ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು; ದೆಹಲಿಯ ರೈಲ್ವೆ ಭವನಕ್ಕೆ ಬೀಗ

|
Google Oneindia Kannada News

ನವದೆಹಲಿ, ಮೇ 25 : ನವದೆಹಲಿಯಲ್ಲಿರುವ ರೈಲ್ವೆ ಭವನವನ್ನು ಮೇ 26 ಮತ್ತು 27ರಂದು ಮುಚ್ಚಲಾಗುತ್ತದೆ ಎಂದು ರೈಲ್ವೆ ಸಚಿವಾಲಯ ಹೇಳಿದೆ. ರೈಲ್ವೆ ಬೋರ್ಡ್‌ನ ಕೆಲವು ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಕಚೇರಿಯನ್ನು ಸ್ಯಾನಿಟೈಸ್ ಮಾಡಬೇಕಿದೆ.

Recommended Video

ಟೀಮ್ ಇಂಡಿಯಾಕ್ಕೆ ಮರಳಲು ಫಿಟ್ ಆದ್ರೂ ಹರ್ಭಜನ್ ಸಿಂಗ್ | Harbhajan Singh Back to team National Team?

ಸೋಮವಾರ ರೈಲ್ವೆ ಸಚಿವಾಲಯ ಈ ಕುರಿತು ಮಾಹಿತಿ ನೀಡಿದೆ. ಮೇ 29ರ ರೈಲ್ವೆ ಭವನದ 4ನೇ ಮಹಡಿಯಲ್ಲಿರುವ ಕಚೇರಿ ಮುಚ್ಚಿರುತ್ತದೆ ಎಂದು ಹೇಳಿದೆ. ಮೇ 26 ಮತ್ತು 27ರಂದು ಎಲ್ಲಾ ಸಂಪೂರ್ಣ ಕಚೇರಿ ಮುಚ್ಚಲಾಗುತ್ತದೆ.

ಲಾಕ್ಡೌನ್ 4.0: ಕಚೇರಿ ಕಾರ್ಯ ನಿರ್ವಹಣೆಗೆ ಮಾರ್ಗಸೂಚಿಲಾಕ್ಡೌನ್ 4.0: ಕಚೇರಿ ಕಾರ್ಯ ನಿರ್ವಹಣೆಗೆ ಮಾರ್ಗಸೂಚಿ

ಭಾನುವಾರ ಕಚೇರಿಯಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದ ಹಿರಿಯ ಅಧಿಕಾರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಖಚಿತವಾಗಿದೆ. ಅಧಿಕಾರಿ ಜೊತೆ ಕೆಲಸ ಮಾಡಿದ್ದ ಇನ್ನೂ 14 ಸಿಬ್ಭಂದಿಗಳಿಗೆ ಹೋಂ ಕ್ವಾರಂಟೈನ್‌ನಲ್ಲಿರಲು ಸೂಚನೆ ನೀಡಲಾಗಿದೆ.

ಸರ್ಕಾರಿ ಸಿಬ್ಬಂದಿಗೆ ಶುಭಸುದ್ದಿ: ಕಚೇರಿ ಹಾಜರಾಗುವ ಬಗ್ಗೆ ಇಲ್ಲಿದೆ ಮಾಹಿತಿ ಸರ್ಕಾರಿ ಸಿಬ್ಬಂದಿಗೆ ಶುಭಸುದ್ದಿ: ಕಚೇರಿ ಹಾಜರಾಗುವ ಬಗ್ಗೆ ಇಲ್ಲಿದೆ ಮಾಹಿತಿ

Staff Tested Positive For COVID 19 Rail Bhawan Close On May 26 And 27

ಕಳೆದ 2 ವಾರದಲ್ಲಿ ರೈಲ್ವೆ ಭವನದ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಐವರು ಸಿಬ್ಬಂದಿಗೆ ಸೋಂಕು ತಗುಲಿದೆ. ಆದ್ದರಿಂದ ಕಚೇರಿಯನ್ನು ಎರಡು ದಿನಗಳ ಕಾಲ ಮುಚ್ಚಿ ಸ್ಯಾನಿಟೈಸ್ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರೈಲು ಸಂಚಾರ; ಟಿಕೆಟ್‌ ಬುಕ್ ಮಾಡಲು ಕೌಂಟರ್ ಆರಂಭ ರೈಲು ಸಂಚಾರ; ಟಿಕೆಟ್‌ ಬುಕ್ ಮಾಡಲು ಕೌಂಟರ್ ಆರಂಭ

ಕಚೇರಿಯಲ್ಲಿ ಕೆಲಸ ಮಾಡುವ ಹಿರಿಯ ಅಧಿಕಾರಿಗಳಿಗೆ ಐಸೋಲೇಷನ್‌ನಲ್ಲಿರಲು ಸೂಚನೆ ನೀಡಲಾಗಿದೆ. ಜೂನ್ 4ರ ತನಕ ಕಚೇರಿಗೆ ಆಗಮಿಸುವುದು ಬೇಡ ಎಂದು ತಿಳಿಸಲಾಗಿದೆ.

ಮೇ 13, ಮೇ 14, ಮೇ 15 ಮತ್ತು ಮೇ 20 ರಂದು ಕೊನೆಯದಾಗಿ ಕಚೇರಿಗೆ ಬಂದಿದ್ದ ನಾಲ್ವರು ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಖಚಿತವಾಗಿದೆ.

ಕಚೇರಿಯ 4ನೇ ಮಹಡಿಯಲ್ಲಿ ಕೆಲಸ ನಿರ್ವಹಣೆ ಮಾಡುವ ರೈಲ್ವೆ ರಕ್ಷಣಾ ದಳದ ಜ್ಯೂನಿಯರ್ ಸಿಬ್ಬಂದಿಗೆ ಮೊದಲು ಸೋಂಕು ಕಾಣಿಸಿಕೊಂಡಿತ್ತು.

English summary
Offices of Rail Bhawan in New Delhi close on May 26 and 27 for sanitization after some officials of railway board tested positive for COVID - 19 said ministry of railways.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X