ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5000 ಅಡಿ ಎತ್ತರದಲ್ಲಿ ಮೇಲೆ ವಿಮಾನದೊಳಗೆ ಹೊಗೆ, ಪ್ರಯಾಣಿಕರು ಹೈರಾಣ

|
Google Oneindia Kannada News

ನವದೆಹಲಿ, ಜು.2: ದೆಹಲಿಯಿಂದ ಜಬಲ್‌ಪುರಕ್ಕೆ ಹಾರುತ್ತಿದ್ದ ಸ್ಪೈಸ್‌ಜೆಟ್ ವಿಮಾನದ ಕ್ಯಾಬಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿದ್ದರಿಂದ ಶನಿವಾರ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ ವಾಪಾಸ್‌ ಆದ ಘಟನೆ ನಡೆದಿದೆ. ವಿಮಾನದಲ್ಲಿ ಹೊಗೆ ಕಾಣಿಸಿಕೊಂಡಿದ್ದರಿಂದ ಯಾವುದೇ ಯಾರಿಗೂ ತೊಂದರೆ ಕಂಡು ಬಂದಿಲ್ಲ ಎನ್ನಲಾಗಿದೆ.

ಸ್ಪೈಸ್ ಜೆಟ್ ವಿಮಾನದಲ್ಲಿ ಬೆಂಕಿ; 185 ಜೀವ ಉಳಿಸಿದ ಪೈಲೆಟ್ಸ್ಪೈಸ್ ಜೆಟ್ ವಿಮಾನದಲ್ಲಿ ಬೆಂಕಿ; 185 ಜೀವ ಉಳಿಸಿದ ಪೈಲೆಟ್

ವಿಮಾನವು 5,000 ಅಡಿ ಎತ್ತರದಲ್ಲಿದ್ದಾಗ ವಿಮಾನದ ಕ್ಯಾಬಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿತು. ಸ್ಪೈಸ್‌ ಜೆಟ್ ವಿಮಾನವು ಶನಿವಾರ ಬೆಳಗ್ಗೆ ದೆಹಲಿಯಿಂದ ಜಬಲ್‌ಪುರ್‌ಗೆ ಹಾರಾಟ ನಡೆಸುತ್ತಿತ್ತು. 5000 ಅಡಿ ಮೇಲೆ ಹಾರುವಾಗ ಕ್ಯಾಬಿನ್‌ನಲ್ಲಿ ಹೊಗೆಯನ್ನು ಗಮನಿಸಿದ ನಂತರ ವಿಮಾನ ಸಿಬ್ಬಂದಿ ಸುರಕ್ಷಿತವಾಗಿ ದೆಹಲಿ ವಿಮಾನ ನಿಲ್ದಾಣಕ್ಕೆ ಮರಳಿಸಿದರು. ಪ್ರಯಾಣಿಕರು ಸುರಕ್ಷಿತವಾಗಿ ಇಳಿದಿದ್ದಾರೆ ಎಂದು ಸ್ಪೈಸ್‌ಜೆಟ್ ವಕ್ತಾರರು ತಿಳಿಸಿದ್ದಾರೆ.

Smoke appeared on the plane at an altitude of 5000 feet, passengers panicked

ಸುದ್ದಿ ಸಂಸ್ಥೆ ಎಎನ್‌ಐ ಟ್ವೀಟ್ ಮಾಡಿರುವ ದೃಶ್ಯವು ಹೊಗೆ ತುಂಬಿದ ಕ್ಯಾಬಿನ್ ಅನ್ನು ತೋರಿಸಿದ್ದು, ವಿಮಾನವು ದೆಹಲಿಗೆ ಹಿಂದಿರುಗಿದ ನಂತರ ಪ್ರಯಾಣಿಕರು ನಿರ್ಗಮಿಸುತ್ತಿರುವ ದೃಶ್ಯಗಳನ್ನು ತೋರಿಸಿವೆ. 15 ದಿನಗಳಲ್ಲಿ ಸ್ಪೈಸ್ ಜೆಟ್ ವಿಮಾನಕ್ಕೆ ಇದು ಎರಡನೇ ತುರ್ತು ಲ್ಯಾಂಡಿಂಗ್ ಆಗಿದೆ. ಜೂನ್ 19 ರಂದು 185 ಪ್ರಯಾಣಿಕರೊಂದಿಗೆ ದೆಹಲಿಗೆ ಹೊರಟಿದ್ದ ವಿಮಾನವು ಟೇಕ್-ಆಫ್ ಆದ ತಕ್ಷಣ ಪಾಟ್ನಾದಲ್ಲಿ ತುರ್ತು ಭೂಸ್ಪರ್ಶ ಮಾಡಿತು. ಏಕೆಂದರೆ ಅದರ ಎಡ ಇಂಜಿನ್‌ಗೆ ಹಕ್ಕಿ ಹೊಡೆದ ನಂತರ ಬೆಂಕಿ ಕಾಣಿಸಿಕೊಂಡಿತ್ತು.

Smoke appeared on the plane at an altitude of 5000 feet, passengers panicked

Recommended Video

ರಿಷಬ್ ಪಂತ್ ದಾಖಲೆಯ ಶತಕ ನೋಡಿ ಡಗೌಟ್ ನಲ್ಲಿ ಕೂತಿದ್ದ ರಾಹುಲ್ ದ್ರಾವಿಡ್ ಹೇಗಾಡಿದ್ರು ನೋಡಿ.. | OneIndia Kannada

ಆಗ ವಿಮಾನದಲ್ಲಿದ್ದ ಪ್ರಯಾಣಿಕ ಸೌರಭ್ ಛಾಬ್ರಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಮಾನದೊಳಗೆ ನಡೆದ ಘಟನೆಯನ್ನು ವಿವರಿಸಿದ್ದರು. ಸ್ಪೈಸ್‌ಜೆಟ್ ಅಸುರಕ್ಷಿತವಾಗಿದೆ ಎಂದು ತೋರುತ್ತಿದೆ. ವಿಮಾನಕ್ಕೆ ಬೆಂಕಿ ಹತ್ತಿಕೊಂಡಿದ್ದರಿಂದ ಒಮ್ಮೆಗೆ ಪ್ರಯಾಣಿಕರು ಭಯಭೀತರಾಗಲು ಪ್ರಾರಂಭಿಸಿದರು. ಬಳಿಕ ಅವರು ದೆಹಲಿಗೆ ಹಿಂತಿರುಗಿದರು. ಅದೃಷ್ಟವಶಾತ್ ನಾವು ಸುರಕ್ಷಿತವಾಗಿದ್ದೇವೆ ಎಂದು ಅವರು ಬರೆದಿದ್ದರು.

English summary
The SpiceJet flight from Delhi to Jabalpur returned to Delhi airport on Saturday morning after smoke was seen in the cabin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X