ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಖಿಲ ಭಾರತ ಆಯುರ್ವೇದ ಸಂಸ್ಥೆಯಲ್ಲಿ ''ನ್ಯೂಟ್ರಿ ಗಾರ್ಡನ್" ಉದ್ಘಾಟನೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 01: ಪೋಷಣ್ ಮಾಸ-2021 ಆರಂಭದ ಅಂಗವಾಗಿ ಇಂದು ಅಖಿಲ ಭಾರತ ಆಯುರ್ವೇದ ಕೇಂದ್ರ (ಎಐಐಎ) ನಲ್ಲಿ ನ್ಯೂಟ್ರಿ ಗಾರ್ಡನ್ (ಪೌಷ್ಟಿಕ ಉದ್ಯಾನವನ) ಅನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಜುಬಿನ್ ಇರಾನಿ ಉದ್ಘಾಟಿಸಿದರು

ಪೋಷಣ್ ಮಾಸ 2021ರಡಿ ತಿಂಗಳಿಡಿ ನಡೆಯುವ ಸರಣಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಜುಬಿನ್ ಇರಾನಿ ಅವರು ''ದೇಶದ ಪೌಷ್ಟಿಕಾಂಶ ಅಗತ್ಯವನ್ನು ಪೂರೈಸಲು ಆಯುರ್ವೇದದ ಮೂಲಿಕೆಗಳ ಮೂಲಕ ಪುರಾತನ ಬುದ್ಧಿವಂತಿಕೆಯನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂಬ ಬಗ್ಗೆ ಅರಿವು ಮೂಡಿಸುವುದಕ್ಕೆ ಇದು ಸಕಾಲ.'' ಎಂದು ಹೇಳಿದರು.

ಈ ಸಂದರ್ಭದಲ್ಲಿ ಆಯುಷ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ರಾಜ್ಯ ಸಚಿವರಾದ ಡಾ. ಮುಂಜಿಪಾರಾ ಮಹೇಂದ್ರಭಾಯಿ ಅವರೂ ಸಹ ಉಪಸ್ಥಿತರಿದ್ದರು. ಆಯುಷ್ ಸಚಿವಾಲಯದ ನಿರ್ದೇಶದ ಮೇರೆಗೆ ನವದೆಹಲಿಯ ಅಖಿಲ ಭಾರತ ಆಯುರ್ವೇದ ಕೇಂದ್ರ (ಎಐಐಎ) ಪೋಷಣ್ ಮಾಸ-2021 ಆಚರಣೆಯನ್ನು ಆಯೋಜಿಸಿದೆ.

ಪೌಷ್ಟಿಕಾಂಶದಲ್ಲಿ ಎರಡು ಪ್ರಮುಖ ಭಾಗ

ಪೌಷ್ಟಿಕಾಂಶದಲ್ಲಿ ಎರಡು ಪ್ರಮುಖ ಭಾಗ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ತಮ್ಮ ಭಾಷಣದಲ್ಲಿ, ಐಸಿಎಂಆರ್ ಸಹಭಾಗಿತ್ವದ ಮೂಲಕ ರಕ್ತಹೀನತೆಯ ಪ್ರಮಾಣವನ್ನು ತಗ್ಗಿಸಲು ಆಯುಷ್ ಸಚಿವಾಲಯ ಕೈಗೊಂಡಿರುವ ಪ್ರಯತ್ನಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಆಯುರ್ವೇದದ ಕೊಡುಗೆಯನ್ನು ಇಡೀ ಜಗತ್ತು ಒಪ್ಪಿಕೊಳ್ಳುವಂತೆ ವೈಜ್ಞಾನಿಕ ದತ್ತಾಂಶಗಳ ಪ್ರಕಟಣೆಯನ್ನು ಹೊರತರುವ ಅಗತ್ಯವಿದೆ ಎಂದು ಅವರು ಬಲವಾಗಿ ಪ್ರತಿಪಾಸಿದರು. ಪೌಷ್ಟಿಕಾಂಶದಲ್ಲಿ ಎರಡು ಪ್ರಮುಖ ಭಾಗಗಳಿವೆ, ಅವುಗಳೆಂದರೆ, ಸಮಗ್ರ ಯೋಗಕ್ಷೇಮಕ್ಕೆ ಸುಲಭ ಮತ್ತು ಕೈಗೆಟುಕುವ ದರದಲ್ಲಿ ಲಭ್ಯವಾಗುವುದು. ಇಲ್ಲಿ ಆಯುರ್ವೇದ ತುಂಬಾ ಉಪಕಾರಿ ಎಂಬುದನ್ನು ಸಾಬೀತುಪಡಿಸಬೇಕಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಮೂಲಕ ಆರೋಗ್ಯಕರ ಸಂತತಿ ಮತ್ತು ಸರಳ ಶಾಸ್ತ್ರೀಯ ಪಾಕ ವಿಧಾನಗಳಿಗಾಗಿ ಆಯುಷ್ ಕ್ಯಾಲೆಂಡರ್ ಅನ್ನು ಜನಪ್ರಿಯಗೊಳಿಸುವುದನ್ನು ಪರಿಶೀಲಿಸಬೇಕಿದೆ ಎಂದು ಅವರು ಹೇಳಿದರು.

ಡಾ. ಮುಂಜಿಪಾರಾ ಮಹೇಂದ್ರಭಾಯಿ

ಡಾ. ಮುಂಜಿಪಾರಾ ಮಹೇಂದ್ರಭಾಯಿ

ಡಾ. ಮುಂಜಿಪಾರಾ ಮಹೇಂದ್ರಭಾಯಿ ಮಾತನಾಡಿ, ಶಿಗ್ರು, ಶತಾವರಿ, ಅಶ್ವಗಂಧ, ಆಮ್ಲ, ತುಳಸಿ, ಅರಿಶಿನ ಮತ್ತಿತರ ಕೆಲವು ಆಯುರ್ವೇದ ಗಿಡಮೂಲಿಕೆಯಲ್ಲಿನ ಪೌಷ್ಟಿಕಾಂಶ ಮತ್ತು ವೈದ್ಯಕೀಯ ಪ್ರಾಮುಖ್ಯವನ್ನು ಮುಖ್ಯವಾಗಿ ವಿವರಿಸಿದರು ಮತ್ತು ತಾಯಿ ಮತ್ತು ಮಗುವಿನ ಸಮಗ್ರ ಯೋಗಕ್ಷೇಮ ರಕ್ಷಣೆಗೆ ಸಾಕ್ಷ್ಯ ಆಧಾರಿತ ಆಯುರ್ವೇದ ಪೌಷ್ಟಿಕಾಂಶದ ಅಭ್ಯಾಸಗಳನ್ನು ಪ್ರಮುಖವಾಗಿ ಉತ್ತೇಜಿಸುವ ಅಗತ್ಯ ಕುರಿತು ಹೇಳಿದರು. ಆರೋಗ್ಯಕರ ಸಂತಾನವನ್ನು ಹೊಂದಲು ತಾಯಿಯ ಜೀವನದಲ್ಲಿ ಪೌಷ್ಟಿಕಾಂಶದ ಮಹತ್ವವನ್ನು ಮತ್ತು ಆಯುರ್ವೇದ ಔಷಧಗಳು ಹೇಗೆ ಸಹಾಯ ಮಾಡುತ್ತವೆ ಎಂಬುದನ್ನು ಅವರು ಒತ್ತಿ ಹೇಳಿದರು.

ಪೋಷಣ್ ಮಾಸಾಚರಣೆ

ಪೋಷಣ್ ಮಾಸಾಚರಣೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಇಂದೆವರ್ ಪಾಂಡೆ ಮತ್ತು ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೇಚ ಅವರು ಉಪಸ್ಥಿತರಿದ್ದರು. ತಿಂಗಳಿಡೀ ನಡೆಯುವ ಪೋಷಣ್ ಮಾಸಾಚರಣೆಯಲ್ಲಿ, ರೋಗಿಗಳಿಗೆ ಜಾಗೃತಿ ಉಪನ್ಯಾಸ, ರಸಪ್ರಶ್ನೆ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಅತಿಥಿ ಉಪನ್ಯಾಸ ಮತ್ತಯ ಕಾರ್ಯಾಗಾರಗಳನ್ನು ನಿರ್ದಿಷ್ಠ ವಿಷಯದ ಕುರಿತು ಎಐಐಎ ಆಯೋಜಿಸಲಿದೆ.

ಪೌಷ್ಟಿಕ ಪಾಕ ವಿಧಾನ

ಪೌಷ್ಟಿಕ ಪಾಕ ವಿಧಾನ

ಶತಾವರಿ, ಅಶ್ವಗಂಧ, ಮಸ್ಲಿ ಮತ್ತು ಯಷ್ಟಿಮಧು ಸೇರಿದಂತೆ ಇತರೆ ಆರೋಗ್ಯ ರಕ್ಷಣೆಗೆ ನೆರವಾಗುವ ಮತ್ತು ಪೌಷ್ಟಿಕಾಂಶಗಳ ಪ್ರಯೋಜನ ನೀಡುವ ಸಸಿಗಳನ್ನು ನಡೆವುದು ಮತ್ತು ವಿತರಣಾ ಅಭಿಯಾನವನ್ನು ರೋಗಿಗಳು ಹಾಗೂ ಆರೋಗ್ಯ ರಕ್ಷಣಾ ಸಿಬ್ಬಂದಿ ಕೈಗೊಂಡರು. ಸಾಮಾನ್ಯ ಜನರಿಗೆ ಆಯ್ದ ಸಸ್ಯಗಳ ಪೌಷ್ಟಿಕಾಂಶ ಮೌಲ್ಯದ ಬಗ್ಗೆ ತಿಳಿಸಿಕೊಡುವ ಕರಪತ್ರಗಳನ್ನೂ ಸಹ ಹಂಚಿಲಾಯಿತು. ಸತ್ತು ಪಾನೀಯ, ಎಳ್ಳುಂಡೆ, ಊದಲು ಪಾಯಸ, ಹುಚ್ಚೆಳ್ಳುಂಡೆ , ಆಮಲಕಿ ಪಾನಕ ಮತ್ತಿತರ ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ ಆಯುರ್ವೇದ ಶಾಸ್ತ್ರೀಯ ಪೌಷ್ಟಿಕ ಪಾಕ ವಿಧಾನಗಳನ್ನೂ ಸಹ ಪ್ರದರ್ಶಿಸಲಾಯಿತು.

English summary
Women and Child Development Minister Smriti Irani inaugurated NUTRI GARDEN at All India Institute of Ayurveda. This is Initiating series of programs under month long Poshan Maah 2021
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X