ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿಗೆ ವಿಶೇಷ ಭದ್ರತೆಯ ಅವಶ್ಯಕತೆಯಿಲ್ಲ, ಶಿಂಧೆ

|
Google Oneindia Kannada News

ನವದೆಹಲಿ, ಅ 29: ಪಾಟ್ನಾದಲ್ಲಿ ನಡೆದ ಹೂಂಕಾರ್ ಸಭೆಯಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಪೋಟದ ನಂತರ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಭದ್ರತೆಯ ಬಗ್ಗೆ ದೇಶಾದ್ಯಂತ ಭಾರೀ ಚರ್ಚೆಗಳು ಆರಂಭವಾಗಿದ್ದವು.

ಈ ಮಧ್ಯೆ, ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, ನರೇಂದ್ರ ಮೋದಿಗೆ ಎಸ್ಪಿಜಿ (Special Protection Group) ಭದ್ರತೆಯ ಅವಶ್ಯಕತೆಯಿಲ್ಲ. ಮೋದಿಗೆ ಗೃಹ ಸಚಿವಾಲಯದಿಂದ ಏನು ಭದ್ರತೆ ನೀಡಬೇಕೋ ಅದನ್ನು ನಾವು ಈಗಾಗಲೇ ನೀಡಿದ್ದೇವೆ ಎಂದಿದ್ದಾರೆ.

SPG protection not required to BJP PM candidate Narendra Modi

ಮೋದಿಗೆ ಈಗ ಎನ್ಎಸ್ಜಿ (National Security Guard) ಭದ್ರತೆ ನೀಡಲಾಗುತ್ತಿದೆ. ಸುಮಾರು 80ರಿಂದ 100 ಕಮಾಂಡೋಗಳು ಮೋದಿ ಭದ್ರತೆಯನ್ನು ನೋಡಿಕೊಳ್ಳುತ್ತಿದ್ದಾರೆ. ಉಗ್ರರ ಹಿಟ್ ಲಿಸ್ಟ್ ನಲ್ಲಿ ಮೋದಿ ಹೆಸರು ಇರುವುದರಿಂದ ಅವರಿಗೆ ಈ ಭದ್ರತೆ ನೀಡಲಾಗುತ್ತಿದೆ ಎಂದು ಶಿಂಧೆ ಹೇಳಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೋಯ್ ಮತ್ತು ತಮಿಳುನಾಡು ಸಿಎಂ ಜಯಲಲಿತಾಗೆ ಕೂಡಾ ಎನ್ಎಸ್ಜಿ ಭದ್ರತೆ ನೀಡಲಾಗುತ್ತಿದೆ.

ಎಸ್ಪಿಜಿ ಭದ್ರತಾ ಸೌಲಭ್ಯ ಸದ್ಯ ಸಿಗುತ್ತಿರುವುದು ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿಗೆ ಮಾತ್ರ.

ಸೆಪ್ಟಂಬರ್ ತಿಂಗಳಲ್ಲಿ ಮೋದಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯೆಂದು ಘೋಷಣೆಯಾದ ನಂತರ ಗುಪ್ತಚರ ಇಲಾಖೆ ಮೋದಿಗೆ ವಿಶೇಷ ಭದ್ರತೆ ನೀಡಬೇಕೆಂದು ಗೃಹ ಸಚಿವಾಲಯಕ್ಕೆ ಸೂಚಿಸಿತ್ತು.

English summary
SPG protection not required to BJP PM candidate Narendra Modi, Union Home Minister Sushil Kumar Shindhe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X