ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಚುನಾವಣೆಗೂ ಮುನ್ನ ಸುಬ್ರಮಣಿಯನ್ ಸ್ವಾಮಿ ಶಾಕಿಂಗ್ ಹೇಳಿಕೆ

|
Google Oneindia Kannada News

ನವದೆಹಲಿ, ಮಾರ್ಚ್ 01: "ಕಳೆದ ಐದು ವರ್ಷಗಳಲ್ಲಿ ವಿತ್ತ ಸಚಿವಾಲಯ ಭಾರತದ ಆರ್ಥಿಕ ನೀತಿಗಳನ್ನು ನಿಭಾಯಿಸಿದ ರೀತಿಯ ಬಗ್ಗೆ ನನಗೆ ಸಮಾಧಾನವಿಲ್ಲ, ಅಪನಗದೀಕರಣವನ್ನು ಸರಿಯಾಗಿ ಜಾರಿಗೊಳಿಸಲಾಗಿಲ್ಲ" ನ್ನುವ ಮೂಲಕ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು ಚುನಾವಣೆ ಹೊತ್ತಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.

"ಅರುಣ್ ಜೇಟ್ಲಿ ಅರ್ಥಶಾಸ್ತ್ರವನ್ನೇ ಓದಿಲ್ಲ. ಅಪನಗದೀಕರಣದ ಉದ್ದೇಶ ಒಳ್ಳೆಯದೇ ಆಗಿತ್ತು. ಆದರೆ ಅದನ್ನು ಜಾರಿಗೊಳಿಸುವಲ್ಲಿ ಅರುಣ್ ಜೇಟ್ಲಿ ಎಡವಿದರು" ಎಂದು ಸ್ವಾಮಿ ಹೇಳಿದರು.

ಟ್ರೆಂಡಿಂಗ್ : ಮೋದಿ 'ಚೌಕಿದಾರ' ಅಭಿಯಾನದ ಬಗ್ಗೆ 'ಬಾಹ್ಮಣ' ಸ್ವಾಮಿ ಟ್ರೆಂಡಿಂಗ್ : ಮೋದಿ 'ಚೌಕಿದಾರ' ಅಭಿಯಾನದ ಬಗ್ಗೆ 'ಬಾಹ್ಮಣ' ಸ್ವಾಮಿ

"2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸ ನನಗಿದೆ. ಆದರೆ ಅರುಣ್ ಜೇಟ್ಲಿ ಅವರ ಬಗ್ಗೆ ನನಗೆ ಯಾವುದೇ ಅಕ್ಕರೆ ಇಲ್ಲ" ಎಂದು ಅವರು ಹೇಳಿದರು.

ಜೇಟ್ಲಿ, ಚಿದಂಬರಂಗೆ ಅರ್ಥಶಾಸ್ತ್ರ ಗೊತ್ತಿಲ್ಲ

ಜೇಟ್ಲಿ, ಚಿದಂಬರಂಗೆ ಅರ್ಥಶಾಸ್ತ್ರ ಗೊತ್ತಿಲ್ಲ

"ನನಗೆ ಅರುಣ್ ಜೇಟ್ಲಿ ಗೊತ್ತಿಲ್ಲ. ಅರ್ಥಶಾಸ್ತ್ರವೇ ಗೊತ್ತಿಲ್ಲದ ಹಲವರು ವಿತ್ತ ಸಚಿವರಾಗಿದ್ದಾರೆ. ಜೇಟ್ಲಿಗಾಗಲೀ, ಚಿದಂಬರಂಗಾಗಲೀ ಅರ್ಥಶಾಸ್ತ್ರದ ಪರಿಚಯವಿಲ್ಲ. ಮನಮೋಹನ್ ಸಿಂಗ್ ಅವರಿಗೆ ಅರ್ಥಶಾಸ್ತ್ರ ಗೊತ್ತಿತ್ತು" ಎಂದು ಅವರು ಹೇಳಿದರು.

ನರೇಂದ್ರ ಮೋದಿಯೇ ಮತ್ತೆ ಪ್ರಧಾನಿ

ನರೇಂದ್ರ ಮೋದಿಯೇ ಮತ್ತೆ ಪ್ರಧಾನಿ

ನರೇಂದ್ರ ಮೋದಿ ಅವರೇ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂಬ ನಂಬಿಕೆ ನನಗಿದೆ. ಅವರಿಗೆ ಈ ಬಾರಿ ಯಾವುದೇ ಸವಾಲಿಲ್ಲ. ಬ್ರಾಂಡ್ ಮೋದಿ ಎಂಬುದಕ್ಕಿಂತ ಬಿಜೆಪಿಯ ಹಿಂದುತ್ವ ಮತ್ತು ರಾಷ್ಟ್ರೀಯತೆಯ ಸಿದ್ಧಾತದಿಂದಾಗಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಅವರು ಹೇಳಿದರು.

ಇದು ದೇಶ ರಕ್ಷಣೆ ಕಾರ್ಯ, ಗಡಿ ಕಾನೂನು ಉಲ್ಲಂಘಿಸಿಲ್ಲ : ಸ್ವಾಮಿಇದು ದೇಶ ರಕ್ಷಣೆ ಕಾರ್ಯ, ಗಡಿ ಕಾನೂನು ಉಲ್ಲಂಘಿಸಿಲ್ಲ : ಸ್ವಾಮಿ

ಅಪನಗದೀಕರಣದ ಉದ್ದೇಶ ಒಳ್ಳೆಯದೆ

ಅಪನಗದೀಕರಣದ ಉದ್ದೇಶ ಒಳ್ಳೆಯದೆ

ಅಪನಗದೀಕರಣದ ಉದ್ದೇಶ ಒಳ್ಳೆಯದೆ. ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಜಾರಿಗೆ ತಂದ ಅದನ್ನು ಸರಿಯಾಗಿ ಜಾರಿಗೆ ತರಲು ಅರ್ಥಶಾಸ್ತ್ರವನ್ನೇ ಓದಿರದ ಅರುಣ್ ಜೇಟ್ಲಿ ವಿಫಲರಾಗಿದ್ದಾರೆ ಎಂದು ಅವರು ಹೇಳಿದರು.

ಲೋಕಸಭೆ ಚುನಾವಣೆ ಯಾವಾಗ?

ಲೋಕಸಭೆ ಚುನಾವಣೆ ಯಾವಾಗ?

ಲೋಕಸಭಾ ಚುನಾವಣೆ ಏಪ್ರಿಲ್ 11 ರಂದು ಆರಂಭವಾಗಿ ಮೇ 19 ರವರೆಗೆ ನಡೆಯಲಿದೆ. ಒಟ್ಟು ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 23 ರಂದು ಫಲಿತಾಂಶ ಹೊರಬೀಳಲಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

English summary
BJP leader Subramanian Swamy said, he is not happy with economic policies of NDA government. He also attacks finance minister Arun Jaitley for not implementing demonetisation properly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X