• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೇ 3ರ ನಂತರ ಯಾವ್ಯಾವ ರಾಜ್ಯಗಳಲ್ಲಿ ಲಾಕ್‌ಡೌನ್‌ ವಿಸ್ತರಣೆ ಆಗುತ್ತೆ?

|

ದೆಹಲಿ, ಏಪ್ರಿಲ್ 26: ಕೊರೊನಾ ವಿರುದ್ಧ ಹೋರಾಡಲು ಸಲುವಾಗಿ ಜಾರಿ ಮಾಡಿದ್ದ ಎರಡನೇ ಹಂತದ ಲಾಕ್‌ಡೌನ್‌ ಅವಧಿ ಮುಗಿಯುತ್ತಾ ಬರ್ತಿದೆ. ಮೇ 3ರ ಬಳಿಕ ಮತ್ತೆ ಲಾಕ್‌ಡೌನ್‌ ವಿಸ್ತರಣೆ ಆಗುತ್ತಾ ಅಥವಾ ಇಲ್ಲಿಗೆ ಲಾಕ್‌ಡೌನ್‌ ಮುಗಿಯುತ್ತಾ ಎಂಬ ಚರ್ಚೆ ಈಗ ಆರಂಭವಾಗಿದೆ.

   ಲಾಕ್ ಡೌನ್ ಬಗ್ಗೆ ಪ್ರಧಾನಿ ಮೋದಿ ಜೊತೆ ಯಡಿಯೂರಪ್ಪ ಮಹತ್ವದ ಚರ್ಚೆ | Modi Video conference

   ಇದೆಕ್ಕೆಲ್ಲಾ ಸ್ಪಷ್ಟ ಉತ್ತರ ದೇಶದ ಪ್ರಧಾನಿ ನರೇಂದ್ರ ಮೋದಿ ನೀಡಲಿದ್ದಾರೆ. ಸೋಮವಾರ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮೋದಿ ವಿಡಿಯೋ ಕಾನ್ಪೆರೆನ್ಸ್ ನಡೆಸುವ ಸಾಧ್ಯತೆ ಇದೆ. ಮೇ 3ರ ಬಳಿಕ ಲಾಕ್‌ಡೌನ್‌ ವಿಸ್ತರಿಸಬೇಕು ಅಥವಾ ತೆರವುಗೊಳಿಸಬೇಕು ಎಂದು ಚರ್ಚಿಸಿ ಸಲಹೆ ಪಡೆಯಲಿದ್ದಾರೆ.

   ವಿಶ್ವಾದ್ಯಂತ ಕೊರೊನಾಗೆ 2 ಲಕ್ಷ ಸಾವು, ಟಾಪ್ 5 ದೇಶಗಳ ಪಟ್ಟಿ ಇಲ್ಲಿದೆ

   ರಾಜ್ಯದ ಮುಖ್ಯಮಂತ್ರಿಗಳ ಜೊತೆಗಿನ ಪ್ರಧಾನಿ ಮೋದಿ ಚರ್ಚೆಗೂ ಮುಂಚೆಯೇ ಕೆಲವು ರಾಜ್ಯಗಳ ನಿರ್ಧಾರ ಹೊರಬಿದ್ದಿದೆ. ಮೇ 3ರ ಬಳಿಕ ಏನು ಎಂಬುದು ಈಗಾಗಲೇ ನಿರ್ಧಾರವಾಗಿದೆ. ಹಾಗಿದ್ರೆ, ಎರಡನೇ ಹಂತದ ಲಾಕ್‌ಡೌನ್‌ ಮುಗಿಯುತ್ತಿದ್ದಂತೆ ಯಾವ್ಯಾವ ರಾಜ್ಯಗಳಲ್ಲಿ ಲಾಕ್‌ಡೌನ್‌ ವಿಸ್ತರಣೆಯಾಗುತ್ತೆ, ಯಾವ ರಾಜ್ಯಗಳಲ್ಲಿ ತೆರವುಗೊಳ್ಳುತ್ತೆ ಎಂದು ತಿಳಿಯಲು ಮುಂದೆ ಓದಿ...

   ತೆಲಂಗಾಣದಲ್ಲಿ ವಿಸ್ತರಣೆ

   ತೆಲಂಗಾಣದಲ್ಲಿ ವಿಸ್ತರಣೆ

   ಮೇ 3ರ ಬಳಿಕ ಲಾಕ್‌ಡೌನ್‌ ವಿಸ್ತರಣೆ ಮಾಡಿಕೊಂಡಿರುವ ಮೊದಲ ರಾಜ್ಯ ತೆಲಂಗಾಣ. ಮೇ 7ರ ತನಕ ರಾಜ್ಯದಲ್ಲಿ ಲಾಕ್‌ಡೌನ್‌ ವಿಸ್ತರಿಸಲಾಗಿದೆ ಎಂದು ಮುಖ್ಯಮಂತ್ರಿ ಕೆಸಿ ಚಂದ್ರಶೇಖರ್ ರಾವ್ ಹೇಳಿದ್ದಾರೆ. ಮೇ 5 ರಂದು ಲಾಕ್‌ಡೌನ್‌ ಕುರಿತು ಮತ್ತೊಮ್ಮೆ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ. ಸದ್ಯ ರಾಜ್ಯದಲ್ಲಿರುವ ಸ್ಥಿತಿ 7ನೇ ತಾರೀಖಿನವರೆಗೂ ಮುಂದುವರಿಯಲಿದೆ.

   ದೆಹಲಿಯಲ್ಲಿ ಲಾಕ್‌ಡೌನ್‌ ಮುಂದುವರಿಕೆ!

   ದೆಹಲಿಯಲ್ಲಿ ಲಾಕ್‌ಡೌನ್‌ ಮುಂದುವರಿಕೆ!

   ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೇ 3ರ ಬಳಿಕವೂ ಲಾಕ್‌ಡೌನ್‌ ಮುಂದುವರಿಸುವ ಸಾಧ್ಯತೆ ಹೆಚ್ಚಿದೆ. ಈವರೆಗೂ ದೆಹಲಿಯಲ್ಲಿ 2625 ಕೊರೊನಾ ಕೇಸ್ ದಾಖಲಾಗಿದ್ದು, 54 ಜನರು ಸಾವನ್ನಪ್ಪಿದ್ದಾರೆ. ಕೊರೊನಾದಿಂದ ಇನ್ನು ಭಾರತ ಆತಂಕದ ಸ್ಥಿತಿಯಲ್ಲಿದೆ, ದೆಹಲಿಯಲ್ಲಿ ಹೆಚ್ಚು ಕಂಟೈನ್‌ಮೆಂಟ್‌ ಝೋನ್ ಇದೆ. ಲಾಕ್‌ಡೌನ್‌ನಿಂದ ಸಡಿಲಿಕೆ ಮಾಡಿದರೆ ಕಷ್ಟವಾಗಬಹುದು. ಆದ್ದರಿಂದ ಮೇ ಮಧ್ಯದವರೆಗೂ ಲಾಕ್‌ಡೌನ್‌ ಮುಂದುವರಿಸುವುದು ಅಗತ್ಯ ಎಂದು ಆರೋಗ್ಯ ಇಲಾಖೆ ತಿಳಿಸಿದೆ. (ಕಂಟೈನ್‌ಮೆಂಟ್, ಹಾಟ್‌ಸ್ಪಾಟ್‌ ಝೋನ್‌ ಬಿಟ್ಟು ವಿನಾಯಿತಿ ಸಾಧ್ಯತೆ)

   #LifeAfterCorona: ಕೊಳ್ಳುಬಾಕತನ ಕಮ್ಮಿ ಮಾಡಿ, ಪ್ರೀತಿ ಬಾಂಧವ್ಯ ಬೆಳೆಸಿ

   ಮಹಾರಾಷ್ಟ್ರದಲ್ಲಿಯೂ ಮುಂದುವರಿಯುವುದು ಪಕ್ಕಾ

   ಮಹಾರಾಷ್ಟ್ರದಲ್ಲಿಯೂ ಮುಂದುವರಿಯುವುದು ಪಕ್ಕಾ

   ದೇಶದಲ್ಲಿ ಅತಿ ಹೆಚ್ಚು ಸೋಂಕಿಗೆ ಬಲಿಯಾಗಿರುವ ರಾಜ್ಯ ಮಹಾರಾಷ್ಟ್ರ. ಈವರೆಗೂ ರಾಜ್ಯದಲ್ಲಿ 7,628 ಜನರಿಗೆ ಸೋಂಕು ತಗುಲಿದೆ. 320ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಅತಿ ಹೆಚ್ಚು ರೆಡ್‌ಝೋನ್ ಮತ್ತು ಹಾಟ್‌ಸ್ಪಾಟ್‌ ಹೊಂದಿರುವ ಮಹಾರಾಷ್ಟ್ರದಲ್ಲಿ ಲಾಕ್‌ಡೌನ್‌ ಮುಂದುವರಿಯವುದು ಬಹುತೇಕ ಪಕ್ಕಾ ಎನ್ನಲಾಗಿದೆ. ಸದ್ಯದ ಮಾಹಿತಿ ಪ್ರಕಾರ, ಮುಂಬೈ ಮತ್ತು ಪುಣೆಯ ಕಂಟೈನ್‌ಮೆಂಟ್‌ ಝೋನ್‌ಗಳಲ್ಲಿ ಮಾತ್ರ ಮೇ 15ರವರೆಗೂ ಲಾಕ್‌ಡೌನ್‌ ವಿಸ್ತರಿಸಲು ಸರ್ಕಾರ ಚಿಂತನೆ ಮಾಡಿದೆ.

   ತಜ್ಞರ ಅಭಿಪ್ರಾಯಕ್ಕೆ ಮಣೆ

   ತಜ್ಞರ ಅಭಿಪ್ರಾಯಕ್ಕೆ ಮಣೆ

   ಪಂಜಾಬ್‌ ರಾಜ್ಯದಲ್ಲಿ ಮೇ 3ರ ಬಳಿಕ ಲಾಕ್‌ಡೌನ್‌ ವಿಸ್ತರಿಸಬೇಕಾ ಎಂಬುದನ್ನು ತಜ್ಞರ ನೀಡುವ ವರದಿ ಮೇಲೆ ನಿರ್ಧಾರವಾಗುತ್ತೆ ಎಂದು ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿದ್ದಾರೆ. ಪಂಜಾಬ್‌ನಲ್ಲಿ 308 ಪ್ರಕರಣ ದಾಖಲಾಗಿದೆ. ಸರ್ಕಾರದ ಎಲ್ಲಾ ಇಲಾಖೆಗಳ ಜೊತೆ ಸಮಾಲೋಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಪಂಜಾಬ್‌ ಆರೋಗ್ಯ ಇಲಾಖೆ ಹೇಳಿದೆ.

   ಕೇಂದ್ರದ ನಿರ್ಧಾರಕ್ಕೆ ಕರ್ನಾಟಕ ಸಿದ್ದ

   ಕೇಂದ್ರದ ನಿರ್ಧಾರಕ್ಕೆ ಕರ್ನಾಟಕ ಸಿದ್ದ

   ಲಾಕ್‌ಡೌನ್‌ಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಈಗಾಗಲೇ ಸಡಿಲಿಕೆ ನೀಡಲಾಗಿದೆ. ಮೇ 3ರ ನಂತರವೂ ಈ ಸಡಿಲಿಕೆ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ. ರೆಡ್‌ ಝೋನ್, ಕಂಟೈನ್‌ಮೆಂಟ್‌ ಹಾಗೂ ಹಾಟ್‌ಸ್ಪಾಟ್‌ ಗಳಲ್ಲಿ ಪ್ರಸ್ತುತದಂತೆ ಲಾಕ್‌ಡೌನ್‌ ಮುಂದುವರಿಸುವ ಚಿಂತನೆ ಇದ್ದು, ಉಳಿದ ಕಡೆ ಮತ್ತಷ್ಟು ಸಡಿಲಿಕೆ ನೀಡುವ ಸಾಧ್ಯತೆ ಇದೆ. ಆದರೆ, ಕೇಂದ್ರ ಸರ್ಕಾರ ನೀಡುವ ನಿರ್ದೇಶನದ ಮೇಲೆ ರಾಜ್ಯ ಸರ್ಕಾರದ ನಿಲುವು ನಿಂತಿದೆ.

   ಕೇಂದ್ರ ಸರ್ಕಾರದ ಆದೇಶಕ್ಕೆ ಮನ್ನಣೆ

   ಕೇಂದ್ರ ಸರ್ಕಾರದ ಆದೇಶಕ್ಕೆ ಮನ್ನಣೆ

   ಕರ್ನಾಟಕದ ಜೊತೆ, ಮಧ್ಯ ಪ್ರದೇಶ್, ಗುಜರಾತ್, ಆಂಧ್ರ ಪ್ರದೇಶ, ತಮಿಳುನಾಡು, ಹಿಮಾಚಲ ಪ್ರದೇಶ, ಕೇರಳ, ಚತ್ತೀಸ್‌ಗಢ, ಒಡಿಶಾ, ರಾಜಸ್ಥಾನ, ಬಿಹಾರ್, ಬೆಂಗಾಲ್ ರಾಜ್ಯಗಳು ಕೂಡ ಕೇಂದ್ರ ಸರ್ಕಾರದ ಆದೇಶಕ್ಕೆ ಮನ್ನಣೆ ನೀಡಲಿದೆ. ಮೋದಿ ಸಲಹೆ ಮತ್ತು ಸಂದೇಶದಂತೆ ಈ ರಾಜ್ಯಗಳು ಲಾಕ್‌ಡೌನ್‌ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲಿದೆ. ಬಹುತೇಕ ಈ ರಾಜ್ಯಗಳು ಲಾಕ್‌ಡೌನ್‌ನಿಂದ ಸಡಿಲಿಕೆ ಎದುರು ನೋಡುತ್ತಿದೆ.

   English summary
   Second stage Lockdown will finish on may 3rd. some states are planning to extend lockdown another 15 days. which states are interested in this.?
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X