ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬ್ಬಂದಿ ಕೊರತೆ, ಸೈಬರ್‌ ಠಾಣೆಯಲ್ಲಿ ಇತ್ಯರ್ಥವಾಗಬೇಕಿದೆ 6.7 ಸಾವಿರ ಪ್ರಕರಣಗಳು

|
Google Oneindia Kannada News

ಬೆಂಗಳೂರು, ಜನವರಿ 15: ರಾಜ್ಯದ ಏಕೈಕ ಸೈಬರ್ ಠಾಣೆ ಬೆಂಗಳೂರು ಪೊಲೀಸ್ ಆಯುಕ್ತರ ಆವರಣದಲ್ಲಿ ಆರಂಭಗೊಂಡು ಎರಡು ವರ್ಷ ಕಳೆದರೂ ಪ್ರಕರಣದ ಇತ್ಯರ್ಥ ಮಾತ್ರ ಆಗುತ್ತಿಲ್ಲ. ಕಳೆದ ಎರಡು ವರ್ಷಗಳಿಂದ 6.7 ಸಾವಿರ ಪ್ರಕರಣಗಳು ಅಂತ್ಯ ಕಾಣದೆ ಹಾಗೆಯೇ ಉಳಿದಿವೆ.

ಜನವರಿ 2017ರಿಂದ ಡಿಸೆಂಬರ್ 2018ರವರೆಗೆ ಬೆಂಗಳೂರು ಸೈಬರ್ ಕ್ರೈಂ ಪೊಲೀಸರು 6,695 ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ದೆಹಲಿ ಹಾಗೂ ಮುಂಬೈ ಸೈಬರ್ ಠಾಣೆಯಲ್ಲಿ 122 ಹಾಗೂ 130ಪ್ರಕರಣಗಳು ದಾಖಲಾಗಿವೆ.

ರಾಜ್ಯದ ಏಕೈಕ ಸೈಬರ್‌ ಕ್ರೈಂ ಠಾಣೆಗೆ ಬೆರಳೆಣಿಕೆಯಷ್ಟು ಸಿಬ್ಬಂದಿ! ರಾಜ್ಯದ ಏಕೈಕ ಸೈಬರ್‌ ಕ್ರೈಂ ಠಾಣೆಗೆ ಬೆರಳೆಣಿಕೆಯಷ್ಟು ಸಿಬ್ಬಂದಿ!

ನವದೆಹಲಿಯಲ್ಲಿ ಸೈಬರ್ ಠಾಣೆಯಲ್ಲಿ 40 ಮಂದಿ ಹಾಗೂ ಮುಂಬೈನಲ್ಲಿ 20 ಮಂದಿ ಸಿಬ್ಬಂದಿಗಳಿದ್ದಾರೆ.ಬೆಂಗಳೂರಲ್ಲಿಯೂ 20 ಮಂದಿ ಸಿಬ್ಬಂದಿಗಳಿದ್ದಾರೆ. ಅದರಲ್ಲಿ ಕನಿಷ್ಠ 5ಮಂದಿ ಠಾಣೆಯಲ್ಲೇ ಇದ್ದು ಪ್ರಕರಣದ ತನಿಖೆ, ದಾಖಲು ಮಾಡಬೇಕು. ಉಳಿದ 15 ಮಂದಿ ಪ್ರಕರಣವನ್ನು ಬೇಧಿಸಬೇಕಾಗಿದೆ.

Staff shortage, 6.7k cases pending in Cyber crime office

ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
2019 ಮುಗಿಯುವುದರೊಳಗಾಗಿ ಬೆಂಗಳೂರಲ್ಲಿ ಸುಮಾರು 12 ಸಾವಿರ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ. ಕೇವಲ 15 ಮಂದಿಯಿಂದ ಈ ಪ್ರಕರಣಗಳನ್ನು ಬೇಧಿಸಲು ಸಾಧ್ಯವೇ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

English summary
The cybercrime police station of Bengaluru police registered 6,695 cases from January 2017 to December 2018. The cybercrime stations in Delhi and Mumbai registered 122 and 130 cases in the corresponding period, respectively, according to data sourced from Bengaluru police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X