ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈಲಿಗೆ ಹೋಗೋಕೆ ಭಾರ್ತಿಗೆ ಭಯಾನಾ? ಕೇಜ್ರಿವಾಲ್ ಟ್ವೀಟ್

By Prasad
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 23 : "ಸೋಮನಾಥ್ ಭಾರ್ತಿ ಯಾಕೆ ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ. ಜೈಲಿಗೆ ಹೋಗಲು ಅವರಿಗೇಕೆ ಹೆದರಿಕೆ? ಸೋಮನಾಥ್ ಪೊಲೀಸರಿಗೆ ಶರಣಾಗಲೇಬೇಕು. ಆಮ್ ಆದ್ಮಿ ಪಕ್ಷ ಮತ್ತು ಅವರ ಕುಟುಂಬ ಅವರಿಂದ ಸಾಕಷ್ಟು ಮುಜುಗರ ಅನುಭವಿಸಿದೆ" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್, ಸೋಮನಾಥ್ ಭಾರ್ತಿ ಶರಣಾಗಿ ಪೊಲೀಸರೊಂದಿಗೆ ಸಹಕರಿಸಬೇಕು ಎಂದಿದ್ದಾರೆ. ದೆಹಲಿ ಹೈಕೋರ್ಟ್ ಭಾರ್ತಿ ಅವರ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದ್ದರಿಂದ ಅವರ ಬಂಧನ ಅನಿವಾರ್ಯವಾಗಿದೆ.

ಸೋಮನಾಥ್ ಭಾರ್ತಿ ಅವರ ಹೆಂಡತಿ ಲಿಪಿಕಾ ಮಿತ್ರಾ ಅವರು ತಮ್ಮ ಗಂಡನ ವಿರುದ್ಧ ಕೌಟುಂಬಿಕ ದೌರ್ಜನ್ಯ ಮತ್ತು ಹತ್ಯೆಗೆ ಯತ್ನಿಸಿದ್ದಾರೆಂದು ಆರೋಪಿಸಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದಾರೆ. ಅವರ ವಿರುದ್ಧ ಮಾಡಲಾಗಿರುವ ಆರೋಪಗಳು ಗಂಭೀರವಾಗಿದ್ದರಿಂದ ನಿರೀಕ್ಷಣಾ ಜಾಮೀನು ನೀಡುವುದಿಲ್ಲ ಎಂದು ಕೋರ್ಟ್ ಹೇಳಿದೆ. [ಸೋಮನಾಥ್ ಕಿರುಕುಳದ ಕಥೆ ಬಿಚ್ಚಿಟ್ಟ ಲಿಪಿಕಾ]

Somnath Bharti should surrender, says Arvind Kejriwal

ಸೆಪ್ಟೆಂಬರ್ 17ರವರೆಗೆ ದೆಹಲಿಯ ಮಾಜಿ ಕಾನೂನು ಸಚಿವ ಭಾರ್ತಿ ಅವರನ್ನು ಬಂಧಿಸಬಾರದೆಂದು ಕೋರ್ಟ್ ಆದೇಶಿಸಿತ್ತು. ನಂತರ 22ರವರೆಗೆ ಈ ಆದೇಶವನ್ನು ವಿಸ್ತರಿಸಿತ್ತು. ಆದರೆ, ಕೋರ್ಟ್ ನೀಡಿದ್ದ ರಕ್ಷಣೆಯನ್ನು ಸೋಮನಾಥ್ ಭಾರ್ತಿ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ನಿರೀಕ್ಷಣಾ ಜಾಮೀನು ತಿರಸ್ಕೃತವಾದ ನಂತರ ಪೊಲೀಸರು ಸೋಮನಾಥ್ ಭಾರ್ತಿ ಅವರ ಕಚೇರಿ ಮತ್ತು ಮನೆಯ ಮೇಲೆ ಮಂಗಳವಾರ ದಾಳಿ ಮಾಡಿದ್ದರು. ಆದರೆ, ಎರಡು ಸ್ಥಳಗಳಲ್ಲಿಯೂ ಅವರು ಪತ್ತೆಯಾಗಿಲ್ಲ, ತಲೆಮರೆಸಿಕೊಂಡಿದ್ದಾರೆ. ಈ ನಡುವೆ, ಭಾರ್ತಿ ಅವರ ಕಾರ್ಯದರ್ಶಿ ಮತ್ತು ಸಹೋದರನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

English summary
Aam Admi Party leader and chief minister of Delhi Arvind Kejriwal has tweeted that former Law minister Somnath Bharti should surrender and avoid causing embarassment to the party. Kejriwal has asked why Bharti is running away from police and why is he afraid to go to jail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X