ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಸಿಎಂ ಅಧಿಕೃತ ಮನೆಯಲ್ಲಿತ್ತು 31 ಎಸಿ

By Mahesh
|
Google Oneindia Kannada News

ನವದೆಹಲಿ, ಜು.4: ದೇಶದ ರಾಜಧಾನಿಯಲ್ಲಿ ಅರಾಜಕತೆ ಮೂಡುವ ಮುನ್ನ ವಿದ್ಯುತ್ ಕ್ಷಾಮ ಎದುರಿಸಿದ್ದು ಏಕೆ ಎಂಬ ಸತ್ಯ ಈಗ ಹೊರ ಬಿದ್ದಿದೆ. ಮಾಜಿ ಸಿಎಂ ಶೀಲಾ ಮೇಡಂ ಮನೆಗೆ ಎಲ್ಲಾ ವಿದ್ಯುತ್ ಪೂರೈಕೆಯಾಗಿದ್ದೇ ಕಾರಣ ಎಂದು ಸಾಮಾಜಿಕ ಜಾಲ ತಾಣದಲ್ಲೊಂದು ನಗೆ ಚಾಟಿ ಕಂಡು ಬಂದಿದೆ. ಆದರೆ, ಇದು ಸತ್ಯಕ್ಕೆ ದೂರವಾದ ಮಾತೇನು ಅಲ್ಲ ಎಂಬುದು ಈಗ ಆರ್ ಟಿಐ ಮೂಲಕ ತಿಳಿದು ಬಂದಿದೆ.

ಕೇಂದ್ರದ ಮಾಜಿ ಸಚಿವ ಕಪಿಲ್ ಸಿಬಲ್ ಅವರ ಐಷಾರಾಮಿ ಬಂಗಲೆ ಚರ್ಚೆಗೆ ಕಾರಣವಾದ ಬೆನ್ನಲ್ಲೇ ಕೇರಳದ ರಾಜ್ಯಪಾಲೆ, ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಐಶಾರಾಮಿ ಜೀವನದ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಐಷಾರಾಮಿ ಜೀವನ ನಡೆಸುವುದು ತಪ್ಪಲ್ಲವಾದರೂ ಭೋಗ ಭಾಗ್ಯಕ್ಕಾಗಿ ಸರ್ಕಾರದ ಬೊಕ್ಕಸದ ಹಣವನ್ನು ಖರ್ಚು ಮಾಡುವುದು ಎಷ್ಟರಮಟ್ಟಿಗೆ ಸರಿ ಎಂದು ಆರ್ ಟಿಐ ಕಾರ್ಯಕರ್ತರು ಪ್ರಶ್ನಿಸಿದ್ದಾರೆ.

Sheila Dikshit had 31 ACs at official residence: RTI activist

ಭಾರಿ ಪ್ರಮಾಣದ ಎಲೆಕ್ಟ್ರಾನಿಕ್ ಉಪಕರಣಗಳನ್ನ ಬಳಸಿ ಶೀಲಾ ದೀಕ್ಷಿತ್ ಸ್ವೇಚ್ಛಾಚಾರ ಜೀವನ ನಡೆಸಿದ್ದಾರೆ. ಶೀಲಾ ದೀಕ್ಷಿತ್ ಮನೆಯಲ್ಲಿ ಬರೋಬ್ಬರಿ 31 ಎಸಿಗಳಿದ್ದವು. ಜೊತೆಗ 15 ಡೆಸರ್ಟ್ ಕೂಲರ್ಸ್, 25 ಹೀಟರ್ ಗಳಿದ್ದವು. ಈ ಭಾರೀ ಪ್ರಮಾಣದ ಎಲೆಕ್ಟ್ರಾನಿಕ್ ಉಪಕರಣಗಳ ಜೊತೆಗೆ ಟಿ.ವಿ, ಫ್ರಿಡ್ಜ್ ಸೇರಿದಂತೆ ಇನ್ನಿತರೆ ಪಕರಣಗಳನ್ನ ಬಳಸಿ ಶೀಲಾ ದೀಕ್ಷಿತ್ ಒಟ್ಟು 16.81.119 ಲಕ್ಷ ರೂಪಾಯಿ ಬಿಲ್ ಮಾಡಿದ್ದಾರೆ ಎಂದು ಆರ್ ಟಿಐ ಕಾರ್ಯಕರ್ತ ಸುಭಾಷ್ ಚಂದ್ರ ಅಗರವಾಲ್ ಹೇಳಿದ್ದಾರೆ.

ಇಡೀ ದೆಹಲಿ ಬಿಸಿಲಿನಿಂದ ಬಳಲುವಾಗ ದೆಹಲಿಯ ಮೋತಿಲಾಲ್ ನೆಹರೂ ನಂ.3 ನಿವಾಸದಲ್ಲಿ ಎಸಿ ಕೂಲರ್ ಕೆಳಗೆ ಶೀಲಾ ಅವರು ವಿಶ್ರಾಂತಿ ಪಡೆಯುತ್ತಿದ್ದರು.

ಸುಮಾರು ಮೂರು ಎಕರೆ ವಿಸ್ತೀರ್ಣದಲ್ಲಿರುವ ಟೈಪ್ VIII ಬಂಗಲೆಯಲ್ಲಿ 25 ಹೀಟರ್, 12 ಗೀಸರ್( 50 ಹಾಗೂ 25 ಲೀಟರ್ ಕೆಪಾಸಿಟಿ), ರೆಫ್ರಿಜರೇಟರ್(265, 310 ಲೀಟರ್) ಎರಡು ಮೈಕ್ರೋ ವೇವ್ ಓವನ್, ಹಾಟ್ ಕೇಸ್, ಟೋಸ್ಟರ್, ಮೂರು ದೊಡ್ಡ ಟಿವಿ ಬಳಸಲಾಗಿತ್ತು.

ಇದೆಲ್ಲವೂ ಅಗತ್ಯಕ್ಕಿಂತ ಹೆಚ್ಚುವರಿ ಬಳಕೆ ಮಾಡಲ್ಪಟ್ಟ ಸಾಧನಗಳಾಗಿವೆ ಎಂದು ತಿಳಿದು ಬಂದಿದೆ.ಈಗ ಇದೇ ಮನೆಯನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿವೃತ್ತಿ ಜೀವನ ಕಳೆಯಲು ಅಣಿ ಮಾಡಲಾಗುತ್ತಿದೆ.(ಐಎಎನ್ಎಸ್)

English summary
Former Delhi chief minister Sheila Dikshit had 31 air-conditioners, 15 desert coolers and 25 heaters installed at her official residence when in power, a RTI activist said on Thursday citing the response to his query.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X