ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ರಾಜೀನಾಮೆ ಕೊಡಲೇ ಎಂದು ಕೇಳಿದ್ದ ಮನಮೋಹನ್ ಸಿಂಗ್

|
Google Oneindia Kannada News

ನವದೆಹಲಿ, ಫೆಬ್ರವರಿ 17: ಕೇಂದ್ರ ಸರ್ಕಾರದ ಅಧಿಸೂಚನೆಯನ್ನು ರಾಹುಲ್ ಗಾಂಧಿ ಹರಿದು ಹಾಕಿದ ಬಳಿಕ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ರಾಜೀನಾಮೆ ನೀಡಲು ಮುಂದಾಗಿದ್ದರು.

ಅಮೆರಿಕದಿಂದ ಹಿಂತಿರುಗುತ್ತಿದ್ದ ಮನಮೋಹನ್ ಸಿಂಗ್ ಆ ಸಂದರ್ಭದಲ್ಲಿನ ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾಬಳಿ ರಾಜೀನಾಮೆ ಪ್ರಸ್ತಾಪ ಮಾಡಿದ್ದರು.

ರಾಹುಲ್ ಗಾಂಧಿ ವರ್ತನೆಯಿಂದ ಆಘಾತಕ್ಕೊಳಗಾಗಿದ್ದ ಮನಮೋಹನ್ ಸಿಂಗ್ ವಿಮಾನದಲ್ಲಿ ಅಹ್ಲುವಾಲಿಯಾ ಬಳಿ ಚರ್ಚಿಸಿ ನಾನು ರಾಜೀನಾಮೆ ನೀಡಲೇ ಎಂದು ಪ್ರಶ್ನಿಸಿದ್ದರಂತೆ.

singh
ಈ ವಿಚಾರವನ್ನು ಅಹ್ಲುವಾಲಿಯಾ ಖುದ್ದಾಗಿ ಬಹಿರಂಗಪಡಿಸಿದ್ದಾರೆ. ಅಹ್ಲುವಾಲಿಯಾ ಅವರ 'ಬ್ಯಾಕ್ ಸ್ಟೇಜ್: ದ ಸ್ಟೋರಿ ಬಿಹೈಂಡ್ ಇಂಡಿಯಾಸ್ ಹೈಗ್ರೋಥ್ ಇಯರ್ಸ್' ಪುಸ್ತಕದಲ್ಲಿ ವಿಚಾರವನ್ನು ಬರೆದಿದ್ದಾರೆ.

ರಾಹುಲ್ ಗಾಂಧಿ ವರ್ತನೆ ಹಾಗೂಮನಮೋಹನ್ ಸಿಂಗ್ ಬಗ್ಗೆ ಅಹ್ಲುವಾಲಿಯಾ ಸಹೋದರ ತುಂಬ ಕಟುವಾಗಿ ಮಾಧ್ಯಮದಲ್ಲಿ ಬರೆದಿದ್ದರು. ಸಂಜೀವ್ ಮೊದಲಿನಿಂದಲೂ ಮನಮೋಹನ್ ಸಿಂಗ್ ಸರ್ಕಾರದ ಟೀಕಾಕಾರರಾಗಿದ್ದರು.

ಎಸ್‌.ಎಂ.ಕೃಷ್ಣ ಬದಲಿಗೆ ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದು ಹೇಗೆ?ಎಸ್‌.ಎಂ.ಕೃಷ್ಣ ಬದಲಿಗೆ ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದು ಹೇಗೆ?

ಹೀಗಾಗಿ ಸಹೋದರನ ಲೇಖನವನ್ನು ಅಹ್ಲುವಾಲಿಯಾಗೆ ತೋರಿಸಿ ನಾನು ರಾಜೀನಾಮೆ ನೀಡಲೇ ಎಂದು ಮನಮೋಹನ್ ಸಿಂಗ್ ಪ್ರಶ್ನಿಸಿದ್ದರಂತೆ ಅದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದ ಅಹ್ಲುವಾಲಿಯಾ ರಾಜೀನಾಮೆ ನೀಡುವುದು ಮೂರ್ಖತನ ಹಾಗೆ ಮಾಡಬೇಡಿ ಎಂದು ಅಹ್ಲುವಾಲಿಯಾ ಸಲಹೆ ನೀಡಿದ್ದರಂತೆ.

ಆದರೆ ನಿರ್ಧಾರವನ್ನು ಮಾಡಿ ಕೇವಲ ಅಭಿಪ್ರಾಯವನ್ನು ಕೇಳಿದ್ದರೋ ಅಥವಾ ನಿಜವಾಗಿಯೂ ರಾಜೀನಾಮೆ ನೀಡಲು ಮುಂದಾಗಿದ್ದರೋ ಎನ್ನುವುದು ಸ್ಪಷ್ಟವಾಗಿರಲಿಲ್ಲ ಎಂದು ಅಹ್ಲುವಾಲಿಯಾ ಹೇಳಿಕೊಂಡಿದ್ದಾರೆ.

2013ರಲ್ಲಿ ಮನಮೋಹನ್ ಸಿಂಗ್ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಪ್ರವಾಸಕ್ಕೆ ಹೋಗುವ ಮುನ್ನ ಸಚಿವ ಸಂಪುಟದಲ್ಲಿ ವಿಶೇಷ ಅಧಿಸೂಚನೆಯೊಂದನ್ನು ತರಲು ಒಪ್ಪಿಗೆ ನೀಡಲಾಗಿತ್ತು.

ಆ ಪ್ರಕಾರ ಕಳಂಕಿತ ಜನಪ್ರತಿನಿಧಿಗಳ ರಕ್ಷಣೆಗಾಗಿ ಅಧಿಸೂಚನೆ ತರಲಾಗಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ರಾಹುಲ್ ಗಾಂಧಿ ಸುದ್ದಿಗೋಷ್ಠಿಯೊಂದರಲ್ಲಿ ಆಕ್ರೋಶ ವ್ಯಕ್ತಪಡಿಸಿ ಅಧಿಸೂಚನೆಯನ್ನು ಹರಿದು ಹಾಕಿದ್ದರು.

English summary
After 2013 ordinance-trashing episode then Prime minister Manmohan Singh Asked Planning Commission Chairman Montek Singh Ahluwalia that Should Resign. He turmed it has complete nonsense.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X