ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪದ್ಮಾವತಿ ಸಿನೆಮಾ ವಿವಾದ : ಶಶಿ ತರೂರ್ ಕಾಲೆಳೆದ ಸ್ಮೃತಿ ಇರಾನಿ

By Manjunatha
|
Google Oneindia Kannada News

ನವದೆಹಲಿ, ನವೆಂಬರ್ 18 : ಸ್ಮೃತಿ ಇರಾನಿ ಅದ್ಬುತ ಮಾತುಗಾರ್ತಿ, ತಮ್ಮ ತಂಟೆಗೆ ಬಂದವರನ್ನು ಸುಮ್ಮನೆ ಬಿಟ್ಟವರಲ್ಲ, ತಮ್ಮ ಪ್ರಕರ ವಾಗ್ಝರಿಯಿಂದ ಬಿಸಿ ತಟ್ಟಿಸದೆ ಬಿಡರು.

ಈ ಬಾರಿ ಸ್ಮೃತಿ ಇರಾನಿ ವಾಗ್ಬಾಣ ಹರಿದಿರುವುದು ಕಾಂಗ್ರೆಸ್ ಹಿರಿಯ ಮುಖಂಡ, ಸ್ವತಃ ಅತ್ಯುತ್ತಮ ವಾಗ್ಮಿಯಾಗಿರುವ ಶಶಿ ತರೂರ್ ಅವರ ಮೇಲೆ. ಶಶಿ ತರೂರ್ ಅವರೇನು ಸ್ಮೃತಿ ಅವರ ಬಗ್ಗೆ ಮಾತನಾಡಿಲ್ಲ ಆದರೆ 'ಪದ್ಮಾವತಿ' ಚಿತ್ರಕ್ಕೆ ಬೆಂಬಲ ಸೂಚಿಸಿ ರಾಜರುಗಳ ಬಗ್ಗೆ ಅವರು ಆಡಿದ್ದ ಮಾತು ಸ್ಮೃತಿ ಇರಾನಿ ಅವರನ್ನು ಕೆರಳಿಸಿದೆ.

Smriti Irani hits at Shashi Tharoor for his comments

ಶಶಿ ತರೂರ್ ಅವರು ಮೊನ್ನೆ 'ಈಗ ಯಾರು ತಾವು ಪರಾಕ್ರಮಿ ಮಹಾರಾಜರೆಂದು ಹೇಳಿಕೊಳ್ಳುತ್ತಿದ್ದಾರೊ ಅದೇ ರಾಜರು ಅಂದು ತಮ್ಮ ಅನುಕೂಲಕ್ಕಾಗಿ ಬ್ರಿಟೀಷರ ಮುಂದೆ ಮಂಡಿಯೂರಿ ಕೂತಿದ್ದರು. ಈಗ ಅವರು ತಮ್ಮ ಮರ್ಯಾದೆ, ಗೌರವ ಎಂದೆನ್ನುತ್ತಾ ಸಿನಿಮಾ ತಯಾರಿಕರ ಮೇಲೆ ಪೌರುಷ ತೋರುತ್ತಿದ್ದಾರೆ' ಎಂದಿದ್ದರು.

ಇದಕ್ಕೆ ಪ್ರತಿ ಟ್ವೀಟ್ ಮಾಡಿರುವ ಸ್ಮೃತಿ ಇರಾನಿ ಅವರು ಕಾಂಗ್ರೆಸ್ ನಲ್ಲಿನ ರಾಜಮನೆತನದಿಂದ ಬಂದಂತಹಾ ಮುಖಂಡರನ್ನು ಉಲ್ಲೇಖಿಸಿ ಇವರೆಲ್ಲಾ ಬ್ರಿಟೀಷರ ವಿರುದ್ಧ ಮಂಡಿಯೂರಿದ್ದರಾ, ಶಶಿ ತರೂರ್ ಅವರ ಮಾತಿನ ಬಗ್ಗೆ ಕಾಂಗ್ರೆಸ್ ನ ಮಹಾರಾಜ ಸಂತಿತಯವರು ಏನು ಹೇಳುತ್ತಾರೆ? ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸಚಿವೆ ಸ್ಮತಿ ಇರಾನಿಗೆ ಟ್ವಿಟ್ಟರ್ ನಲ್ಲಿ ಟಾಂಗ್ ಕೊಟ್ಟ ರಮ್ಯಾಕೇಂದ್ರ ಸಚಿವೆ ಸ್ಮತಿ ಇರಾನಿಗೆ ಟ್ವಿಟ್ಟರ್ ನಲ್ಲಿ ಟಾಂಗ್ ಕೊಟ್ಟ ರಮ್ಯಾ

ಕಾಂಗ್ರೆಸ್ ಶಿಂಧಿಯಾ, ದಿಗ್ವಿಜಯ್ ಸಿಂಗ್, ಅಮರಿಂದರ್ ಸಿಂಗ್, ಮುಂತಾದವರು ರಾಜಮನೆತನದ ಇತಿಹಾಸ ಉಳ್ಳ ಕುಟುಂಬದವರು. ಇವರ ಹೆಸರುಗಳನ್ನು ಸ್ಮೃತಿ ಇರಾನಿ ತಮ್ಮ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.

ನಂತರ ತಮ್ಮ ಮಾತಿಗೆ ಸ್ಪಷ್ಟೀಕರಣ ನೀಡಿದ ಶಶಿ ತರೂರ್ , "ಕೆಲವು ಬಿ.ಜೆ.ಪಿ ಬೆಂಬಲಿಗರು ನಾನು ರಜಪೂತರಿಗೆ ಅವಮಾನ ಮಾಡಿದ್ದೇನೆ ಎಂದು ಮಾತನಾಡುತ್ತಿದ್ದಾರೆ. ಆದರೆ ನಾನು ಹೇಳಿರುವುದು ಬ್ರಿಟೀಷರೊಂದಿಗೆ ತಮ್ಮ ಅನುಕೂಲಕ್ಕಾಗಿ ರಾಜಿ ಮಾಡಿಕೊಂಡವರ ಬಗ್ಗೆ ಮಾತ್ರ, ನಾನು ಯಾವುದೇ ಸಮುದಾಯ ಕುರಿತು ಹೇಳಿಲ್ಲ' ಎಂದಿದ್ದಾರೆ.

English summary
Union minister Smriti Irani took a jibe at Congress leader Shashi Tharoor for his reported 'maharaja' comments amidst a row over period drama 'Padmavati'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X