ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯತ್ತ ಮುಖ ಮಾಡಿದ ಮಾಜಿ ಪ್ರಧಾನಿ ಪುತ್ರ ಶೇಖರ್?

|
Google Oneindia Kannada News

ನವದೆಹಲಿ, ಜುಲೈ 15: ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಪುತ್ರ, ಸಮಾಜವಾದಿ ಪಕ್ಷದ ಮುಖಂಡ ನೀರಜ್ ಶೇಖರ್ ಅವರು ಸೋಮವಾರದಂದು ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ರಾಜ್ಯಸಭಾ ಚೇರ್ಮನ್ ಎಂ ವೆಂಕಯ್ಯನಾಯ್ಡು ಅವರು ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ ಎಂಬ ಸುದ್ದಿ ಬಂದಿದೆ.

'ಸ್ವಯಂಪ್ರೇರಣೆಯಿಂದ ನಾನು ರಾಜೀನಾಮೆ ನೀಡುತ್ತಿದ್ದೇನೆ, ಯಾರಿಂದಲೂ ಒತ್ತಡ ಎದುರಿಸುತ್ತಿಲ್ಲ' ಎಂದು ನಾಯ್ಡು ಅವರಿಗೆ ನೀಡಿದ ರಾಜೀನಾಮೆ ಪತ್ರದಲ್ಲಿ ಶೇಖರ್ ಅವರು ಬರೆದಿದ್ದಾರೆ ಎನ್ನಲಾಗಿದೆ.

SP leader Neeraj Shekhar resigns as RS member, may join BJP

ಸಮಾಜವಾದಿ ಪಕ್ಷದ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದ ನೀರಜ್ ಶೇಖರ್ ಅವರು ಭಾರತೀಯ ಜನತಾ ಪಕ್ಷ ಸೇರುವ ಸಾಧ್ಯತೆ ಕಂಡು ಬಂದಿದೆ.

2008ರಲ್ಲಿ ಬಲ್ಲಿಯಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಮೊದಲ ಬಾರಿಗೆ ಲೋಕಸಭಾ ಸದಸ್ಯರಾದರು. 2014ರ ನವೆಂಬರ್ 26ರಿಂದ ಉತ್ತರಪ್ರದೇಶದಿಂದ ರಾಜ್ಯಸಭೆ ಸದಸ್ಯರಾಗಿರುವ ಶೇಖರ್ ಅವರ ನಿವೃತ್ತ ಅವಧಿ ನವೆಂಬರ್ 25, 2020ಕ್ಕೆ ಮುಕ್ತಾಯವಾಗಲಿದೆ.

English summary
Samajwadi Party leader Neeraj Shekhar on Monday resigned as member of the Rajya Sabha and his resignation was accepted by Chairman M Venkaiah Naidu, sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X