ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಇಡಿ ಮುಂದೆ ಹಾಜರಾಗಲಿರುವ ಸೋನಿಯಾ ಗಾಂಧಿ, ದೆಹಲಿಯಲ್ಲಿ ಭಾರಿ ಬಂದೋಬಸ್ತ್

|
Google Oneindia Kannada News

ನವದೆಹಲಿ, ಜುಲೈ 26: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಪಟ್ಟಂತೆ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಮಂಗಳವಾರ ಮತ್ತೆ ವಿಚಾರಣೆ ನಡೆಸಲಿದೆ. ಮಧ್ಯಾಹ್ನದ ವೇಳೆಗೆ ಅವರು ವಿಚಾರಣೆಗಾಗಿ ಇ.ಡಿ ಕಚೇರಿಗೆ ಆಗಮಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರವೇ ಸೋನಿಯಾ ಗಾಂಧಿ ವಿಚಾರಣೆ ಎದುರಿಸಬೇಕಿತ್ತು ಆದರೆ ಅದನ್ನು ಜಾರಿ ನಿರ್ದೇಶನಾಲಯ ಒಂದು ದಿನ ಮುಂದೂಡಿತ್ತು. ಜುಲೈ 21ರಂದು ಸೋನಿಯಾ ಗಾಂಧಿ ಅವರನ್ನು ಎರಡು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿತ್ತು. ಇ.ಡಿ ಯ 28 ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ ಎಂದು ವರದಿಯಾಗಿದೆ.

ಅಧಿಕಾರಿಗಳ ಪ್ರಕಾರ, ಸೋನಿಯಾ ಗಾಂಧಿ ತನಿಖೆಗೆ ಹಾಜರಾದ ಮೊದಲ ದಿನದಂತೆಯೇ, ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸಲಾಗುವುದು. ವೈದ್ಯರು ಮತ್ತು ಆಂಬ್ಯುಲೆನ್ಸ್ ನಿಯೋಜನೆ, ಸೇರಿದಂತೆ ತನಿಖೆ ನಡೆಸುವ ಅಧಿಕಾರಿಗಳದ್ದು ಕೂಡ ಕೋವಿಡ್ ನೆಗೆಟಿವ್ ವರದಿ ಪಡೆಯಲಾಗುವುದು. ವಿಚಾರಣೆ ವೇಳೆ ಸೋನಿಯಾ ಗಾಂಧಿ ಮತ್ತು ತನಿಖಾಧಿಕಾರಿಗಳ ನಡುವೆ ಸೂಕ್ತ ಅಂತರ ಕಾಪಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.

ಇಡಿ ವಿಚಾರಣೆಗೆ ಸೋನಿಯಾ ಗಾಂಧಿ; ರಸ್ತೆಗಿಳಿಯಲು ಕಾಂಗ್ರೆಸ್ ಅಣಿಇಡಿ ವಿಚಾರಣೆಗೆ ಸೋನಿಯಾ ಗಾಂಧಿ; ರಸ್ತೆಗಿಳಿಯಲು ಕಾಂಗ್ರೆಸ್ ಅಣಿ

ಸೋನಿಯಾ ಗಾಂಧಿ ಜೊತೆ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಹುಲ್ ಗಾಂಧಿ ಕೂಡ ಮಂಗಳವಾರ ಇ.ಡಿ ಕಚೇರಿಗೆ ಬರುವ ನಿರೀಕ್ಷೆಯಿದೆ.

 ರಾಜ್‌ಘಾಟ್‌ನಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ ಪೊಲೀಸರು

ರಾಜ್‌ಘಾಟ್‌ನಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ ಪೊಲೀಸರು

ದೆಹಲಿ ಪೊಲೀಸರು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್‌ಎಎಫ್) ಸಿಬ್ಬಂದಿ ಸೇರಿದಂತೆ ಬೃಹತ್ ಪಡೆಗಳನ್ನು ನಿಯೋಜಿಸುವ ನಿರೀಕ್ಷೆಯಿದೆ ಮತ್ತು ಸೋನಿಯಾ ಗಾಂಧಿ ಅವರ ನಿವಾಸ ಮತ್ತು ಇಡಿ ಕಚೇರಿ ನಡುವೆ ಸಂಪೂರ್ಣ ಬ್ಯಾರಿಕೇಡ್‌ಗಳನ್ನು ಹಾಕುವ ನಿರೀಕ್ಷೆಯಿದೆ.

ಮಹಾತ್ಮಾ ಗಾಂಧಿಯವರ ಸ್ಮಾರಕ ರಾಜ್ ಘಾಟ್‌ನಲ್ಲಿ 'ಸತ್ಯಾಗ್ರಹ' ನಡೆಸಲು ಅನುಮತಿ ನೀಡುವಂತೆ ಕಾಂಗ್ರೆಸ್‌ನ ಮನವಿಯನ್ನು ದೆಹಲಿ ಪೊಲೀಸರು ತಿರಸ್ಕರಿಸಿದ್ದಾರೆ ಮತ್ತು ಪ್ರದೇಶದಲ್ಲಿ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆ ವಿಧಿಸಿದ್ದಾರೆ.

 ಸೋನಿಯಾಗೆ ಮತ್ತೆ ಇಡಿ ಸಮನ್ಸ್‌; ಕಾಂಗ್ರೆಸ್‌ನಿಂದ ಮೌನ ಸತ್ಯಾಗ್ರಹ ಸೋನಿಯಾಗೆ ಮತ್ತೆ ಇಡಿ ಸಮನ್ಸ್‌; ಕಾಂಗ್ರೆಸ್‌ನಿಂದ ಮೌನ ಸತ್ಯಾಗ್ರಹ

 ಬಿಜೆಪಿ ವಿರುದ್ಧ ಕಾಂಗ್ರೆಸ್ ಆರೋಪ

ಬಿಜೆಪಿ ವಿರುದ್ಧ ಕಾಂಗ್ರೆಸ್ ಆರೋಪ

ಸೋನಿಯಾ ಗಾಂಧಿ ಅವರನ್ನು ಇ.ಡಿ ವಿಚಾರಣೆ ನಡೆಸುವ ಕ್ರಮವನ್ನು ಕಾಂಗ್ರೆಸ್ ವಿರೋಧಿಸಿದೆ. ರಾಜಕೀಯ ಸೇಡಿಗಾಗಿ ಬಿಜೆಪಿ ಇ.ಡಿ ಯನ್ನು ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದೆ.

ವಿಚಾರಣೆ ನಡೆಸುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ದೆಹಲಿ ಸೇರಿದಂತೆ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಿದ್ದರು. ಮಂಗಳವಾರ ಕೂಡ ಕಾಂಗ್ರೆಸ್ ಪ್ರತಿಭಟನೆಗೆ ಸಜ್ಜಾಗಿದೆ. ಆದರೆ ಈ ಭಾರಿ ಮೌನ ಪ್ರತಿಭಟನೆ ಮಾಡುವುದಾಗಿ ಅದು ತಿಳಿಸಿದೆ.

 ಪ್ರತಿಭಟಿಸುವ ಸ್ವಾತಂತ್ಯ್ರವೂ ಇಲ್ಲವೇ?

ಪ್ರತಿಭಟಿಸುವ ಸ್ವಾತಂತ್ಯ್ರವೂ ಇಲ್ಲವೇ?

"ನಾವು ರಾಜ್ ಘಾಟ್ ಮುಂದೆ ಶಾಂತಿಯುತ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ. ನಾವು ಅನುಮತಿಗಾಗಿ ದೆಹಲಿ ಪೊಲೀಸರಿಗೆ ಅರ್ಜಿ ಸಲ್ಲಿಸಿದ್ದೇವೆ ಆದರೆ ಅವರು ಅನುಮತಿ ನೀಡಲು ನಿರಾಕರಿಸಿದರು. ಇದು ದುರದೃಷ್ಟಕರ ಮತ್ತು ಖಂಡನೀಯ. ಸರ್ಕಾರವು ವಿರೋಧದ ಧ್ವನಿಯನ್ನು ಹತ್ತಿಕ್ಕುತ್ತಿದೆ" ಎಂದು ಕಾಂಗ್ರೆಸ್ ಸಂಸದ ಕೆ.ಸಿ ವೇಣುಗೋಪಾಲ್ ಹೇಳಿದ್ದಾರೆ.

"ನಮ್ಮ ಸ್ವಾತಂತ್ರ್ಯ ಚಳುವಳಿಯು ಗಾಂಧೀಜಿಯವರ ಬೋಧನೆಗಳಾದ ಅಹಿಂಸೆ ಮತ್ತು ಸತ್ಯಾಗ್ರಹದ ತತ್ವಗಳ ಮೇಲೆ ಹೋರಾಡಲ್ಪಟ್ಟಿದೆ. ಈ ಆದರ್ಶಗಳು ಎಲ್ಲೆಗಳನ್ನು ಮೀರಿ ಅನೇಕ ತುಳಿತಕ್ಕೊಳಗಾದವರಿಗೆ ಭರವಸೆಯ ಬೆಳಕಾಯಿತು. ಮೋದಿ ಸರ್ಕಾರವು ಗಾಂಧೀಜಿಯ ಸ್ಮಾರಕದ ಸ್ಥಳದಲ್ಲಿ ನಮ್ಮ ಸತ್ಯಾಗ್ರಹವನ್ನು ಹತ್ತಿಕ್ಕಲು ಸೆಕ್ಷನ್ 144 ಅನ್ನು ವಿಧಿಸುತ್ತದೆ." ಎಂದು ಟ್ವೀಟ್ ಮಾಡಿದ್ದಾರೆ
"ರಾಜಕೀಯ ಸೇಡಿಗಾಗಿ ಏಜೆನ್ಸಿಗಳನ್ನು ದುರುಪಯೋಗಪಡಿಸಿಕೊಳ್ಳುವುದರ ವಿರುದ್ಧ ಕಾಂಗ್ರೆಸ್ ಸಂಸದರು ಮತ್ತು ಸಿಡಬ್ಲ್ಯೂಸಿ ಸದಸ್ಯರು ನಡೆಸುತ್ತಿರುವ ಶಾಂತಿಯುತ ಸತ್ಯಾಗ್ರಹವನ್ನು ನಿಲ್ಲಿಸಲು ಈಗ ಅವರು ಗಾಂಧೀಜಿಯವರ ಸಮಾಧಿಯಾದ ರಾಜ್ ಘಾಟ್ ಸುತ್ತಲೂ ಸೆಕ್ಷನ್ 144 ಅನ್ನು ವಿಧಿಸಿದ್ದಾರೆ. ಇದು ಖಂಡನೀಯ, ಅವರು ನಮ್ಮ ಧ್ವನಿಯನ್ನು ಹತ್ತಿಕ್ಕಲು ಬಲಪ್ರಯೋಗಕ್ಕೆ ಮುಂದಾಗಿದ್ದಾರೆ ಆದರೆ ಅದು ಸಾಧ್ಯವಿಲ್ಲ" ಎಂದು ಅವರು ಹೇಳಿದ್ದಾರೆ.

 ಹಲವು ನಾಯಕರನ್ನು ಪ್ರಶ್ನಿಸಿರುವ ಇ.ಡಿ

ಹಲವು ನಾಯಕರನ್ನು ಪ್ರಶ್ನಿಸಿರುವ ಇ.ಡಿ

ಮನಿ ಲಾಂಡರಿಂಗ್ ತಡೆ ಕಾಯ್ದೆಯ ಕ್ರಿಮಿನಲ್ ನಿಬಂಧನೆಗಳ ಅಡಿಯಲ್ಲಿ ಕಳೆದ ವರ್ಷ ಇಡಿ ಹೊಸ ಪ್ರಕರಣವನ್ನು ದಾಖಲಿಸಿತು, ಇದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ವಿರುದ್ಧ ವಿಚಾರಣೆ ನಡೆಸಲು ಕಾರಣವಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯು ಏಪ್ರಿಲ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಪವನ್ ಬನ್ಸಾಲ್ ಅವರನ್ನು ಪ್ರಶ್ನಿಸಿತ್ತು.

ಯಾವುದೇ ತಪ್ಪು ಮಾಡಿಲ್ಲ ಮತ್ತು ಯಂಗ್ ಇಂಡಿಯನ್ ಕಂಪನಿಯ ಕಾಯಿದೆಯ ಸೆಕ್ಷನ್ 25 ರ ಅಡಿಯಲ್ಲಿ ಸ್ಥಾಪಿಸಲಾದ "ಲಾಭಕ್ಕಾಗಿ ಅಲ್ಲ" ಕಂಪನಿಯಾಗಿದೆ ಹೀಗಾಗಿ ಯಾವುದೇ ಮನಿ ಲಾಂಡರಿಂಗ್ ನಡೆದಿಲ್ಲ ಎಂದು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ.

ಜಾರಿ ನಿರ್ದೇಶನಾಲಯದ ಪ್ರಕಾರ, ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (AJL) ಸುಮಾರು 800 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದೆ ಮತ್ತು ಯಂಗ್ ಇಂಡಿಯನ್‌ನಂತಹ ಲಾಭರಹಿತ ಕಂಪನಿಯು ತನ್ನ ಭೂಮಿ ಮತ್ತು ಕಟ್ಟಡ ಆಸ್ತಿಗಳಿಗೆ ಬಾಡಿಗೆಗೆ ನೀಡುವ ವಾಣಿಜ್ಯ ಚಟುವಟಿಕೆಗಳಲ್ಲಿ ಹೇಗೆ ತೊಡಗಿಸಿಕೊಂಡಿದೆ ಎಂಬುದನ್ನು ತಿಳಿಯಲು ಬಯಸುತ್ತಿದೆ.

English summary
The Enforcement Directorate (ED) will question Congress president Sonia Gandhi again on Tuesday as part of the money laundering probe related to the National Herald newspaper. She will arrive at the ED's office for questioning in the afternoon, officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X