ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಚಿರತೆಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ: ಮಾಹಿತಿ ನೀಡಿದ ಕೇಂದ್ರ

|
Google Oneindia Kannada News

ನವದೆಹಲಿ, ಡಿಸೆಂಬರ್ 21: 2014 ರಲ್ಲಿ ಸುಮಾರು 8,000 ಭಾರತದ ಚಿರತೆಗಳ ಸಂಖ್ಯೆಯು, 2018 ರಲ್ಲಿ 12,000 ಕ್ಕಿಂತ ಹೆಚ್ಚಾಗಿದೆ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಸೋಮವಾರ ತಿಳಿಸಿದ್ದಾರೆ.

ಹುಲಿಗಳು, ಸಿಂಹಗಳ ಬಗ್ಗೆ ಇದೇ ರೀತಿಯ ವರದಿಗಳು ಬಂದಿದ್ದು, ಈಗ ಚಿರತೆಗಳ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ. ಇದರಿಂದ ದೇಶವು ತನ್ನ ಪರಿಸರ ವಿಜ್ಞಾನ ಮತ್ತು ಜೀವವೈವಿಧ್ಯತೆಯನ್ನು ಚೆನ್ನಾಗಿ ರಕ್ಷಿಸುತ್ತಿದೆ ಎಂದು ತೋರಿಸುತ್ತದೆ ಎಂದರು.

ದೆಹಲಿಯಲ್ಲಿ ಕನಿಷ್ಠ ಉಷ್ಣಾಂಶ ಏರಿಕೆ, ಗಾಳಿಯ ಗುಣಮಟ್ಟ ತೀರಾ ಕಳಪೆದೆಹಲಿಯಲ್ಲಿ ಕನಿಷ್ಠ ಉಷ್ಣಾಂಶ ಏರಿಕೆ, ಗಾಳಿಯ ಗುಣಮಟ್ಟ ತೀರಾ ಕಳಪೆ

"ಚಿರತೆಗಳ ಸ್ಥಿತಿ ಭಾರತ-2018' ವರದಿಯನ್ನು ಬಿಡುಗಡೆ ಮಾಡಿದ ಕೇಂದ್ರ ಪರಿಸಿರ ಸಚಿವ, ಚಿರತೆಗಳ ಜನಸಂಖ್ಯೆಯನ್ನು ಕ್ಯಾಮೆರಾ ಟ್ರ್ಯಾಪಿಂಗ್ ವಿಧಾನವನ್ನು ಬಳಸಿಕೊಂಡು ಅಂದಾಜಿಸಲಾಗಿದೆ ಎಂದು ಹೇಳಿದರು.

Significant Increase In Leopard Numbers In India: Information By Central Government

ವರದಿಯ ಪ್ರಕಾರ, 2018 ರಲ್ಲಿ ಭಾರತದ ಚಿರತೆ ಸಂಖ್ಯೆಯು 12,852 ಎಂದು ಅಂದಾಜಿಸಲಾಗಿದ್ದು, ಮಧ್ಯಪ್ರದೇಶದಲ್ಲಿ ಗರಿಷ್ಠ 3,421, ಮತ್ತು ಕರ್ನಾಟಕದಲ್ಲಿ 1,783 ಮತ್ತು ಮಹಾರಾಷ್ಟ್ರದಲ್ಲಿ 1,690 ಚಿರತೆಗಳಿವೆ.

ಪ್ರದೇಶವಾರು ಹಂಚಿಕೆಗೆ ಸಂಬಂಧಿಸಿದಂತೆ, ಮಧ್ಯ ಭಾರತ ಮತ್ತು ಪೂರ್ವ ಘಟ್ಟಗಳಲ್ಲಿ ಅತಿ ಹೆಚ್ಚು ಅಂದರೆ 8,071 ಚಿರತೆಗಳು ಕಂಡುಬಂದಿವೆ, ಇದರಲ್ಲಿ ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಒಡಿಶಾ, ಛತ್ತೀಸ್‍ಘಡ, ಜಾರ್ಖಂಡ್, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳು ಸೇರಿವೆ.

Significant Increase In Leopard Numbers In India: Information By Central Government

ಕರ್ನಾಟಕ, ತಮಿಳುನಾಡು, ಗೋವಾ ಮತ್ತು ಕೇರಳವನ್ನು ಒಳಗೊಂಡಿರುವ ಪಶ್ಚಿಮ ಘಾಟ್ ಪ್ರದೇಶದಲ್ಲಿ 3,387 ಚಿರತೆಗಳಿದ್ದರೆ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಬಿಹಾರ ರಾಜ್ಯಗಳ ಶಿವಾಲಿಕ್ ಮತ್ತು ಗಂಗಾ ಬಯಲು ಪ್ರದೇಶಗಳಲ್ಲಿ 1,253 ಚಿರತೆಗಳಿವೆ ಎಂದು ಅಂದಾಜಿಸಲಾಗಿದೆ. ಈಶಾನ್ಯ ಬೆಟ್ಟಗಳಲ್ಲಿ ಕೇವಲ 141 ಚಿರತೆಗಳಿವೆ ಎಂದು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಮಾಹಿತಿ ನೀಡಿದರು.

English summary
The number of leopards in India is about 8,000 in 2014, up from 12,000 in 2018, Union Environment Minister Prakash Javadekar said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X