ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ 23 ರಂದು ಮಹತ್ವದ ಸಭೆ, ವಿಪಕ್ಷಗಳಿಗೆ ಸೋನಿಯಾ ಗಾಂಧಿ ಆಹ್ವಾನ

|
Google Oneindia Kannada News

ನವದೆಹಲಿ, ಮೇ 16: ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಮೇ 23 ರಂದು ಮಹತ್ವದ ಸಭೆ ನಡೆಯಲಿದ್ದು, ಅದಕ್ಕಾಗಿ ಬಹುತೇಕ ಎಲ್ಲ ವಿಪಕ್ಷಗಳ ನಾಯಕರನ್ನೂ ಸೋನಿಯಾ ಗಾಂಧಿ ಆಮಂತ್ರಿಸಲಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ದೆಹಲಿಯಲ್ಲಿ ಫಲಿತಾಂಶದ ದಿನವೇ ಈ ಸಭೆ ನಡೆಯಲಿದ್ದು, ಇಡಿ ದೇಶದ ಕುತೂಹಲ ಕೆರಳಿಸಿದೆ. ಈಗಾಗಲೇ ಸೋನಿಯಾ ಗಾಂಧಿ ಅವರು ತಮಿಳುನಾಡಿನ ಡಿಎಂಕೆ ಮುಖಂಡ ಎಂಕೆ ಸ್ಟಾಲಿನ್ ಅವರಿಗೆ ಪತ್ರ ಬರೆದಿದ್ದು, ಜೆಡಿಎಸ್ ಮುಖಂಡ ಎಚ್ ಡಿ ದೇವೇಗೌಡ, ಎನ್ ಸಿಪಿ ಮುಖಂಡ ಶರದ್ ಪವಾರ್, ಉತ್ತರ ಪ್ರದೇಶದದ ಎಸ್ಪಿ-ಬಿಎಸ್ಪಿ ಮೈತ್ರಿಕೂಟದ ಮುಖಂಡರಾದ ಮಾಯಾವತಿ ಮತ್ತು ಅಖಿಲೇಶ್ ಯಾದವ್ ಅವರಿಗೆ ಪತ್ರ ಬರೆದಿದ್ದಾರೆ.

ಪ್ರಧಾನಿ ಪಟ್ಟ ಬೇಕಿಲ್ಲ ಎಂದು ಸೋಲೊಪ್ಪಿಕೊಂಡಿತೇ ಕಾಂಗ್ರೆಸ್? ಪ್ರಧಾನಿ ಪಟ್ಟ ಬೇಕಿಲ್ಲ ಎಂದು ಸೋಲೊಪ್ಪಿಕೊಂಡಿತೇ ಕಾಂಗ್ರೆಸ್?

ಇದಕ್ಕೂ ಮುನ್ನ ಮೇ 21 ರಂದು ವಿಪಕ್ಷಗಳೆಲ್ಲವೂ ಸೇರಿ ಸಭೆ ನಡೆಸಿ, ಮಹಾಮೈತ್ರಿಕೂಟದ ಬಗ್ಗೆ ಮತ್ತು ಪ್ರಧಾನಿ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುತ್ತವೆ ಎನ್ನಲಾಗಿತ್ತು. ಆದರೆ ಇದೀಗ ಮೇ 23 ರಂದು ವಿಪಕ್ಷಗಳ ಸಭೆ ನಿಗದಿಯಾಗಿದೆ.

Sonia Gandhi invites opposition leaders for a meeting on May 23

ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಈ ಸಭೆಯಲ್ಲಿ ಹಾಜರಿರುವುದು ಖಚಿತ. ಆದರೆ ಅವರೊಟ್ಟಿಗೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್, ವೈಎಸ್ ಆರ್ ಕಅಂಗ್ರೆಸ್ ನ ಜಗನ್ಮೋಹನ್ ರೆಡ್ಡಿ, ಒಡಿಶಾ ಮುಖ್ಯಮಂತ್ರಿ,ಬಿಜೆಡಿ ಮುಖಂಡ ನವೀನ್ ಪಟ್ನಾಯಕ್ ಅವರನ್ನೂ ಸೋನಿಯಾ ಗಾಂಧಿ ಆಮಂತ್ರಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಜೊತೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರನ್ನೂ ಕಾಂಗ್ರೆಸ್ ಆಮಂತ್ರಿಸಲಿದೆ.

ಮೇ 21 ರಂದು ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ, ಏನದು?ಮೇ 21 ರಂದು ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ, ಏನದು?

"ಕಾಂಗ್ರೆಸ್ ನ ಮೊದಲ ಆದ್ಯತೆ ಮೋದಿ ಸರ್ಕಾರವನ್ನು ಕಿತ್ತೆಸೆಯುವುದು. ಪ್ರಧಾನಿ ಪಟ್ಟ ನಮ್ಮ ಅಭ್ಯರ್ಥಿಗೇ ಬೇಕೆಂದೇನಿಲ್ಲ" ಎಂದು ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಹೇಳಿಕೆ ನೀಡಿರುವುದರಿಂದ ಈ ಸಭೆ ಅತ್ಯಂತ ಕುತೂಲ ಕೆರಳಿಸಿದೆ.

English summary
UPA chairperson Sonia Gandhi has invited all opposiotion party leader for a meeting on May 23rd in Delhi. Opposition leader will decide who will be PM candidate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X