will not be issued again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X