ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪಿನ್ನರ್ ಮುರಳಿ ಕಾರ್ತಿಕ್ ಕ್ರಿಕೆಟಿಗೆ ವಿದಾಯ

By Mahesh
|
Google Oneindia Kannada News

ಬೆಂಗಳೂರು, ಜೂ.15: ಸ್ಪಿನ್ ಬೌಲರ್ ಮುರಳಿ ಕಾರ್ತಿಕ್ ಅವರು ಎಲ್ಲಾ ಬಗೆಯ ಸ್ಪರ್ಧಾತ್ಮಕ ಕ್ರಿಕೆಟಿಗೆ ವಿದಾಯ ಹೇಳಿದ್ದಾರೆ. 37 ವರ್ಷ ವಯಸ್ಸಿನ ಸ್ಟೈಲಿಷ್ ಬೌಲರ್ ಕಾರ್ತಿಕ್ ಅವರು ಕ್ರಿಕೆಟ್ ವೃತ್ತಿ ಬದುಕನ್ನು ಅಂತ್ಯಗೊಳಿಸುತ್ತಿದ್ದೇನೆ ಎಂದು ಶನಿವಾರ ಘೋಷಿಸಿದ್ದಾರೆ.

'ನಾನು ಎಲ್ಲ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಿದಾಯ ಹೇಳಬಯಸುತ್ತೇನೆ. ಈ ವರ್ಷ ಐಪಿಎಲ್ ಪಂದ್ಯಾವಳಿಯಲ್ಲಿ ನಾನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಪ್ರತಿನಿಧಿಸಿದ್ದೆ. ನನ್ನನ್ನು ಬೆಂಬಲಿಸಿದ ಎಲ್ಲರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ' ಎಂದು ಪತ್ರಿಕಾಗೋಷ್ಠಿಯಲ್ಲಿ ನುಡಿದರು.

ತಮಿಳುನಾಡು ಮೂಲದ ಕಾರ್ತಿಕ್ ಅವರು 1999ರಿಂದ 2007ರವರೆಗೆ ಭಾರತ ತಂಡದ ಪರ 8 ಟೆಸ್ಟ್ 1 ಟ್ವೆಂಟಿ ಮತ್ತು 37 ಏಕದಿನ ಪಂದ್ಯಗಳನ್ನಾಡಿದ್ದಾರೆ. 2000ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯವಾಡಿದ್ದರು. ನವೆಂಬರ್ 2004ರಲ್ಲಿ ಅದೇ ತಂಡದ ವಿರುದ್ಧ ಕೊನೆ ಟೆಸ್ಟ್ ಆಡಿದ್ದು ವಿಶೇಷ.

Murali Kartik retires from all forms of cricket

ಟೆಸ್ಟ್‌ನಲ್ಲಿ 24 ವಿಕೆಟ್ ಪಡೆದರೆ, ಏಕದಿನ ಕ್ರಿಕೆಟ್‌ನಲ್ಲಿ 37 ವಿಕೆಟ್ ಕಬಳಿಸಿದ್ದಾರೆ. ಮಾರ್ಚ್ 16,2002ರಲ್ಲಿ ಹೈದರಾಬಾದಿನಲ್ಲಿ ಜಿಂಬಾಬ್ವೆ ವಿರುದ್ಧ ಮೊದಲ ಒಡಿಐ ಆಡಿದ್ದರು. ಕೊನೆ ಒಡಿಐ ಪಾಕಿಸ್ತಾನ ವಿರುದ್ಧ ನವೆಂಬರ್ 18,2007.

203 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನು ಆಡಿರುವ ಕಾರ್ತಿಕ್ ಒಟ್ಟು 644 ವಿಕೆಟ್ ಪಡೆದಿದ್ದಾರೆ. ಇದರಲ್ಲಿ ಇಂಗ್ಲೆಂಡ್ ಕೌಂಟಿ ತಂಡಗಳಾದ ಮಿಡ್ಲ್‌ಸೆಕ್ಸ್, ಸರ್ರೆ ಹಾಗೂ ಸಮರ್‌ಸೆಟ್ ತಂಡಗಳ ಪರ ಆಡಿದ ಪಂದ್ಯಗಳಲ್ಲಿ ಪಡೆದ ವಿಕೆಟ್‌ಗಳೂ ಇದರಲ್ಲಿ ಸೇರಿವೆ.

ಮುರಳಿ ಕಾರ್ತಿಕ್ ಬಗ್ಗೆ ಜಹೀರ್ ಖಾನ್ ಹಾಗೂ ಯುವರಾಜ್ ಸಿಂಗ್ ಟ್ವೀಟ್:

ಇತ್ತ್ತೀಚೆಗೆ ಮುಕಾಯವಾದ ಇಂಡಿಯನ್ ಪ್ರಿಮಿಯರ್ ಲೀಗ್ 7 ರಲ್ಲಿ ಕಿಂಗ್ಸ್ XI ಪಂಜಾಬ್ ತಂಡದ ಪರ ಆಡಿದ್ದ ಕಾರ್ತಿಕ್, ಕೊನೆ ಪಂದ್ಯ ಮೇ 7, 2014ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಿದ್ದರು. ಐಪಿಎಲ್ ನಲ್ಲಿ ಕಿಂಗ್ಸ್ XI ಪಂಜಾಬ್ ತಂಡ ಸೇರುವುದಕ್ಕೂ ಮೊದಲು ಕೋಲ್ಕತ್ತಾ ನೈಟ್ ರೈಡರ್ಸ್, ಪುಣೆ ವಾರಿಯರ್ಸ್ ಹಾಗೂ ರಾಯ ಚಾಲೆಂಜರ್ಸ್ ಬೆಂಗಳೂರು ತಂಡಗಳಲ್ಲಿ ಕಾರ್ತಿಕ್ ಆಡಿದ್ದರು.

ಸೆಪ್ಟೆಂಬರ್ 11,1976ರಲ್ಲಿ ಚೆನ್ನೈನಲ್ಲಿ ಜನಿಸಿದ ಕಾರ್ತಿಕ್ ಅವರು ರಾಷ್ಟ್ರೀಯ ತಂಡಕ್ಕೆ ಪುನಃ ಸೇರಲು ಹಲವು ಬಾರಿ ಪ್ರಯತ್ನಿಸಿ ವಿಫಲರಾಗಿದ್ದರು. ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್ ಜತೆ ಮುರಳಿ ಕಾರ್ತಿಕ್ ಸ್ಪಿನ್ ವಿಭಾಗದಲ್ಲಿ ಟೀಂ ಇಂಡಿಯಾದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದನ್ನು ಅಭಿಮಾನಿಗಳು ಇಂದಿಗೂ ಸ್ಮರಿಸುತ್ತಾರೆ.

English summary
Former India left-arm spinner Murali Kartik today announced his retirement from all forms of cricket. The 37-year-old Kartik decided to call it quits from cricket with immediate effect, on Saturday(Jun.14).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X