ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ವಿಶೇಷ ಪೊಲೀಸ್ ಆಯುಕ್ತರಾಗಿ ಶ್ರೀವಾಸ್ತವ ನೇಮಕ

|
Google Oneindia Kannada News

ನವದೆಹಲಿ, ಫೆಬ್ರವರಿ 28 : ಹಿರಿಯ ಐಪಿಎಸ್ ಅಧಿಕಾರಿ ಎಸ್. ಎನ್. ಶ್ರೀವಾಸ್ತವರನ್ನು ದೆಹಲಿಯ ವಿಶೇಷ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ. ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 42ಕ್ಕೆ ಏರಿಕೆಯಾಗಿದೆ.

ಶುಕ್ರವಾರ ಕೇಂದ್ರ ಗೃಹ ಇಲಾಖೆ ಈ ಕುರಿತು ಆದೇಶ ಹೊರಡಿಸಿದ್ದು, ತಕ್ಷಣ ಅಧಿಕಾರ ವಹಿಸಿಕೊಳ್ಳಬೇಕು ಎಂದು ಸೂಚನೆ ನೀಡಿದೆ. 1985ನೇ ಬ್ಯಾಚ್ ಐಪಿಎಸ್ ಅಧಿಕಾರಿ ಎಸ್. ಎನ್. ಶ್ರೀವಾಸ್ತವ ಅಮೂಲ್ಯ ಪಟ್ನಾಯಕ್ ಅವರ ಸ್ಥಾನಕ್ಕೆ ನೇಮಕಗೊಂಡಿದ್ದಾರೆ.

ದೆಹಲಿ ಹಿಂಸಾಚಾರ: 630 ಮಂದಿ ಬಂಧನ, 123 FIR ಇನ್ನಿತರೆ ಅಂಕಿ-ಅಂಶದೆಹಲಿ ಹಿಂಸಾಚಾರ: 630 ಮಂದಿ ಬಂಧನ, 123 FIR ಇನ್ನಿತರೆ ಅಂಕಿ-ಅಂಶ

ಎಸ್. ಎನ್. ಶ್ರೀವಾಸ್ತವ ಸಿಆರ್‌ಪಿಎಫ್‌ನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಎರಡು ದಿನಗಳ ಹಿಂದೆ ಕೇಂದ್ರ ಸರ್ಕಾರ ಅವರನ್ನು ಬಿಡುಗಡೆಗೊಳಿಸಿತ್ತು. ದೆಹಲಿಯಲ್ಲಿ ಗಲಭೆ ನಡೆದಿದ್ದರಿಂದ ತಕ್ಷಣ ಅವರನ್ನು ವಿಶೇಷ ಆಯುಕ್ತರನ್ನಾಗಿ ನೇಮಿಸಲಾಗಿದೆ.

ದೆಹಲಿ ಹಿಂಸಾಚಾರ ಹತ್ತಿಕ್ಕಲು ಬಂದ ಐಪಿಎಸ್ ಅಧಿಕಾರಿ ಯಾರು? ದೆಹಲಿ ಹಿಂಸಾಚಾರ ಹತ್ತಿಕ್ಕಲು ಬಂದ ಐಪಿಎಸ್ ಅಧಿಕಾರಿ ಯಾರು?

SN Shrivastava Special Police Commissioner Of Delhi

ದೆಹಲಿಯಲ್ಲಿ ಭಾನುವಾರದಿಂದ ನಡೆದ ಗಲಭೆಯಲ್ಲಿ 42 ಜನರು ಮೃತಪಟ್ಟಿದ್ದಾರೆ. ಎಸ್. ಎನ್. ಶ್ರೀವಾಸ್ತವ ದೆಹಲಿಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ವಿಶೇಷ ಪೊಲೀಸ್ ಘಟಕದ ಮುಖ್ಯಸ್ಥರಾಗಿಯೂ ಅವರು ಕೆಲಸ ಮಾಡಿದ್ದಾರೆ.

ದೆಹಲಿ ಹಿಂಸಾಚಾರ ಪೀಡಿತ ಪ್ರದೇಶಕ್ಕೆ ಲೆಫ್ಟಿನೆಂಟ್ ಗವರ್ನರ್ ಭೇಟಿದೆಹಲಿ ಹಿಂಸಾಚಾರ ಪೀಡಿತ ಪ್ರದೇಶಕ್ಕೆ ಲೆಫ್ಟಿನೆಂಟ್ ಗವರ್ನರ್ ಭೇಟಿ

ಮಾಧ್ಯಮಗಳ ಜೊತೆ ಮಾತನಾಡಿದ ಎಸ್. ಎನ್. ಶ್ರೀವಾಸ್ತವ, "ಪೊಲೀಸರಿಂದ ಸೂಕ್ತ ಭದ್ರತೆ ಲಭಿಸುತ್ತದೆ ಎಂಬ ಭಾವನೆ ಜನರಿಗೆ ಮೂಡಿಸುವುದು ನನ್ನ ಪ್ರಮುಖ ಕೆಲಸವಾಗಿದೆ" ಎಂದು ಹೇಳಿದರು.

ಭಾನುವಾರ ಪೌರತ್ವ ತಿದ್ದುಪಡಿ ಪರ-ವಿರೋಧ ಹೋರಾಟಗಾರರ ನಡುವೆ ಈಶಾನ್ಯ ದೆಹಲಿಯಲ್ಲಿ ಘರ್ಷಣೆ ನಡೆದಿತ್ತು. ಬಳಿಕ ಇದು ಹಿಂಸಾಚಾರಕ್ಕೆ ತಿರುಗಿದ್ದು, ವಿವಿಧ ಪ್ರದೇಶಗಳು ಹೊತ್ತಿ ಉರಿದಿದೆ. ಇದುವರೆಗೂ 42 ಜನರು ಮೃತಪಟ್ಟಿದ್ದಾರೆ.

English summary
1985 IPS batch officer S.N.Shrivastava appointed as the special police commissioner of Delhi with immediate effect.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X