ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೊನ್ನೆ ಅಂಕ ಗಳಿಸಿದವರಿಗೂ ಕೊಟ್ಟಿದ್ದಾರೆ ಮೆಡಿಕಲ್ ಸೀಟು

By Manjunatha
|
Google Oneindia Kannada News

ನವ ದೆಹಲಿ, ಜುಲೈ 16: ರಸಾಯನಶಾಸ್ತ್ರ, ಭೌತಶಾಸ್ತ್ರ ವಿಷಯಗಳಲ್ಲಿ ಸೊನ್ನೆ ಅಂಕ ಗಳಿಸಿದ ವಿದ್ಯಾರ್ಥಿ ಮಹಾನುಭಾವರಿಗೂ ಎಂಬಿಬಿಎಸ್ ಸೀಟು ದೊರೆತಿದೆ. ಅವರು ಇನ್ನು ಕೆಲವೇ ವರ್ಷಗಳಲ್ಲಿ ವೈದ್ಯರೂ ಆಗಿ ರೋಗಿಗಳಿಗೆ ಚಿಕಿತ್ಸೆ ನೀಡಲಿದ್ದಾರೆ!

ಹೌದು, 2017ರ ನೀಟ್ (NEET) ಪರೀಕ್ಷೆಯಲ್ಲಿ ಕೆಲವು ವಿಷಯಗಳಲ್ಲಿ ಸೊನ್ನೆ, ಋಣಾತ್ಮಕ ಅಂಕ, ಜೀವಶಾಸ್ತ್ರದಲ್ಲಿ ಸಿಂಗಲ್ ಡಿಜಿಟ್ ಅಂಕ ಪಡೆದವರಿಗೂ ಕೆಲವು ಖಾಸಗಿ ಕಾಲೇಜುಗಳಲ್ಲಿ ವೈದ್ಯಕೀಯ ಸೀಟು ಪ್ರಾಪ್ತಿಯಾಗಿದೆ.

ವೈದ್ಯಕೀಯ ಪರೀಕ್ಷೆ: ಮೈಕ್ರೊ ಬಯಾಲಜಿ ಪ್ರಶ್ನೆ ಪತ್ರಿಕೆ ಸೋರಿಕೆ ವೈದ್ಯಕೀಯ ಪರೀಕ್ಷೆ: ಮೈಕ್ರೊ ಬಯಾಲಜಿ ಪ್ರಶ್ನೆ ಪತ್ರಿಕೆ ಸೋರಿಕೆ

ರಸಾಯನ ಮತ್ತು ಭೌತಶಾಸ್ತ್ರದಲ್ಲಿ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಒಂದಂಕಿಯ ಮಾರ್ಕ್ಸ್‌, ಹಾಗೂ 110 ವಿದ್ಯಾರ್ಥಿಗಳು ಸೊನ್ನೆ ಹಾಗೂ ಋಣಾತ್ಮಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ 2017ರಲ್ಲಿ ಮೆಡಿಕಲ್ ಸೀಟು ನೀಡಿವೆ ಕೆಲವು ಖಾಸಗಿ ಕಾಲೇಜುಗಳು.

Some MBBS students get only 0 marks in NEET exam

ಸೊನ್ನೆ ಅಂಕ ಪಡೆಯುವುದು ಒಬ್ಬ ವಿದ್ಯಾರ್ಥಿಯನ್ನು ಮೆಡಿಕಲ್ ನಂತಹಾ ಅತ್ಯಂತ ಮಹತ್ವದ ಕೋರ್ಸ್‌ಗೆ ಅನರ್ಹ ಮಾಡುವುದಿಲ್ಲ ಎನ್ನುವುದಾದರೆ ನೀಟ್‌ನಂತ ಪರೀಕ್ಷೆಗಳನ್ನು ಏಕೆ ನಡೆಸಬೇಕು ಎಂಬ ಪ್ರಶ್ನೆ ಈಗ ಎದ್ದಿದೆ.

ಸುತ್ತೋಲೆ ಪ್ರಕಾರ ನೀಟ್ ಪರೀಕ್ಷೆಯಲ್ಲಿ ಕನಿಷ್ಠ 50% ಪಡೆದವರು ಮಾತ್ರ ವೈದ್ಯಕೀಯ ಕೋರ್ಸ್‌ ಓದಲು ಅರ್ಹರಾಗುತ್ತಾರೆ. ಆದರೆ ಒಟ್ಟಾರೆ ಅಂಕ 50% ಬಂದು ನಿರ್ದಿಷ್ಟ ವಿಷಯಗಳಲ್ಲಿ ಕಡಿಮೆ ಅಂಕ ಬಂದರೆ ಆತನನ್ನೂ ಕೋರ್ಸ್‌ಗೆ ಪರಿಗಣಿಸಲಾಗುತ್ತಿದೆ. ಇದು ಅಪಾಯಕಾರಿ ಎಂಬುದು ತಜ್ಞರ ಅಭಿಪ್ರಾಯ.

ಸರ್ಕಾರಿ ಮೆಡಿಕಲ್‌ ಸೀಟು ಶುಲ್ಕ ಮೂರು ಪಟ್ಟು ಹೆಚ್ಚಳ ಸರ್ಕಾರಿ ಮೆಡಿಕಲ್‌ ಸೀಟು ಶುಲ್ಕ ಮೂರು ಪಟ್ಟು ಹೆಚ್ಚಳ

ಇಂಗ್ಲಿಷ್ ಪತ್ರಿಕೆಯೊಂದು 1990 ಮೆಡಿಕಲ್ ವಿದ್ಯಾರ್ಥಿಗಳ ಬಗ್ಗೆ ತನಿಖೆ ನಡೆಸಿದರೆ ಅದರಲ್ಲಿ 530 ವಿದ್ಯಾರ್ಥಿಗಳು ನೀಟ್‌ ಪರೀಕ್ಷೆಯಲ್ಲಿ ವಿವಿಧ ವಿಷಯಗಳಲ್ಲಿ ಕೇವಲ ಒಂದಂಕಿ ಮಾರ್ಕ್ಸ್‌ ಪಡೆದಿರುವುದು ಗೊತ್ತಾಗಿದೆ. ಈ 530 ವಿದ್ಯಾರ್ಥಿಗಳಲ್ಲಿ 507 ವಿದ್ಯಾರ್ಥಿಗಳು ಖಾಸಗಿ ಕಾಲೇಜಿನಲ್ಲಿ ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ಪಡೆದಿದ್ದಾರೆ.

ಸೊನ್ನೆ ಅಥವಾ ಋಣಾತ್ಮಕ ಅಂಕ ಗಳಿಸಿದ ಈ ವಿದ್ಯಾರ್ಥಿಗಳು ಟ್ಯೂಷನ್‌ ಫೀಸ್ ಆಗಿ 17 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಕಾಲೇಜುಗಳಿಗೆ ತೆತ್ತಿದ್ದಾರೆ. ಈ ಮೊತ್ತದಲ್ಲಿ ಹಾಸ್ಟೆಲ್, ಬುಕ್ಸ್, ಮೆಸ್, ಲೈಬ್ರರಿ ಇತರೆಗಳನ್ನು ಸೇರಿಸಲಾಗಿಲ್ಲ. ಸೊನ್ನೆ ಅಂಕ ಪಡೆದವರು ವೈದ್ಯರಾದರೆ ರೋಗಿಗಳ ಗತಿ ಏನಾಗಬಹುದು?

English summary
Some students who get only 0 marks or less than that in NEET entrance exam get medical seats in private colleges. This raising question about NEET exam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X