ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1947ರ ಮಧ್ಯರಾತ್ರಿ ಏನಾಗಿತ್ತು, ಈಗ ಆಗಿದ್ದೇನು?: ಶಶಿ ತರೂರ್ ಹೋಲಿಕೆ

|
Google Oneindia Kannada News

Recommended Video

Shashi Tharoor compares 2 retro photos of Maharashtra politics | Oneindia Kannada

ನವದೆಹಲಿ, ನವೆಂಬರ್ 26: ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಯ ಕುರಿತು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಮಾಡಿರುವ ಟ್ವೀಟ್ ಗಮನ ಸೆಳೆದಿದೆ. ಒಂದು ಕಪ್ಪು-ಬಿಳುಪು ಹಾಗೂ ಒಂದು ವರ್ಣ ಚಿತ್ರವನ್ನು ಶಶಿ ತರೂರ್ ಹಂಚಿಕೊಂಡಿದ್ದಾರೆ.

ಕಪ್ಪು ಬಿಳುಪಿನ ಚಿತ್ರ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಸಂಭ್ರಮದ ಗಳಿಗೆಯದ್ದು. ಜವಹರಲಾಲ್ ನೆಹರೂ ಭಾರತಕ್ಕೆ ಸ್ವಾತಂತ್ರ್ಯ ದೊರೆತ ಸಂಭ್ರಮವನ್ನು ಹಂಚಿಕೊಳ್ಳುತ್ತಿರುವ ಸಂದರ್ಭ. ಇನ್ನೊಂದು ಬಣ್ಣದ ಚಿತ್ರ, ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಿರುವುದು.

ವಿಶ್ವಾಸಮತ ಯಾಚನೆಗೂ ಮುನ್ನ ಶಸ್ತ್ರತ್ಯಾಗ ಮಾಡಿದ ದೇವೇಂದ್ರವಿಶ್ವಾಸಮತ ಯಾಚನೆಗೂ ಮುನ್ನ ಶಸ್ತ್ರತ್ಯಾಗ ಮಾಡಿದ ದೇವೇಂದ್ರ

'1947: ಮಧ್ಯರಾತ್ರಿಯ ವೇಳೆ ಜಗತ್ತು ಮಲಗಿರುವಾಗ ಭಾರತವು ಬದುಕು ಮತ್ತು ಸ್ವಾತಂತ್ರ್ಯಕ್ಕೆ ಎಚ್ಚೆತ್ತುಕೊಂಡಿತು' ಎಂದು ಮೊದಲ ಚಿತ್ರಕ್ಕೆ ಶೀರ್ಷಿಕೆ ನೀಡಲಾಗಿದೆ. ಎರಡನೆಯ ಚಿತ್ರದಲ್ಲಿ '2019: ಮಾಧ್ಯರಾತ್ರಿಯ ವೇಳೆ ಭಾರತ ಮಲಗಿರುವಾಗ ನಮ್ಮ ಸ್ವಾತಂತ್ರ್ಯದ ಮೇಲಿನ ಹಲ್ಲೆಯಿಂದ ಜಗತ್ತು ಎಚ್ಚೆತ್ತುಕೊಂಡಿತು' ಎಂದು ಶೀರ್ಷಿಕೆ ಕೊಡಲಾಗಿದೆ.

Shashi Tharoor Tweet On Maharashtra Comparing Two Photos

ತರೂರ್ ಅವರ ಟ್ವೀಟ್‌ಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. 700ಕ್ಕೂ ಹೆಚ್ಚು ಮಂದಿ ಇದನ್ನು ರೀಟ್ವೀಟ್ ಮಾಡಿದ್ದಾರೆ.

ಎನ್‌ಸಿಪಿಯ ಅಜಿತ್ 'ದಾದಾ' ನಮ್ಮ ಜತೆ ಇದ್ದಾರೆ: ಶಿವಸೇನಾಎನ್‌ಸಿಪಿಯ ಅಜಿತ್ 'ದಾದಾ' ನಮ್ಮ ಜತೆ ಇದ್ದಾರೆ: ಶಿವಸೇನಾ

ಮಹಾರಾಷ್ಟ್ರದಲ್ಲಿ ಶುಕ್ರವಾರ ತಡರಾತ್ರಿ ನಡೆದ ಬೆಳವಣಿಗೆಯಲ್ಲಿ ಅಜಿತ್ ಪವಾರ್ ನೇತೃತ್ವದಲ್ಲಿ ಕೆಲವು ಶಾಸಕರು ಬಿಜೆಪಿ ಜತೆಗೂಡಿ ಸರ್ಕಾರ ರಚನೆಗೆ ಮುಂದಾಗಿದ್ದರು. ಶನಿವಾರ ಬೆಳಗ್ಗೆಯೇ ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗಿ ಮತ್ತು ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

English summary
Congress MP Shashi Tharoor has shared two photos in twitter and compared the developments in India 1947 and 2019 related to Maharashtra development.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X