ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯ ಮಾಜಿ ಕಾನೂನು ಸಚಿವ ಪೊಲೀಸರ ಎದುರು ಶರಣು

By Mahesh
|
Google Oneindia Kannada News

ನವದೆಹಲಿ, ಸೆ. 16: ಕೌಟುಂಬಿಕ ಕಲಹ, ಪತ್ನಿ ಮೇಲೆ ಹಲ್ಲೆ ಆರೋಪ ಹೊತ್ತಿರುವ ದೆಹಲಿಯ ಮಾಜಿ ಕಾನೂನು ಸಚಿವ ಸೋಮನಾಥ್ ಭಾರ್ತಿ ಅವರು ಪೊಲೀಸರ ಎದುರು ಶರಣಾಗಿರುವ ಸುದ್ದಿ ಬಂದಿದೆ.

ಒಂದು ವೇಳೆ ವಿಚಾರಣೆಗಾಗಿ ಸೋಮನಾಥ್ ಭಾರ್ತಿ ಅವರನ್ನು ಬಂಧಿಸಿದರೆ ಕಳೆದ ನಾಲ್ಕು ತಿಂಗಳಲ್ಲಿ ಆಮ್ ಆದ್ಮಿ ಪಕ್ಷದ ನಾಲ್ಕನೇ ಶಾಸಕರ ಬಂಧನ ಇದಾಗಲಿದೆ. [ಸೋಮನಾಥ್ ಭಾರ್ತಿ ಪ್ರಕರಣಕ್ಕೆ ಟ್ವೀಟ್ ಪ್ರತಿಕ್ರಿಯೆ]

ದೆಹಲಿಯ ಮಾಳ್ವೀಯ ನಗರದ ಶಾಸಕ ಸೋಮನಾಥ್ ಭಾರ್ತಿ ಅವರು ಬುಧವಾರ ಪೊಲೀಸರ ಎದುರು ಶರಣಾಗಿ, ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದಾರೆ.

Somnath Bharti surrenders before Delhi Police

ಪತ್ನಿ ಸಲ್ಲಿಸಿದ್ದ ದೂರಿನ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದ ಭಾರ್ತಿ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಮಂಗಳವಾರ ವಜಾಗೊಂಡಿತ್ತು. ಬಂಧನ ಭೀತಿ ಎದುರಿಸುತ್ತಿದ್ದ ಭಾರ್ತಿ ಅವರು ದೆಹಲಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿರುವ ಸುದ್ದಿ ಬಂದಿದೆ. [ಆಮ್ ಆದ್ಮಿ ಪಕ್ಷದ ಗ್ರಹಗತಿ ಯಾಕೋ ಸರಿಯಿದ್ದಂತಿಲ್ಲ]

ಇತ್ತೀಚೆಗೆ ಎಎಪಿ ಶಾಸಕರಾದ ಮಾಜಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮಾರ್, ಮನೋಜ್ ಕುಮಾರ್, ಸುರೀಂದರ್ ಸಿಂಗ್ ಅವರು ದೆಹಲಿ ಪೊಲೀಸರಿಂದ ಬಂಧನಕ್ಕೊಳಪಟ್ಟಿದ್ದರು.

ಆಪ್‌ನ ಮೊದಲ 49 ದಿನಗಳ ಸರಕಾರದಲ್ಲಿ ಭಾರ್ತಿ ಕಾನೂನು ಸಚಿವರಾಗಿದ್ದು, ಆ ಸಂದರ್ಭದಲ್ಲಿ ತನ್ನ ಮತಕ್ಷೇತ್ರದಲ್ಲಿಯ ವೇಶ್ಯಾವಾಟಿಕೆ ಜಾಲದ ಮೇಲೆ ದಾಳಿ ನಡೆಸುವ ಮೂಲಕ ವಿವಾದಕ್ಕೆ ಗುರಿಯಾಗಿದ್ದರು.

ತನ್ನ ಪತಿ ಸೋಮನಾಥ ಭಾರ್ತಿ 2010ರಿಂದಲೂ ತನಗೆ ಮತ್ತು ಮಕ್ಕಳಿಗೆ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ನೀಡುತ್ತಿದ್ದಾರೆ. ಅವರಿಂದ ಮತ್ತು ಅವರ ಬೆಂಬಲಿಗರಿಂದ ನಿರಂತರ ಬೆದರಿಕೆಗಳಿವೆ. ತನಗೆ ಪತಿಯಿಂದ ವಿಚ್ಛೇದನ ಬೇಕು. ತಾನು ತನ್ನ ಮಕ್ಕಳೊಂದಿಗೆ ಘನತೆಯೊಂದಿಗೆ ಬದುಕಲು ಬಯಸಿದ್ದೇನೆ ಎಂದು ಲಿಪಿಕಾ ಅವರು ದೂರು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Former Delhi law minister Somnath Bharti surrendered before the Delhi Police on Wednesday to join the investigation in a case of domestic violence registered against him by his wife.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X