ಸ್ಮೃತಿ ಮಗನಿಗಿಂತ ಕೇಜ್ರಿವಾಲ್ ಮಗನಿಗೆ ಸಿಬಿಎಸ್ಇಯಲ್ಲಿ ಹೆಚ್ಚು ಅಂಕ
ನವದೆಹಲಿ, ಮೇ 2:ಕೇಂದ್ರ ಸಚಿವೆ ಸ್ಮೃತಿ ಇರಾನಿ ಪುತ್ರ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪುತ್ರ ಇಬ್ಬರೂ ಸಿಬಿಎಸ್ಇ ಪರೀಕ್ಷೆ ಬರೆದಿದ್ದರು. ಸ್ಮೃತಿ ಇರಾನಿ ಪುತ್ರನಿಗಿಂತ ಕೇಜ್ರಿವಾಲ್ ಪುತ್ರ ಹೆಚ್ಚು ಅಂಕ ಗಳಿಸಿದ್ದಾರೆ.
ಸ್ಮೃತಿ ಇರಾನಿ ಪುತ್ರ ಜೋಹರ್ ಶೇ.94 ಅಂಕ ಗಳಿಸಿದ್ದರೆ ಅರವಿಂದ್ ಕೇಜ್ರಿವಾಲ್ ಪುತ್ರ ಶೇ.96ರಷ್ಟು ಅಂಕಗಳನ್ನು ಪಡೆದಿದ್ದಾರೆ. ಒಟ್ಟು 13 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಸಿಬಿಎಸ್ಇ ಪರೀಕ್ಷೆ ಫಲಿತಾಂಶ ಪ್ರಕಟ, ಹುಡುಗರೇ ಮೇಲುಗೈ
ಸ್ಮೃತಿ ಇರಾನಿ ಈ ಕುರಿತು ಟ್ವೀಟ್ ಮಾಡಿದ್ದು ''ನನ್ನ ಮಗ ಜೋಹರ್ ಅರ್ಥಶಾಸ್ತ್ರದಲ್ಲಿ ಶೇ.94ರಷ್ಟು ಅಂಕಪಡೆದಿದ್ದಾನೆ. ನನ್ನ ಹರ್ಷಕ್ಕೆ ಪಾರವೇ ಇಲ್ಲ'' ಎಂದು ಬರೆದುಕೊಂಡಿದ್ದಾರೆ.
Ok saying it out loud— proud of my son Zohr..not only did he come back with a bronze medal from the World Kempo Championship also scored well in 12 th boards. Best of 4– 91% .. special yahoo for 94% in economics.. Maaf karna ,today I’m just a gloating Mom🙏
— Chowkidar Smriti Z Irani (@smritiirani) May 2, 2019
ಹಂಸಿಕಾ ಶುಕ್ಲ ಹಾಗೂ ಕರೀಷ್ಮಾ ಅರೋರ ಇಬ್ಬರು ವಿದ್ಯಾರ್ಥಿನಿಯರು ದೇಶಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪತ್ನಿ ಸುನಿತಾ ಕೇಜ್ರಿವಾಲ್ ಟ್ವೀಟ್ ಮಾಡಿದ್ದು ತಮ್ಮ ಮಗ ಸಿಬಿಎಸ್ಇಯಲ್ಲಿ ಶೇ.96ರಷ್ಟು ಅಂಕ ಪಡೆದಿದ್ದಾನೆ. ನಮಗೆ ಇದು ಹೆಮ್ಮೆಯ ವಿಷಯ, ಎಲ್ಲರ ಆಶೀರ್ವಾದವೇ ಮಗನ ಉನ್ನತಿಗೆ ಕಾರಣ ಎಂದು ಬರೆದುಕೊಂಡಿದ್ದಾರೆ.
With God’s grace and well-wishers’ blessings son has secured 96.4 percentile in CBSE Class XII. In high gratitude 🙏🏼
— Sunita Kejriwal (@KejriwalSunita) May 2, 2019