ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶ ರಕ್ಷಣೆಗಾಗಿ ಸೈನಿಕರು ಗಡಿ ದಾಟಲು ಹಿಂಜರಿಯುವುದಿಲ್ಲ: ರಾಜನಾಥ್ ಸಿಂಗ್

|
Google Oneindia Kannada News

ನವದೆಹಲಿ, ಫೆಬ್ರವರಿ 26: ಬಾಲಾಕೋಟ್ ವಾಯುದಾಳಿ ಯಶಸ್ಸಿನ ವರ್ಷಾಚರಣೆಯನ್ನು ಇಂದು ದೇಶದ ವಿವಿಧೆಡೆ ಆಚರಿಸಲಾಗುತ್ತಿದೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ರಕ್ಷಣಾ ಸಚಿವ ರಾಜ್‍ನಾಥ್‍ಸಿಂಗ್ ದೇಶದ ರಕ್ಷಣೆಗಾಗಿ ನಮ್ಮ ಯೋಧರು ಗಡಿ ದಾಟಿ ಉಗ್ರರನ್ನು ಸದೆಬಡಿಯಲು ಹಿಂಜರಿಯುವುದಿಲ್ಲ ಎಂದು ರಕ್ಷಣಾ ಸಚಿವ ರಾಜ್‍ನಾಥ್‍ಸಿಂಗ್ ತಿಳಿಸಿದ್ದಾರೆ.

Recommended Video

Rajnath Singh : our soldiers won't hesitate to cross border to counter terror | Oneindia Kannada

ಪುಲ್ವಾಮಾದಲ್ಲಿ ಸಿಆರ್‍ಪಿಎಫ್‍ನ 40 ಯೋಧರನ್ನು ಹತ್ಯೆ ಮಾಡಿದ ಪಾಕಿಸ್ತಾನಿ ಬೆಂಬಲಿತ ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳಲು ಭಾರತೀಯ ವಾಯುಪಡೆ ನಡೆಸಿದ ಯಶಸ್ವಿ ಬಾಲಾಕೋಟ್ ವೈಮಾನಿಕ ಆಕ್ರಮಣಕ್ಕೆ ಇಂದಿಗೆ ಒಂದು ವರ್ಷ.

"ಭಾರತದ ಒಬ್ಬರೇ ಒಬ್ಬ ಮುಸ್ಲಿಂರನ್ನೂ ಟಚ್ ಮಾಡುವುದಕ್ಕೆ ಆಗೋದಿಲ್ಲ"

ಈ ಸಂದರ್ಭದಲ್ಲಿ ಮಾತನಾಡಿದ ರಾಜ್‌ನಾಥ್ ಸಿಂಗ್ ಬಾಲಾಕೋಟ್ ದಾಳಿಗೆ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯೇ ಕಾರಣ. ಇದಕ್ಕಾಗಿ ನಾನು ಪ್ರಧಾನಿಯವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ. ದೇಶದ ರಕ್ಷಣೆ ವಿಷಯದಲ್ಲಿ ನಾವು ಯಾವುದೇ ರಾಜಿ ಸಂಧಾನ ಮಾಡಿಕೊಳ್ಳುವುದಿಲ್ಲ. ಅಗತ್ಯಬಿದ್ದರೆ ಗಡಿಯನ್ನು ದಾಟಿ ಉಗ್ರರ ಹುಟ್ಟಡಗಿಸಲು ನಮ್ಮ ಯೋಧರು ಹಿಂಜರಿಯುವುದಿಲ್ಲ ಎಂದು ತಿಳಿಸಿದರು.

Soldiers Dont Hesitate To Cross Border To Counter Terror

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಾಲಾಕೋಟ್ ಸೇರಿದಂತೆ ವಿವಿಧೆಡೆ ಜೈಷ್-ಎ- ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಅಡಗುತಾಣಗಳು ಮತ್ತು ತರಬೇತಿ ಶಿಬಿರಗಳ ಮೇಲೆ ಭಾರತೀಯ ಯುದ್ಧವಿಮಾನಗಳು ಇದೇ ದಿನ ಅಂದರೆ ಫೆ.26ರಂದು ಮಿಂಚಿನ ದಾಳಿ ನಡೆಸಿದವು. ಈ ಮಹತ್ವದ ಕಾರ್ಯಾಚರಣೆಯಲ್ಲಿ ಉಗ್ರಗಾಮಿಗಳ ಶಿಬಿರಗಳು, ಶಸ್ತ್ರಾಸ್ತ್ರ ದಾಸ್ತಾನು ಸಂಗ್ರಹಗಳು ನುಚ್ಚುನೂರಾಗಿ ಅನೇಕ ಭಯೋತ್ಪಾದಕರು ಹತರಾಗಿದ್ದರು.

ಭಯೋತ್ಪಾದಕ ಸಂಘಟನೆಗಳು ಮತ್ತು ಉಗ್ರಗಾಮಿಗಳಿಗೆ ನಾವು ನೀಡುತ್ತಿರುವ ಉತ್ತರದ ಧಾಟಿ ಬದಲಾಗಿದೆ.

English summary
Our armed forces now do not hesitate to cross the border to protect the country against the menace, Defence Minister Rajnath Singh said on the first anniversary of the Balakot air strike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X