ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಿಸ್‌ನಲ್ಲಿ 4,479 ಕೋಟಿ, ಭಾರತದಲ್ಲಿಯೇ 14,958 ಕೋಟಿ

By Kiran B Hegde
|
Google Oneindia Kannada News

ನವದೆಹಲಿ, ಡಿ. 13: 20 ಸಾವಿರ ಕೋಟಿ ರೂ. ಕಪ್ಪು ಹಣ ಪತ್ತೆ ಮಾಡಲಾಗಿದೆ. ಈ ಪೈಕಿ 14,958 ಕೋಟಿ ರೂ. ಭಾರತದಲ್ಲಿ ಹಾಗೂ 4,479 ಕೋಟಿ ರೂ. ಸ್ವಿಸ್ ಬ್ಯಾಂಕ್‌ನಲ್ಲಿದೆ. [ಮಾಹಿತಿ ಹಂಚಿಕೆಗೆ ಸ್ವಿಸ್ ಬ್ಯಾಂಕ್ ಒಪ್ಪಿಗೆ]

ಇದು ಕಪ್ಪುಹಣ ತನಿಖೆಯ ಸ್ಥಿತಿಗತಿ ಕುರಿತು ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ನ್ಯಾ. ಎಂ.ಬಿ. ಶಾ ನೇತೃತ್ವದ ವಿಶೇಷ ತನಿಖಾ ದಳ (ಎಸ್ಐಟಿ) ಸಲ್ಲಿಸಿರುವ ವರದಿಯ ಸಾರಾಂಶ. [ಈಗಿನ ಪಟ್ಟಿಯಲ್ಲಿ ಶೇ. 1ರಷ್ಟೂ ಹೆಸರಿಲ್ಲ]

ಎಚ್‌ಎಸ್‌ಬಿಸಿ ಬ್ಯಾಂಕ್‌ ಜಿನೆವಾ ಶಾಖೆ ತನ್ನಲ್ಲಿ ಖಾತೆಹೊಂದಿರುವ 628 ಭಾರತೀಯರ ಪಟ್ಟಿ ನೀಡಿತ್ತು. ಇವರಲ್ಲಿ 427 ಜನರ ವಿರುದ್ಧ ಮಾತ್ರ ಪ್ರಕರಣ ದಾಖಲಿಸಬಹುದು. 201 ಜನರು ಅನಿವಾಸಿ ಭಾರತೀಯರು ಅಥವಾ ಅವರ ಪತ್ತೆ ಸಾಧ್ಯವಿಲ್ಲ. ಈಗಾಗಲೇ ಆರೋಪಿಗಳಿಂದ 2,926 ಕೋಟಿ ರೂ.ಗಳನ್ನು ತೆರಿಗೆ ಹಾಗೂ ದಂಡದ ರೂಪದಲ್ಲಿ ಪಡೆಯಲಾಗಿದೆ ಎಂದು ವಿವರಿಸಿದೆ. [ಕಪ್ಪು ಹಣದ ಟೈಮ್ ಲೈನ್]

black

ಭಾರತದಲ್ಲಿ ಗಣಿಗಾರಿಕೆ, ವಂಚನೆ ಸ್ಕೀಂ ಹಾಗೂ ಕಬ್ಬಿಣದ ಅದಿರು ರಫ್ತು ಚಟುವಟಿಕೆಗಳು ಕಪ್ಪು ಹಣ ಚಲಾವಣೆಯ ಪ್ರಮುಖ ವಲಯಗಳಾಗಿವೆ. ಈ ಪ್ರಕರಣಗಳಲ್ಲಿ 14,958 ಕೋಟಿ ರೂ. ಕಪ್ಪುಹಣ ಪತ್ತೆಯಾಗಿದೆ. ಹಲವು ಪ್ರಕರಣಗಳಲ್ಲಿ ಆಸ್ತಿ ಜಪ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಲಾಗಿದೆ. ಕಪ್ಪುಹಣ ಪತ್ತೆ ಮತ್ತು ತಡೆಗೆ 13 ಅಂಶಗಳ ಮಾರ್ಗಸೂಚಿಯನ್ನು ಶಾ ಸಮಿತಿ ಶಿಫಾರಸ್ಸು ಮಾಡಿದೆ. [ಲಕೋಟೆ ಒಡೆಯುವ ಅಧಿಕಾರಿ ವಿಶೇಷ ತನಿಖಾ ದಳಕ್ಕೆ]

English summary
In the first major disclosure on black money SIT submits report to supreme court. Report tells that out of the 628 persons, 201 are either non-residents or non-traceable, leaving 427 persons cases as actionable cases. SIT traces Rs 4,479 crores in Swiss banks and Rs 14,958 crores in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X