ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೈರು ಹಾಜರಾದ ಸಚಿವನಿಗೆ ವೆಂಕಯ್ಯ ನಾಯ್ಡು ತರಾಟೆ!

|
Google Oneindia Kannada News

ನವದೆಹಲಿ, ಜುಲೈ 19: ಸಂಸತ್ತಿಗೆ ಗೈರು ಹಾಜರಾದ ಸಚಿವರೊಬ್ಬರನ್ನು ರಾಜ್ಯ ಸಭೆ ಅಧ್ಯಕ್ಷ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.

ಕೇಂದ್ರ ಪಶುಸಂಗೋಪನೆ, ಮೀನುಗಾರಿಕೆ ಮತ್ತು ಹೈನುಗಾರಿಕೆ ಸಚಿವ ಸಂಜೀವ್ ಕುಮಾರ್ ಬಲ್ಯಾಣ್ ಅವರು ಇತ್ತೀಚೆಗೆ ಸಂಸತ್ತಿಗೆ ಹಾಜರಾಗಿರಲಿಲ್ಲ. ಆದ್ದರಿಂದ ಅವರನ್ನು ತಮ್ಮ ಬಳಿ ಕರೆಸಿಕೊಂಡು, ಈ ತಪ್ಪನ್ನು ಪುನರಾವರ್ತಿಸಬೇಡಿ, ಸಂಸತ್ತಿಗೆ ಗೈರು ಹಾಜರಾಗುವುದನ್ನು ನಾವು ಪ್ರೋತ್ಸಾಹಿಸುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು.

ಮೇಲ್ಮನೆಯಲ್ಲಿ ಬಹುಮತ, ಪ್ರಧಾನಿ ಮೋದಿ ಚಿಂತೆ ಮಾಡ್ತಿಲ್ಲವೇಕೆ?ಮೇಲ್ಮನೆಯಲ್ಲಿ ಬಹುಮತ, ಪ್ರಧಾನಿ ಮೋದಿ ಚಿಂತೆ ಮಾಡ್ತಿಲ್ಲವೇಕೆ?

ಸಂಸತ್ತಿನ ಕಾರ್ಯ, ಕಲಾಪಗಳಿಗೆ ಪ್ರತಿಯೊಬ್ಬ ಸಂಸದರೂ ಹಾಜರಿರಬೇಕು. ಅನಿವಾರ್ಯ ಕಾರಣಗಳನ್ನು ಹೊರತುಪಡಿಸಿ, ಬೇರೆ ಸಮಯಗಳಲ್ಲಿ ಅವರು ಕಡ್ಡಾಯವಾಗಿ ಹಾಜರಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಆದೇಶಿಸಿದ್ದಾರೆ.

Should not happen in future: Venkaiah Naidu to absent minister

ಪ್ರತಿ ದಿನ ಸಂಜೆ ಹಾಜರಿ ಪುಸ್ತಕವನ್ನು ತಮಗೆ ತೋರಿಸುವಂತೆಯೂ ಹೇಳಿದ್ದಾರೆ. ಅದ್ದರಿಂದ ಎಲ್ಲ ಸಂಸದರೂ ಸಂಸತ್ತಿನಲ್ಲಿ ಪ್ರತಿದಿನ ಹಾಜರಿರುತ್ತಿದ್ದಾರೆ.

ಲೋಕಸಭೆಯಲ್ಲಿ ಮಾತ್ರವಲ್ಲ, ಇನ್ನು ರಾಜ್ಯಸಭೆಯಲ್ಲಿಯೂ ಎನ್‌ಡಿಎ ದರ್ಬಾರುಲೋಕಸಭೆಯಲ್ಲಿ ಮಾತ್ರವಲ್ಲ, ಇನ್ನು ರಾಜ್ಯಸಭೆಯಲ್ಲಿಯೂ ಎನ್‌ಡಿಎ ದರ್ಬಾರು

ರಾಜ್ಯ ಸಭೆ ಅಧ್ಯಕ್ಷರ ಸೂಚನೆ ಬಗ್ಗೆ ಮಾತನಾಡಿದ ಸಂಜೀವ್ ಕುಮಾರ್ ಬಲ್ಯಾಣ್, ನಾನು ಹಾಜರಿರಬೇಕಿತ್ತು. ಮತ್ತೆ ಈ ತಪ್ಪು ಆಗದಂತೆ ನೋಡಿಕೊಳ್ಳುತ್ತೇನೆ ಎಂದರು.

English summary
Rajya Sabha chairperson Venkaiah Naidu warns minister Sanjeev Kumar Balyan for not being present in Parliament recently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X