ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮಾನತ್ತಾದ ಶಾಸಕ ರೋಶನ್ ಬೇಗ್‌ ಬಗ್ಗೆ ಸಿದ್ದರಾಮಯ್ಯ ಹೇಳಿದ್ದು ಹೀಗೆ

|
Google Oneindia Kannada News

ನವದೆಹಲಿ, ಜೂನ್ 19: ತಮ್ಮ ವಿರುದ್ಧ ದನಿ ಎತ್ತಿದ್ದ ರೋಶನ್ ಬೇಗ್ ಅವರನ್ನು ಪಕ್ಷದಿಂದ ಉಚ್ಛಾಟಿಸುವಲ್ಲಿ ಯಶಸ್ವಿ ಆಗಿರುವ ಸಿದ್ದರಾಮಯ್ಯ ಅವರು, ಇದೀಗ ಘಟನೆ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.

ದೆಹಲಿಯಲ್ಲಿರುವ ಸಿದ್ದರಾಮಯ್ಯ ಅವರು ತಾವೇ ಖುದ್ದಾಗಿ ಕಾಳಜಿವಹಿಸಿ ರೋಶನ್ ಬೇಗ್ ಅವರ ಅಮಾನತ್ತಿಗೆ ಅಂತಿಮ ಸಹಿ ಬೀಳುವಂತೆ ನೋಡಿಕೊಂಡಿದ್ದಾರೆ ಎನ್ನಲಾಗಿದೆ.

ವಿಶ್ವನಾಥ್-ರಾಮಲಿಂಗಾರೆಡ್ಡಿ ಭೇಟಿ: ಸಿದ್ದರಾಮಯ್ಯಗೆ ರಾಜಕೀಯ ಖೆಡ್ಡಾ?ವಿಶ್ವನಾಥ್-ರಾಮಲಿಂಗಾರೆಡ್ಡಿ ಭೇಟಿ: ಸಿದ್ದರಾಮಯ್ಯಗೆ ರಾಜಕೀಯ ಖೆಡ್ಡಾ?

'ನಾನು ಸಿದ್ದರಾಮಯ್ಯ ಅವರ ಕಾಂಗ್ರೆಸ್‌ನಲ್ಲಿ ಇಲ್ಲ' ಎಂದು ಉಚ್ಛಾಟನೆ ಆದ ಬಳಿಕ ಶಾಸಕ ರೋಶನ್ ಬೇಗ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, 'ನಾವೆಲ್ಲ ಇಂಡಿಯನ್ ಕಾಂಗ್ರೆಸ್‌ನಲ್ಲಿ ಇದ್ದೀವಿ ರೋಶನ್ ಬೇಗ್ ಎಲ್ಲಿದ್ದಾರೋ ಗೊತ್ತಿಲ್ಲ' ಎಂದಿದ್ದಾರೆ.

Siddaramaiah talked about expeled congress MLA Roshan Baig

ರೋಶನ್ ಬೇಗ್ ಅವರನ್ನು ಅಮಾನತ್ತು ಮಾಡಿರುವುದು ಎಐಸಿಸಿ ಕಾಂಗ್ರೆಸ್ ನಾನಲ್ಲ ಎಂದು ಸಿಟ್ಟಿನಿಂದ ಪ್ರತಿಕ್ರಿಯಿಸಿದ್ದಾರೆ.

ಎಚ್.ವಿಶ್ವನಾಥ್ ಅವರು ಜಿಂದಾಲ್ ವಿಚಾರ ಪ್ರಸ್ತಾಪಿಸಿ ಸಿದ್ದರಾಮಯ್ಯ ವಿರುದ್ಧ ಟೀಕೆ ಮಾಡಿರುವ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಅಷ್ಟೋಂದು ಕಾಳಜಿ ಇದ್ದಲ್ಲಿ, ವಿಶ್ವನಾಥ್ ಅವರು ಸಿಎಂ ಜೊತೆ ಚರ್ಚಿಸಲಿ, ಅನಗತ್ಯವಾಗಿ ನನ್ನ ಹೆಸರನ್ನೇಕೆ ಎಳೆದು ತರುತ್ತಾರೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಕುತೂಹಲ ಕೆರಳಿಸಿದ ಮಾಜಿ ಸಿದ್ದರಾಮಯ್ಯ ದೆಹಲಿ ಭೇಟಿ! ಕುತೂಹಲ ಕೆರಳಿಸಿದ ಮಾಜಿ ಸಿದ್ದರಾಮಯ್ಯ ದೆಹಲಿ ಭೇಟಿ!

ಜಿಂದಾಲ್ ಸಂಸ್ಥೆಗೆ ಭೂಮಿ ನೀಡುತ್ತಿರುವ ಬಗ್ಗೆ ಸಚಿವ ಜಾರ್ಜ್‌ ಬಳಿ ಚರ್ಚೆ ನಡೆಸಿದ್ದು, ಪರಿಶಿಲನೆ ನಡೆಸುವಂತೆ ಸೂಚಿಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.

English summary
Siddaramaiah talked about expeled Congress MLA Roshan Baig. He said we are all in Indian national congress, don't know where Roshan Baig is.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X