ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಮೊದಲ ಜೈವಿಕ ಇಂಧನ ವಿಮಾನ ಹಾರಾಟ ಯಶಸ್ವಿ

By Mahesh
|
Google Oneindia Kannada News

ನವದೆಹಲಿ, ಆಗಸ್ಟ್ 27: ದೇಶದ ಮೊದಲ ಜೈವಿಕ ಇಂಧನ ಚಾಲಿತ ವಿಮಾನವು ಸೋಮವಾರದಂದು ಯಶಸ್ವಿ ಹಾರಾಟ ನಡೆಸಿದೆ.

ಪರ್ಯಾಯ ಇಂಧನವನ್ನು ಬಳಸಿದ ಸ್ಪೈಸ್‌ಜೆಟ್ ಬಾಂಬಾರ್ಡರ್ ಕ್ಯೂ-400 ವಿಮಾನವು ಡೆಹ್ರಾಡೂನ್‌ನಿಂದ ದೆಹಲಿಗೆ ಹಾರಾಟ ನಡೆಸಿ, ಯಶಸ್ವಿ ಲ್ಯಾಂಡ್ ಮಾಡಿದೆ. ಕ್ಯೂ400 ಏರ್ ಕ್ರಾಫ್ಟ್ 78 ಸೀಟುಗಳ ವಿಮಾನವಾಗಿದೆ.

ಅಮೆರಿಕ ಮತ್ತು ಆಸ್ಟ್ರೇಲಿಯಾಗಳಂತಹ ಕೆಲವು ಮುಂದುವರಿದ ದೇಶಗಳು ಈಗಾಗಲೇ ಜೈವಿಕ ಇಂಧನ ಬಳಸಿದ ವಾಣಿಜ್ಯ ವಿಮಾನಗಳ ಹಾರಾಟಗಳ ಯಶಸ್ವಿ ಪ್ರಯೋಗ ನಡೆಸಿವೆ. ಇಂತಹ ಪ್ರಯತ್ನ ನಡೆಸುತ್ತಿರುವ ಅಭಿವೃದ್ಧಿಶೀಲ ದೇಶಗಳಲ್ಲಿ ಭಾರತವೂ ಒಂದಾಗಿದೆ.

ಸ್ಪೈಸ್‌ ಜೆಟ್‌ನ ವಿಮಾನವು ಜೈವಿಕ ಇಂಧನ ಬಳಸಿ ಡೆಹ್ರಾಡೂನ್ ನಗರದ ಮೇಲೆ ಹತ್ತು ನಿಮಿಷ ಹಾರಾಟದ ಪರೀಕ್ಷೆ ನಡೆಸಿ ನಿಲ್ದಾಣಕ್ಕೆ ಮರಳಿತು. ಪರೀಕ್ಷೆಯಲ್ಲಿ ಯಾವುದೇ ಸಮಸ್ಯೆ ಕಂಡುಬರಲಿಲ್ಲ. ಹೀಗಾಗಿ, ವಿಮಾನಯಾನವನ್ನು ದೆಹಲಿಯತ್ತ ತಿರುಗಿಸಲಾಯಿತು.

ಡೆಹ್ರಾಡೂನ್ ನಿಂದ ದೆಹಲಿಯತ್ತ ಪಯಣ

ಡೆಹ್ರಾಡೂನ್ ನಿಂದ ದೆಹಲಿಯತ್ತ ಪಯಣ

ಸ್ಪೈಸ್‌ ಜೆಟ್‌ನ ವಿಮಾನವು ಜೈವಿಕ ಇಂಧನ ಬಳಸಿ ಡೆಹರಾಡೂನ್ ನಗರದ ಮೇಲೆ ಹತ್ತು ನಿಮಿಷ ಹಾರಾಟದ ಪರೀಕ್ಷೆ ನಡೆಸಿ ನಿಲ್ದಾಣಕ್ಕೆ ಮರಳಲಿದೆ. ಪರೀಕ್ಷೆಯಲ್ಲಿ ಯಾವುದೇ ಸಮಸ್ಯೆ ಕಂಡುಬರದಿದ್ದರೆ ವಿಮಾನವು ದೆಹಲಿಯತ್ತ ಪ್ರಯಾಣ ಬೆಳೆಸಲಿದೆ.

ಮೊದಲ ಯಾನದ ಯಶಸ್ಸಿನ ಸಂಭ್ರಮಾಚರಣೆಗೆ ಸಾಕ್ಷಿ

ಮೊದಲ ಯಾನದ ಯಶಸ್ಸಿನ ಸಂಭ್ರಮಾಚರಣೆಗೆ ಸಾಕ್ಷಿ

ಕೇಂದ್ರ ವಿಮಾನಯಾನ ಸಚಿವ ಸುರೇಶ್ ಪ್ರಭು, ರಸ್ತೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷ್ ವರ್ಧನ್ ಹಾಗೂ ಇಂಧನ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಮೊದಲ ಯಾನದ ಯಶಸ್ಸಿನ ಸಂಭ್ರಮಾಚರಣೆಗೆ ಸಾಕ್ಷಿಯಾದರು.

ಜೈವಿಕ ಇಂಧನ ಬಳಕೆ

ಜೈವಿಕ ಇಂಧನ ಬಳಕೆ

ವಿಮಾನವು ಶೇ 75ರಷ್ಟು ಏರ್ ಟರ್ಬೈನ್ ಇಂಧನ (ಎಟಿಎಫ್), ಶೇ25ರಷ್ಟು ಜೈವಿಕ ಇಂಧನ ಹೊಂದಿದೆ. ಡೆಹ್ರಾಡೋನ್ ನ ಸಿಎಸ್ ಐಆರ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಪ್ ಪೆಟ್ರೋಲಿಯಂ ಸಂಸ್ಥೆ, ಜತ್ರೋಪಾ ಬೆಳೆಯಿಂದ ಉತ್ಪಾದಿಸಿರುವ ಇಂಧನವನ್ನು ಬಳಸಲಾಗಿದೆ ಎಂದು ಸ್ಪೈಸ್ ಜೆಟ್ ಹೇಳಿದೆ.

ಇಂಧನದ ಮೇಲೆ ಅವಲಂಬನೆ

ಇಂಧನದ ಮೇಲೆ ಅವಲಂಬನೆ

ಹಾಲಿ ಬಳಕೆಯಲ್ಲಿರುವ ಇಂಧನದ ಮೇಲೆ ಅವಲಂಬನೆಯನ್ನು ಶೇ 50ರಷ್ಟು ಕಡಿಮೆ ಮಾಡಲಿದೆ. ಇದರಿಂದ ಪ್ರಯಾಣ ದರವು ತಗ್ಗಲಿದೆ ಎಂದು ಸ್ಪೈಸ್ಟ್ ಜೆಟ್ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ಅವರು ಹೇಳಿದ್ದಾರೆ.

English summary
SpiceJet on Monday operated India’s first test flight powered by biojet fuel, according to the airline. A Bombardier Q400 aircraft, partially using biojet fuel, took off from Dehradun and landed at the airport in the national capital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X