• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಬ್ರಾಹ್ಮಣರ ಪ್ರಭುತ್ವವನ್ನು ಹತ್ತಿಕ್ಕಿ' ಎಂದ ಟ್ವಿಟ್ಟರ್ ಸಿಇಒಗೆ ಟ್ವಿಟ್ಟರ್ ನಲ್ಲೇ ಗೂಸಾ!

|

ನವದೆಹಲಿ, ನವೆಂಬರ್ 20: 'ಬ್ರಾಹ್ಮಣರ ಪ್ರಭುತ್ವವನ್ನು ಹತ್ತಿಕ್ಕಿ' ಎಂಬ ಪ್ಲೆಕಾರ್ಡ್ ನೊಂದಿಗೆ ಫೋಟೋಕ್ಕೆ ಪೋಸು ನೀಡುತ್ತಿರುವ ಟ್ವಿಟ್ಟರ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಾಕ್ ಡೋರ್ಸಿ ಅವರಿಗೆ ಟ್ವಿಟ್ಟಿಗರು ಚೆನ್ನಾಗಿ ತಪರಾಕಿ ಬಾರಿಸಿದ್ದಾರೆ!

ಭಾರತೀಯರು ಟ್ವಿಟ್ಟರ್ ಅನ್ನು ಹೇಗೆ ಬಳಸುತ್ತಿದ್ದಾರೆ ಎಂಬ ಕುರಿತಂತೆ ನಡೆದ ಸಭೆಯಲ್ಲಿ ಮಹಿಳಾ ಪತ್ರಕರ್ತೆಯರೊಂದಿಗೆ ಇತ್ತೀಚೆಗಷ್ಟೇ ಭಾರತಕ್ಕೆ ಭೇಟಿ ನೀಡಿದ್ದ ಡೋರ್ಸಿ ಮಾತುಕತೆ ನಡೆಸಿದ್ದರು. ನಂತರ ಕೆಲವು ಮಹಿಳಾ ಪತ್ರಕರ್ತೆಯರೊಂದಿಗೆ ನಿಂತು ತೆಗೆಸಿಕೊಂಡ ಫೋಟೋದಲ್ಲಿ ಅವರು ಹಿಡಿದ ಪ್ಲೆಕಾರ್ಡ್ ವೊಂದು ಸಾಕಷ್ಟು ವಿವಾದ ಸೃಷ್ಟಿಸಿದೆ.

ಬ್ರಾಹ್ಮಣರ ಆಕ್ರೋಶಕ್ಕೆ ಕಾರಣವಾದ ಆನಂದ್ ನ್ಯಾಮಗೌಡ ಹೇಳಿಕೆ

"Smash Brahmanical Patriarchy" ಎಂದು ಬರೆದಿರುವ ಈ ಪ್ಲೆಕಾರ್ಡ್ ಮೂಲಕ ಟ್ವಿಟ್ಟರ್ ಸಿಇಒ ಒಂದು ಸಮುದಾಯದ ಭಾವನೆಗಳಿಗೆ ನೋವುಂಟು ಮಾಡುತ್ತಿದ್ದಾರೆ ಎಂದು ದೂರಲಾಗಿದೆ.

ಬಹಳ ಬೇಸರವಾಗಿದೆ!

ಒಬ್ಬ ಭಾರತೀಯನಾಗಿ ನನಗೆ, ಟ್ವಿಟ್ಟರ್ ಸಿಇಒ ಜಾಕ್ ಡೋರ್ಸಿಯ "Smash Brahmanical Patriarchy" ಬಗ್ಗೆ ಕೇಳ ಸಾಕಷ್ಟು ಬೇಸರವಾಗಿದೆ. ಹೀಗೆ ಒಂದು ಭಾರತೀಯ ಸಮುದಾಯದ ವಿರುದ್ಧ ಮಾತನಾಡಿ ದ್ವೇಷ ಬಿತ್ತುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಇನ್ಫೋಸಿಸ್ ನ ಮಾಜಿ ನಿರ್ದೇಶಕ ಮೋಹನ್ ದಾಸ್ ಪೈ ಟ್ವೀಟ್ ಮಾಡಿದ್ದಾರೆ.

ಮುಸ್ಲಿಂ, ಕ್ರೈಸ್ತರ ಬಗ್ಗೆಯೂ ಇಂಥ ಪ್ಲೆಕಾರ್ಡ್ ಹಿಡಿಯುತ್ತೀರಾ?

ಅಕಸ್ಮಾತ್ ನಾಳೆ ಬೇರೆ ಯಾರಾದರೂ ಅವರಿಗೆ ಒಂದು ಗಿಫ್ಟ್ ನೀಡಿ, ಅದರಲ್ಲಿ "Stop Islamic Fundamentalism" ಅಥವಾ "Eradicate Catholic Supremacism" ಅಂತ ಬರೆದುಕೊಟ್ಟರೆ ಅದನ್ನೂ ಹಿಡಿದುಕೊಂಡು ಪೋಸು ಕೊಡುತ್ತೀರಾ ಎಂದು ಪ್ರಶ್ನಿಸಿದ್ದಾರೆ ಮದ್ರಾಸಿವಾಲಾ.

ಬ್ರಾಹ್ಮಣರ ಬಗ್ಗೆ ಹೇಳಿಕೆ : ಸ್ಪಷ್ಟನೆ ಕೊಟ್ಟ ಶಾಸಕ ಆನಂದ್ ನ್ಯಾಮಗೌಡ

ಜಾಕ್ ಗೆ ಮಾತು ಬರುವುದಿಲ್ಲವೇ?

"ನಾನು ಒಬ್ಬ ಪ್ರಾಮಾಣಿಕ ಬ್ರಾಹ್ಮಣ. ನನ್ನ ಕೆಲಸವನ್ನು ನಾನೂ ಎಲ್ಲರಂತೆಯೇ ಮಾಡುತ್ತೇನೆ, ನಾನೂ ಎಲ್ಲರಂತೆಯೇ ತೆರಿಗೆ ಕಟ್ಟುತ್ತೇನೆ. ಆದರೆ ಜಾಕ್ ನ ಈ ಪ್ಲೆಕಾರ್ಡ್ ನನಗೆ ಸಾಕಷ್ಟು ನೋವುಂಟು ಮಾಡಿದೆ. ಆತ ನನಗೆ, ನನ್ನ ಸಮುದಾಯಕ್ಕೆ, ನನ್ನ ಕುಟುಂಬಕ್ಕೆ ಅವಮಾನ ಮಾಡಿದ್ದಾರೆ. ಯಾರಾದರೂ ತಮ್ಮ ದ್ವೇಷವನ್ನು ತೀರಿಸಿಕೊಳ್ಳಲು ಡೋರ್ಸಿ ಅವರನ್ನು ಸುಲಭವಾಗಿ ಬಳಸಿಕೊಳ್ಳುವಷ್ಟು ಡೋರ್ಸಿ ಅಸಹಾಯಕರೇ? ಅವರಿಗೆ ಮಾತು ಬರುವುದಿಲ್ಲವೇ?" ಎಂದು ಖಡಕ್ ಪ್ರಶ್ನೆ ಎಸೆದಿದ್ದಾರೆ ರಜತ್ ಸರ್ಕಾರ.

ಅದನ್ನು ಹಿಡಿಯಲೇಬಾರದಿತ್ತು!

ಅಕಸ್ಮಾತ್ ಡೋರ್ಸಿ ಅವರಿಗೆ ಆ ವಾಕ್ಯದ ಅರ್ಥವಾಗಿಲ್ಲ ಎಂದಾಗಿದ್ದರೆ ಅದನ್ನು ಅವರು ಹಿಡಿಯಲೇ ಬಾರದಿತ್ತು. ಯಾರೋ ಹೇಳಿದರೆಂದು ಅದನ್ನು ಹಿಡಿದು ಪೋಸು ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ ಶುಭ್ರಾ ಮಿಷ್ರಾ.

ಲಂಚೂ ಇಲ್ಲ, ಬಾಕ್ಸೂ ಇಲ್ಲ, ಬ್ರಾಹ್ಮಣರ ಮೇಲೇಕೆ ಕೋಪ?

ನಾಚಿಕೆಯಾಗಬೇಕು ನಿಮಗೆ!

ಜಾಕ್, ನಾನೂ ಒಬ್ಬ ಬ್ರಾಹ್ಮಣ. ನನ್ನ ಜಾತಿ ಮತ್ತು ಮತವನ್ನು ನೋಡಿ ನೀವು ನನ್ನ ಖಾತೆಯನ್ನು ಡಿಲೀಟ್ ಮಾಡಿ! ನಿಮಗೂ ಮತ್ತು ದ್ವೇಷ ಬಿತ್ತುವ ನಿಮ್ಮೊಂದಿಗಿರುವ ಭಾರತೀಯರ ತಂಡಕ್ಕೆ ನಾಚಿಕೆಯಾಗಬೇಕು ಎಂದಿದ್ದಾರೆ ಡಿಎಸ್ಪಿ.

ಮತಾಂತರದ ಹುನ್ನಾರ?

ಟ್ವಿಟ್ಟರ್ ನ ಜಾಕ್ ಕ್ರೈಸ್ತ ಮಿಶಿನರಿಯ ಮೂಲಕ ಮತಾಮತರಕ್ಕೆ ಪ್ರಯತ್ನಿಸುವ ಗುರಿ ಹೊಂದಿದ್ದಾರೆ. ಅವರಿಗೆ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ನೆರವು ನೀಡುತ್ತಿದ್ದಾರೆ ಎಂದು ದೂರಿದ್ದಾರೆ ಪ್ರವೀಣ್ ಭಂಡಾರಿ.

ಜಾಕ್ ಒಬ್ಬ ಮೂಗ!

ಹಿಂದು ಕಾರ್ಯಕರ್ತನಾಗಿ ನಾನು ನಿಮಗೊಂದು ಪ್ಲೆಕಾರ್ಡ್ ಗಿಫ್ಟ್ ಕೊಡುತ್ತೇನೆ. ಅದರಲ್ಲಿ, ಜಾಕ್ ಒಬ್ಬ ಮೂಗ, ಟ್ವಿಟ್ಟರ್ ಟ್ವಿಟ್ಟರ್ ಧರ್ಮಾಂಧ ಎಂದು ಬರೆಯುತ್ತೇನೆ. ನೀವು ಅದನ್ನು ಹಿಡಿದುಕೊಂಡು ಪೋಸು ನೀಡುತ್ತೀರಾ? ಎಂದು ಹಿಂದುಸ್ಥಾನಿ ಎಂಬ ಖಾತೆಯಿಂದ ದಪ್ರಶ್ನಿಸಲಾಗಿದೆ.

English summary
Twitter CEO Jack Dorsey's step who was holding a placard that said, 'Smash Brahmanical patriarch' becomes controversial now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more