ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಎಪಿ ಸಹವಾಸ ಬೇಡ... ರಾಹುಲ್ ಗಾಂಧಿಗೆ ಶೀಲಾ ದೀಕ್ಷಿತ್ ಪತ್ರ

|
Google Oneindia Kannada News

ನವದೆಹಲಿ, ಮಾರ್ಚ್ 19: ರಾಜಧಾನಿ ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಎಎಪಿ ಮತ್ತೊಮ್ಮೆ ಮೈತ್ರಿಗೆ ಮುಂದಾಗಿರುವುದು ಕಾಂಗ್ರೆಸ್ ನ ಕೆಲವು ಹಿರಿಯ ತಲೆಗಳಿಗೆ ಇಷ್ಟವಿಲ್ಲ. ಅದಕ್ಕೆಂದೇ ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ದೆಹಲಿ ಕಾಂಗ್ರೆಸ್ ಅಧ್ಯಕ್ಷೆ ಶೀಲಾ ದೀಕ್ಷಿತ್ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ.

ದೆಹಲಿಯಲ್ಲಿ ಮತ್ತೆ ಚಿಗುರಿದ ಕನಸು! 'ಪೊರಕೆ' ಹಿಡಿಯೋಕೆ 'ಕೈ' ರೆಡಿ?ದೆಹಲಿಯಲ್ಲಿ ಮತ್ತೆ ಚಿಗುರಿದ ಕನಸು! 'ಪೊರಕೆ' ಹಿಡಿಯೋಕೆ 'ಕೈ' ರೆಡಿ?

"ಕಾಂಗ್ರೆಸ್ ನ ಭವಿಷ್ಯದ ದೃಷ್ಟಿಯಿಂದ ಈ ಮೈತ್ರಿ ಒಳ್ಳೆಯದಲ್ಲ. ಅಷ್ಟೇ ಪಕ್ಷದ ಕಾರ್ಯಕರ್ತರಿಗೂ ಇದರಿಂದ ನೋವಾಗುತ್ತದೆ. ಆದ್ದರಿಂದ ಆಪ್ ಜೊತೆ ಕಾಂಗ್ರೆಸ್ ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳಬಾರದು" ಎಂದು ಶೀಲಾ ದೀಕ್ಷಿತ್ ಪತ್ರದಲ್ಲಿ ಬರೆದಿದ್ದಾರೆ.

Sheila Dikshit writes to Rahul Gandhi, says do not ally with AAP

ಲೋಕಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷವೇ ಮೈತ್ರಿ ಪ್ರಸ್ತಾಪ ಮುಂದಿಟ್ಟರೂ, ಕಾಂಗ್ರೆಸ್ ಅದಕ್ಕೆ ಒಪ್ಪಿರಲಿಲ್ಲ. ಕಾಯುವಷ್ಟು ಕಾದ ನಂತರ ಎಎಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿತ್ತು. ಆದರೆ ಇದೀಗ ಕಾಂಗ್ರೆಸ್ ವರಸೆ ಬದಲಿಸಿದೆ.

ಪುಲ್ವಾಮಾ ದಾಳಿಗೂ ಮುನ್ನ ಗೆಲ್ಲುವ ಹುಮ್ಮಸ್ಸಿನಲ್ಲಿದ್ದ ಕಾಂಗ್ರೆಸ್ ಇದೀಗ ದೆಹಲಿಯ ಏಳು ಲೋಕಸಭಾ ಕ್ಷೇತ್ರಗಳಲ್ಲೂ ಮೈತ್ರಿ ಅನಿವಾರ್ಯ ಎಂಬ ನಿರ್ಧಾರಕ್ಕೆ ಬಂದಿದ್ದು, ಆಮ್ ಆದ್ಮಿ ಪಕ್ಷದೊಂದಿಗೆ ಕೈಜೋಡಿಸುವ ಸಾಧ್ಯತೆ ಇದೆ.

ದೆಹಲಿಯಲ್ಲಿ ದುರಂಹಕಾರಿ ಕಾಂಗ್ರೆಸ್ಸಿಗರು ಠೇವಣಿ ಕಳೆದುಕೊಳ್ಳಲಿದ್ದಾರೆ: ಕೇಜ್ರಿವಾಲ್ ದೆಹಲಿಯಲ್ಲಿ ದುರಂಹಕಾರಿ ಕಾಂಗ್ರೆಸ್ಸಿಗರು ಠೇವಣಿ ಕಳೆದುಕೊಳ್ಳಲಿದ್ದಾರೆ: ಕೇಜ್ರಿವಾಲ್

ಆದರೆ ಅದಕ್ಕೆ ದೆಹಲಿ ಘಟಕದ ಕಾಂಗ್ರೆಸ್ ಒಪ್ಪುತ್ತಿಲ್ಲ.

ಮೇ 12 ರಂದು ದೆಹಲಿ ಲೋಕಸಭೆಯ ಏಳು ಕ್ಹಶೇತ್ರಗಳಲಿಗೆ ಮತದಾನ ನಡೆಯಲಿದ್ದು, ಮೇ 23 ರಂದು ಫಲಿತಾಂಶ ಹೊರಬರಲಿದೆ.

English summary
As Congress' central leaders are planning to an alliance with AAP in Delhi, Former CM of the nation capital Sheila Dikshit wrtes a letter to Rahul Gandhi, And requests him not to ally with AAP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X