ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧೂಮಪಾನ:ಕಠಿಣ ಕಾನೂನು ಜಾರಿಗೆ ಶೇ.88ರಷ್ಟು ಭಾರತೀಯರ ಸಾಥ್

|
Google Oneindia Kannada News

ನವದೆಹಲಿ,ಫೆಬ್ರವರಿ 15: ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ, ಇದರ ವಿರುದ್ಧ ಕಠಿಣ ಕಾನೂನು ಜಾರಿಗೆ ಶೇ.88ರಷ್ಟು ಭಾರತೀಯರು ಬೆಂಬಲ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ನವದೆಹಲಿ ಮೂಲದ ಸ್ವಯಂಸೇವಾ ಸಂಸ್ಥೆ ಕಸ್ಟಮರ್ ವಾಯ್ಸ್ ನಡೆಸಿದ ಸಮೀಕ್ಷೆಯಲ್ಲಿ ಇದು ಬಹಿರಂಗಗೊಂಡಿದೆ.18 ವರ್ಷಕ್ಕಿಂತ ಮೇಲ್ಪಟ್ಟ 1,476 ಜನರನ್ನು ಸಮೀಕ್ಷೆಗೆ ಒಳಪಡಿಸಿದೆ.ಇವರಲ್ಲಿ ಬಹಳಷ್ಟು ಮಂದಿ ತಂಬಾಕಿನ ಬಳಕೆಯನ್ನು ಗಂಭೀರ ಸಮಸ್ಯೆಯೆಂದು ಪರಿಗಣಿಸಿದ್ದಾರೆ.

ಕರ್ನಾಟಕ ಸೇರಿ 10 ರಾಜ್ಯಗಳ ವಯಸ್ಕ ನಾಗರಿಕರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಶೇ.80 ಕ್ಕೂ ಹೆಚ್ಚು ಭಾರತೀಯರು ಸಿಗರೇಟ್, ಬೀಡಿ ಮತ್ತು ಧೂಮಪಾನವಲ್ಲದ ತಂಬಾಕು ಬಳಕೆಯನ್ನು ಬಹಳ ಗಂಭೀರ ಸಮಸ್ಯೆ ಎಂದು ನಂಬಿದ್ದಾರೆ ಮತ್ತು ಇದಕ್ಕೆ ಪರಿಹಾರವಾಗಿ ಪ್ರಸ್ತುತ ತಂಬಾಕು ನಿಯಂತ್ರಣ ಕಾನೂನುಗಳನ್ನು ಬಲಪಡಿಸಲು ಶೇ.88 ಮಂದಿ ಬೆಂಬಲ ಸೂಚಿಸುತ್ತಾರೆ.

ಸಿಗರೇಟ್ ಚಟದಿಂದ ಹೊರಬರೋದು ಕಷ್ಟವೇನಲ್ಲ ಸಿಗರೇಟ್ ಚಟದಿಂದ ಹೊರಬರೋದು ಕಷ್ಟವೇನಲ್ಲ

ತಂಬಾಕು ನಿಯಂತ್ರಣ ಕಾನೂನನ್ನು ಬಲಪಡಿಸುವುದಕ್ಕಾಗಿ ಬೆಂಬಲ ವ್ಯಕ್ತವಾಗುವುದು ಒಳ್ಳೆಯ ಬೆಳವಣಿಗೆಯಾಗಿದ್ದು,ತಂಬಾಕು ನಿಯಂತ್ರಣ ಕಾನೂನು COTPA 2003 ರ ತಿದ್ದುಪಡಿ ಪ್ರಕ್ರಿಯೆಯನ್ನು ಸರ್ಕಾರ ಈಗಾಗಲೇ ಆರಂಭಿಸಿದೆ.

ಧೂಮಪಾನ ಗಂಭೀರ ಸಮಸ್ಯೆ

ಧೂಮಪಾನ ಗಂಭೀರ ಸಮಸ್ಯೆ

ಕನಿಷ್ಠ ಶೇ.82 ರಷ್ಟು ಜನರು ಧೂಮಪಾನ ರಹಿತ ತಂಬಾಕಿನ ಬಳಕೆಯನ್ನು ತೀವ್ರವಾಗಿ ಗಂಭೀರ ಸಮಸ್ಯೆಯೆಂದು ನಂಬುತ್ತಾರೆ, ಆದರೆ ಶೇ.80 ಜನರು ಸಿಗರೇಟು ಸೇದುವ ಬಗ್ಗೆ ಅದೇ ರೀತಿ ಹೇಳುತ್ತಾರೆ.

ಎಲ್ಲಾ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಪ್ರದೇಶಗಳನ್ನು ಮುಚ್ಚಬೇಕು

ಎಲ್ಲಾ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಪ್ರದೇಶಗಳನ್ನು ಮುಚ್ಚಬೇಕು

ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸುವುದು, ವಿಮಾನ ನಿಲ್ದಾಣಗಳು, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ವಿಶೇಷ ಧೂಮಪಾನ ಪ್ರದೇಶಗಳ ಮುಚ್ಚುವುದು. ಸರಾಗವಾಗಿರುವ ಸಿಗರೇಟ್ ಮತ್ತು ಬೀಡಿಗಳ ಮಾರಾಟವನ್ನು ನಿಷೇಧಿಸುವುದು ಮತ್ತು ತಂಬಾಕು ಉತ್ಪನ್ನಗಳ ಮಾರಾಟದ ಸ್ಥಳಗಳಲ್ಲಿ ಜಾಹೀರಾತು ನೀಡುವುದು ಇದಕ್ಕೆ ಪರಿಹಾರವಾಗಿದೆ.

ತಂಬಾಕು ಬಳಕೆದಾರರಿಂದ ಕೂಡ ಬೆಂಬಲ

ತಂಬಾಕು ಬಳಕೆದಾರರಿಂದ ಕೂಡ ಬೆಂಬಲ

ಹತ್ತು ಭಾರತೀಯರಲ್ಲಿ ಸುಮಾರು ಒಂಬತ್ತು ಮಂದಿ ಇದರ ಪರವಾಗಿದ್ದಾರೆ, 88% ಜನರು ಇದನ್ನು ಬಲವಾಗಿ ಬೆಂಬಲಿಸುತ್ತಿದ್ದಾರೆ. ವಯಸ್ಸು ಮತ್ತು ಲಿಂಗದಂತಹ ಎಲ್ಲಾ ಜನಸಂಖ್ಯಾ ಮತ್ತು ಭೌಗೋಳಿಕ ವಿಭಾಗಗಳಲ್ಲಿ ಬೆಂಬಲ ಹೆಚ್ಚಿದೆ.. ತಂಬಾಕು ಬಳಕೆದಾರರು ಸಹ ಈ ವಿಚಾರವನ್ನು ಬೆಂಬಲಿಸುತ್ತಾರೆ "ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಂಬಾಕು ನಿಯಂತ್ರಣ ಕಾನೂನು ಬಲ ಪಡಿಸಲು ಬೆಂಬಲ

ತಂಬಾಕು ನಿಯಂತ್ರಣ ಕಾನೂನು ಬಲ ಪಡಿಸಲು ಬೆಂಬಲ

ಇನ್ನು ಶೇ.77 ಜನರು ಬೀಡಿ ಸೇದುವಿಕೆ ಬಗ್ಗೆ ಹೇಳಿದರೆ 72% ಮಂದಿ 10 ಭಾರತೀಯರಲ್ಲಿ ಏಳು ಮಂದಿ ಪರೋಕ್ಷವಾಗಿ ಧೂಮಪಾನಕ್ಕೆ ಒಡ್ಡಿಕೊಳ್ಲುತ್ತಾರೆ ಎಂದಿದ್ದಾರೆ. ಪ್ರಸ್ತುತ ತಂಬಾಕು ನಿಯಂತ್ರಣ ಕಾನೂನನ್ನು ಬಲಪಡಿಸಲು ಅಗಾಧ ಪ್ರಮಾಣದ ಬೆಂಬಲ ವ್ಯಕ್ತವಾಗುತ್ತಿದೆ.

English summary
A survey conducted among adults in 10 states, including Karnataka, has revealed that over 80% of Indians believe cigarettes, beedis and use of smokeless tobacco is a very serious problem, and 88% strongly support strengthening of the current tobacco control laws to address this menace.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X