ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬ್ಬಂದಿಗೆ ಕೊರೊನಾ ಸೋಂಕು; ಏರ್ ಇಂಡಿಯಾ ಮುಖ್ಯ ಕಚೇರಿಗೆ ಬೀಗ

|
Google Oneindia Kannada News

ನವದೆಹಲಿ, ಮೇ 12 : ನವದೆಹಲಿಯಲ್ಲಿರುವ ಏರ್ ಇಂಡಿಯಾ ಮುಖ್ಯ ಕಚೇರಿಯನ್ನು ಎರಡು ದಿನಗಳ ಕಾಲ ಮುಚ್ಚಲಾಗಿದೆ. ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಜವಾನನಿಗೆ ಕೊರೊನಾ ಸೋಂಕು ತಗುಲಿದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಮಂಗಳವಾರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಜವಾನನಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ. ಆದ್ದರಿಂದ, ಎರಡು ದಿನಗಳ ಕಾಲ ಮುಖ್ಯ ಕಚೇರಿಗೆ ಬೀಗ ಹಾಕಲಾಗಿದೆ. ಅಧ್ಯಕ್ಷರು ಸೇರಿದಂತೆ ಎಲ್ಲಾ ಸಿಬ್ಬಂದಿ ಮನೆಯಿಂದ ಕೆಲಸ ಮಾಡಲಿದ್ದಾರೆ.

ಏರ್ ಇಂಡಿಯಾ ವಿಮಾನದಿಂದ ಬಂದಿಳಿದ ಇಬ್ಬರು ಕೊರೊನಾ ಸೋಂಕಿತರುಏರ್ ಇಂಡಿಯಾ ವಿಮಾನದಿಂದ ಬಂದಿಳಿದ ಇಬ್ಬರು ಕೊರೊನಾ ಸೋಂಕಿತರು

ಏರ್ ಇಂಡಿಯಾ ಮುಖ್ಯ ಕಚೇರಿಯನ್ನು ಸ್ಯಾನಿಟೈಸ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಕಚೇರಿಗೆ ಭೇಟಿ ನೀಡಿದವರು ಸೇರಿದಂತೆ ಸುಮಾರು 200 ಜನರು ಇದ್ದು, ಎಲ್ಲರೂ ಕಟ್ಟಡದಿಂದ ಹೊರ ಹೋಗಲು ಅವಕಾಶ ನೀಡಲಾಗಿದೆ.

ಏರ್ ಇಂಡಿಯಾದಿಂದ ಟಿಕೆಟ್ ಬುಕ್ಕಿಂಗ್ ಆರಂಭ ಏರ್ ಇಂಡಿಯಾದಿಂದ ಟಿಕೆಟ್ ಬುಕ್ಕಿಂಗ್ ಆರಂಭ

Staff Tests Positive COVID 19 Delhi Air India Office Shut For 2 Days

ಕೊರೊನಾ ಸೋಂಕು ಖಚಿತವಾದ ಸಿಬ್ಬಂದಿ ಹೋಂ ಕ್ವಾರಂಟೈನ್‌ನಲ್ಲಿದ್ದಾನೆ. ವಿದೇಶದಲ್ಲಿರುವ ಭಾರತೀಯರನ್ನು ಕರೆತರುವ ಕೆಲಸದಲ್ಲಿ ಏರ್ ಇಂಡಿಯಾ ವಿಮಾನಗಳು ತೊಡಗಿವೆ. ಇಂತಹ ಸಂದರ್ಭದಲ್ಲಿಯೇ ಮುಖ್ಯ ಕಚೇರಿಯನ್ನು ಎರಡು ದಿನಗಳ ಕಾಲ ಬಂದ್ ಮಾಡಲಾಗಿದೆ.

5 ಮಂದಿ ಏರ್‌ ಇಂಡಿಯಾ ಪೈಲೆಟ್‌ಗಳಿಗೆ ಕೊರೊನಾ ಸೋಂಕು5 ಮಂದಿ ಏರ್‌ ಇಂಡಿಯಾ ಪೈಲೆಟ್‌ಗಳಿಗೆ ಕೊರೊನಾ ಸೋಂಕು

ಮೇ 10ರಂದು ಏರ್ ಇಂಡಿಯಾದ 5 ಪೈಲೆಟ್‌ಗಳಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿತ್ತು. ಎಲ್ಲಾ ಪೈಲೆಟ್‌ಗಳನ್ನು ಹೋಂ ಕ್ವಾರಂಟೈನ್‌ನಲ್ಲಿರಲು ಸೂಚನೆ ನೀಡಲಾಗಿತ್ತು.

ಲಾಕ್ ಡೌನ್ ಅವಧಿಯಲ್ಲಿ ಪೈಲೆಟ್‌ಗಳು ಬೋಯಿಂಗ್ 787 ಡ್ರೀಮ್ ಲೈನರ್ ವಿಮಾನದಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದರು. ಚೀನಾದ ಶಾಂಘೈಗೆ ಕಾರ್ಗೋ ವಿಮಾನಗಳನ್ನು ಹಾರಿಸಿದ್ದರು.

English summary
Air India headquarters in New Delhi has been shut for two days after a peon tested positive for coronavirus. Man who tested positive is in home quarantine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X