ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಟ್ರಂಪ್ ಬೆದರಿಕೆ ಹಾಕಿದ್ದಾರೆ, ಇದು ದೇಶಕ್ಕೇ ಅವಮಾನ: ಯೆಚೂರಿ

|
Google Oneindia Kannada News

Recommended Video

ಭಾರತಕ್ಕೆ ಟ್ರಂಪ್ ಬೆದರಿಕೆ ಹಾಕಿದ್ದಾರೆ, ಇದು ದೇಶಕ್ಕೇ ಅವಮಾನ | Oneindia Kannada

ನವದೆಹಲಿ, ಜೂನ್ 28: ಭಾರತ ಅಮೆರಿಕದ ಮೇಲೆ ವಿಧಿಸಿರುವ ದುಬಾರಿ ಆಮದು ಸುಂಕವನ್ನು ಹಿಂತಪಡೆಯಬೇಕು ಎಂದು ಆಜ್ಞೆಯ ಧಾಟಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ ಟ್ವೀಟ್ ಅನ್ನು ಸಿಪಿಐ ಮುಖಂಡ ಸೀತಾರಾಮ್ ಯೆಚೂರಿ ಖಂಡಿಸಿದ್ದಾರೆ.

"ಭಾರತ ಅಮೆರಿಕದ ಮೇಲೆ ವಿಧಿಸಿರುವ ಆಮದು ಸುಂಕ ಅತಿಯಾಯಿತು. ಅದು ಖಂಡಿತ ಸ್ವೀಕಾರಾರ್ಹವಲ್ಲ. ಕೂಡಲೇ ಭಾರತ ಅದನ್ನು ಹಿಂಪಡೆಯಬೇಕು" ಎಂದು ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದರು.

ಎಂದೂ ಇಲ್ಲದಷ್ಟು ಆಪ್ತ ಸ್ನೇಹಿತರಾಗಿದ್ದೇವೆ: ಮೋದಿ ಟ್ರಂಪ್ ಮಾತುಕತೆ ಎಂದೂ ಇಲ್ಲದಷ್ಟು ಆಪ್ತ ಸ್ನೇಹಿತರಾಗಿದ್ದೇವೆ: ಮೋದಿ ಟ್ರಂಪ್ ಮಾತುಕತೆ

ಈ ಕುರಿತು ಪ್ರತಿಕ್ರಿಯೆ ನೀಡಿದ ಯೆಚೂರಿ, 'ಎಂದಿಗೂ ಭಾರತ ಈ ರೀತಿ ಸಾರ್ವಜನಿಕವಾಗಿ ಅವಮಾನಕ್ಕೊಳಗಾಗಿರಲಿಲ್ಲ, ಭಾರತದ ಮೇಲೆ ಬೆದರಿಕೆ ಒಡ್ಡುವ ಕೆಲಸವನ್ನೂ ಯಾರೂ ಮಾಡಿರಲಿಲ್ಲ. ಆದರೆ ಡೊನಾಲ್ಡ್ ಟ್ರಂಪ್ ಅವರ ಟ್ವೀಟ್ ನೋದಿದರೆ ಅವರು ನೇರವಾಗಿ ಭಾರತಕ್ಕೆ ಬೆದರಿಕೆ ಹಾಕುತ್ತಿರುವುದು ಕಂಡುಬರುತ್ತಿದೆ. ಇದು ಒಬ್ಬ ವ್ಯಕ್ತಿಗಲ್ಲ, ಇಡೀ ದೇಶಕ್ಕೇ ಅವಮಾನ. ಇಂಥ ನಡೆಯನ್ನು ವಿರೋಧಿಸಿ, ಒಂದು ದೇಶದ ಗೌರವ ಮತ್ತು ಪ್ರಧಾನಿ ಹುದ್ದೆಯ ಘನತೆಯನ್ನು ಕಾಪಾಡಬೇಕಾದ್ದು ಪ್ರಧಾನಿಯ ಕರ್ತವ್ಯ. ಆದರೆ ಅವರು ಹಾಗೆ ಮಾಡಲಿಲ್ಲ. ಈ ಬಗ್ಗೆ ಪ್ರತಿಕ್ರಿಯೆಯನ್ನೂ ನೀಡಲಿಲ್ಲ' ಎಂದು ಯೆಚೂರಿ ಟ್ವೀಟ್ ಮಾಡಿದ್ದಾರೆ.

Sitaram Yechury condemns Donald Trumps tweet and says, he threatened India

ಹಾರ್ಲೆ ಡೆವಿಡ್ಸನ್ ಮೋಟಾರ್‌ಸೈಕಲ್‌ಗಳ ಮೇಲಿನ ಆಮದು ಸುಂಕವನ್ನು ಭಾರತ ಇತ್ತೀಚೆಗೆ ಶೇ.100ರಿಂದ ಶೇ.50ಕ್ಕೆ ಇಳಿಸಿತ್ತು. ಆದರೆ ಅದೂ ತೀರಾ ಅತಿಯಾಗಿದೆ ಎಂದು ಟ್ರಂಪ್ ದೂರಿದ್ದರು. ಈ ಕುರಿತು ಗುರುವಾರ ಟ್ವೀಟ್ ಮಾಡಿದ್ದ ಟ್ರಂಪ್, ಇದು ಸ್ವೀಕಾರಾರ್ಹವಲ್ಲ. ಈ ಬಗ್ಗೆ ನಾನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡುತ್ತೇನೆ' ಎಂದಿದ್ದರು.

English summary
CPI leader Sitaram Yechury on Donald Trump's tweet of India's tarrifs, "Never has India been publicly threatened and insulted like this, and PM told off publicly. It is not about any person but the country's self-respect and the dignity of PM's post can't be held hostage to agenda of a ruling party and its leaders who can't stand up for India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X