ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಗೋಲಿ ಮಾರೋ...' ಎಂದು ಮೆಟ್ರೋದಲ್ಲಿ ಕೂಗಿದ ಆರು ಮಂದಿ ಬಂಧನ

|
Google Oneindia Kannada News

ನವದೆಹಲಿ, ಫೆಬ್ರವರಿ 29: ದೆಹಲಿಯ ಜನನಿಬಿಡ ಮೆಟ್ರೋ ನಿಲ್ದಾಣದಲ್ಲಿ 'ದೇಶ್ ಕಿ ಗದ್ದಾರೋನ್ ಕೋ ಗೋಲಿ ಮಾರೋ (ದೇಶಕ್ಕೆ ದ್ರೋಹ ಎಸೆಯುವ ವಂಚಕರನ್ನು ಗುಂಡಿಕ್ಕಿ ಸಾಯಿಸಿ) ಎಂದು ಕಿಡಿಗೇಡಿಗಳ ಗುಂಪೊಂದು ಘೋಷಣೆ ಕೂಗಿದ ವಿಡಿಯೋ ವೈರಲ್ ಆಗಿದೆ.

ಬಿಳಿ ಟಿ ಷರ್ಟ್ ಹಾಗೂ ಕೆಂಪು ಮುಂಡಾಸು ಧರಿಸಿದ್ದ ಗುಂಪೊಂದು ರಾಜೀವ್ ಚೌಕ ಮೆಟ್ರೋ ನಿಲ್ದಾಣದಲ್ಲಿ ಶನಿವಾರ ಜೋರಾಗಿ ಘೋಷಣೆ ಕೂಗಿದ್ದನ್ನು ವಿಡಿಯೋದಲ್ಲಿ ಚಿತ್ರೀಕರಿಸಲಾಗಿತ್ತು. ಈ ಘಟನೆ ಸಂಬಂಧ ಆರು ಮಂದಿಯನ್ನು ಬಂಧಿಸಲಾಗಿದೆ.

ಈಶಾನ್ಯ ದೆಹಲಿ ಗಲಭೆ: ಶಿವ ದೇಗುಲ ರಕ್ಷಿಸಿದ ಮುಸ್ಲಿಮರು ಈಶಾನ್ಯ ದೆಹಲಿ ಗಲಭೆ: ಶಿವ ದೇಗುಲ ರಕ್ಷಿಸಿದ ಮುಸ್ಲಿಮರು

ಘೋಷಣೆ ಕೂಗಿದವರನ್ನು 'ಪ್ರಯಾಣಿಕರು' ಎಂದು ಉಲ್ಲೇಖಿಸಿರುವ ದೆಹಲಿ ಮೆಟ್ರೋ ರೈಲು ನಿಗಮ ನಿಯಮಿತ (ಡಿಎಂಆರ್‌ಸಿ), ನಿಲ್ದಾಣದಲ್ಲಿದ್ದ ಮೆಟ್ರೋ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ಅವರನ್ನು ಕೂಡಲೇ ಹಿಡಿದು ಮುಂದಿನ ಕ್ರಮ ತೆಗೆದುಕೊಳ್ಳಲು ದೆಹಲಿ ಮೆಟ್ರೋ ರೈಲು ಪೊಲೀಸರ ವಶಕ್ಕೆ ಒಪ್ಪಿಸಿದರು ಎಂದು ತಿಳಿಸಿದೆ.

ಶನಿವಾರ ಬೆಳಿಗ್ಗೆ 10.52ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ದೆಹಲಿ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿ ಮೆಟ್ರೋ ಆವರಣಗಳಲ್ಲಿ ಯಾವುದೇ ರೀತಿಯ ಪ್ರದರ್ಶನ ಅಥವಾ ಪ್ರತಿಭಟನೆಯನ್ನು ನಿಷೇಧಿಸಲಾಗಿದೆ.

Six Arrested For Goli Maaro Slogan In Delhi Metro Station

ಮೆಟ್ರೋ ನಿಲ್ದಾಣದಲ್ಲಿ ರೈಲು ನಿಲ್ಲುವ ವೇಳೆಗೆ ಗುಂಪು ಘೋಷಣೆಗಳನ್ನು ಕೂಗಲು ಆರಂಭಿಸಿತ್ತು ಎಂದು ವರದಿಯಾಗಿದೆ. ರೈಲಿನ ಒಳಗೆ ಪ್ರವೇಶಿಸಿದ ಬಳಿಕವೂ ಅವರು ಘೋಷಣೆಗಳನ್ನು ಕೂಗಲು ಮುಂದುವರಿಸಿದರು. ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿ ಕೂಗಿದ ಅವರು, ಜತೆಗೆ ದೇಶದ್ರೋಹಿಗಳಿಗೆ ಗುಂಡಿಕ್ಕಿ ಎಂದು ಕೂಗಿದರು. 'ದೇಶದ ಯುವಕರು ಸಿಎಎಯನ್ನು ಬೆಂಬಲಿಸಲು ಮತ್ತು ಸಮರ್ಥಿಸಿಕೊಳ್ಳಲು ಹೊರಬಂದಿದ್ದಾರೆ' ಎಂದು ಹೇಳಿದರು.

ಕೇಂದ್ರ ಸಚಿವ ಅನುರಾಗ್ ಠಾಕೂರ್, ದೆಹಲಿ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ದೇಶದ್ರೋಹಿಗಳಿಗೆ ಗುಂಡಿಕ್ಕಿ ಎಂದು ಹೇಳಿಕೆ ನೀಡಿದ್ದು ವಿವಾದ ಸೃಷ್ಟಿಸಿತ್ತು. ಅದರ ಬಳಿಕ ಬಿಜೆಪಿ ನಾಯಕ ಅಭಯ್ ವರ್ಮಾ ಕೂಡ ಹೇಳಿಕೆ ನೀಡಿದ್ದರು.

English summary
Six people have been arrested for 'Desh ke gaddaron ko, goli maaro..' slogan in Delhi's Rajiv Chowk metro station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X