ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನರ್ಹರನ್ನು ಸಂತೋಷ್ ಮನೆಗೆ ಕರೆದೊಯ್ದ 'ಸೈನಿಕ'

|
Google Oneindia Kannada News

ನವದೆಹಲಿ, ನವೆಂಬರ್ 13: ಶಾಸಕರ ಅನರ್ಹತೆ ಬಗ್ಗೆ ಸುಪ್ರೀಂ ತೀರ್ಪು ನೀಡುತ್ತಿದ್ದಂತೆಯೇ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಎಲ್ಲ ಅನರ್ಹ ಶಾಸಕರನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮನೆಗೆ ಕರೆದುಕೊಂಡು ಹೋಗಿದ್ದಾರೆ.

ನಿನ್ನೆಯಿಂದಲೇ ಅನರ್ಹ ಶಾಸಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಸಂತೋಷ್ ಮನೆಯಲ್ಲಿ ಅನರ್ಹರು ಸಭೆ ಸೇರಿದ್ದಾರೆ.

ಬಿಜೆಪಿ ಸೇರಲು ಮತ್ತು ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆಯಲು ಸಂತೋಷ್ ಅವರ ಮನವೊಲಿಸುವುದು ಅತ್ಯಗತ್ಯ. ಬಿಜೆಪಿ ಹೈಕಮಾಂಡ್ ಮನಗೆಲ್ಲಲು ಇರುವ ದೊಡ್ಡ ಅಡೆತಡೆಯೆಂದರೆ ಅದು ಬಿ.ಎಲ್.ಸಂತೋಷ್ ಎಂಬ ಹೆಬ್ಬಾಗಿಲು.

Disqualified MLAs

ಹೀಗಾಗಿ ಸುಪ್ರೀಂ ತೀರ್ಪು ಹೊರಬೀಳುತ್ತಿದ್ದಂತೆಯೇ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪಕ್ಷದ ಜವಾಬ್ದಾರಿ ಹೆಗಲೇರಿಸಿಕೊಂಡು ಎಲ್ಲ ಅನರ್ಹರನ್ನು ಸಂತೋಷ್ ಮನೆಗೆ ಕರೆತಂದಿದ್ದಾರೆ. ಒಂದು ಕಡೆ ರಮೇಶ ಜಾರಕಿಹೊಳಿ, ಬಿ.ಸಿ.ಪಾಟೀಲ್ ಸೇರಿದಂತೆ ಬಹುತೇಕ ಎಲ್ಲ ಅನರ್ಹರು ಭಾರತೀಯ ಜನತಾ ಪಕ್ಷ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ.

ಪಕ್ಷಾಂತರ ಮಾಡುವ ಶಾಸಕರಿಗೆ ಸುಪ್ರೀಂ ತೀರ್ಪು ದೊಡ್ಡ ಪಾಠ: ಸಿದ್ದರಾಮಯ್ಯಪಕ್ಷಾಂತರ ಮಾಡುವ ಶಾಸಕರಿಗೆ ಸುಪ್ರೀಂ ತೀರ್ಪು ದೊಡ್ಡ ಪಾಠ: ಸಿದ್ದರಾಮಯ್ಯ

ಇಂದು ಸಂಜೆ ನವದೆಹಲಿಯ ಸಂತೋಷ್ ಮನೆಯಲ್ಲಿ ಮಹತ್ತರ ಸಭೆ ನಡೆಯಲಿದ್ದು, ಅಲ್ಲಿ ಬಿಜೆಪಿ ಹೈಕಮಾಂಡ್ ನ ನಿರ್ಧಾರ ಹೊರಬೀಳಲಿದೆ. ಪರಾಜಿತ ಅಭ್ಯರ್ಥಿಗಳ ಮನವೊಲಿಸುವಿಕೆ ಮತ್ತು ಅವರ ಬೆಂಬಲ ಪಡೆಯುವುದರ ಬಗ್ಗೆ ಚರ್ಚೆ ನಡೆಯಲಿದೆ.

ಇಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪನವರು ಎಲ್ಲ ಅನರ್ಹ ಶಾಸಕರಿಗೆ ಟಿಕೆಟ್ ನೀಡಿ ಉಪಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಭರವಸೆ ನೀಡಿದ್ದಾರೆ. ಈಗ ಹೈಕಮಾಂಡ್ ನಿಂದ ಒಪ್ಪಿಗೆ ಸಿಗುವುದಷ್ಟೇ ಬಾಕಿ.

ಸುಪ್ರೀಂ ತೀರ್ಪು; ಶಿವರಾಮ್ ಹೆಬ್ಬಾರ್ ಪತ್ನಿ ಹೇಳಿದ್ದೇನು?ಸುಪ್ರೀಂ ತೀರ್ಪು; ಶಿವರಾಮ್ ಹೆಬ್ಬಾರ್ ಪತ್ನಿ ಹೇಳಿದ್ದೇನು?

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.

'ಬಿ.ಎಲ್. ಸಂತೋಷ್ ಮನೆಯಲ್ಲಿ ಅನರ್ಹ ಶಾಸಕರು': ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ನೇತೃತ್ವದಲ್ಲಿ ಎಲ್ಲ ಅನರ್ಹ ಶಾಸಕರು ಬಿಜೆಪಿ ರಾಷ್ಟ್ರಿಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ನಿವಾಸದಲ್ಲಿ ಬೀಡುಬಿಟ್ಟಿದ್ದಾರೆ. ಸುಪ್ರೀಂ ತೀರ್ಪು ಹೊರಬೀಳುತ್ತಿದ್ದಂತೆಯೇ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪಕ್ಷದ ಜವಾಬ್ದಾರಿ ಹೆಗಲೇರಿಸಿಕೊಂಡು ಎಲ್ಲ ಅನರ್ಹರನ್ನು ಸಂತೋಷ್ ಮನೆಗೆ ಕರೆತಂದಿದ್ದಾರೆ.

English summary
C.P.Yogeshwar called on all disqualified MLAs,taken to BJP National secretary B.L Santosh home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X