ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಶಿ ತರೂರ್ ಸೆಲ್ಫಿ ಟ್ರೋಲ್: ಸಂಸದರ ಜತೆಗಿರುವ ಫೋಟೋ ಹಂಚಿಕೆ

|
Google Oneindia Kannada News

ನವದೆಹಲಿ, ನವೆಂಬರ್ 30: ನವೆಂಬರ್ 29 ರಂದು ಮಹಿಳಾ ಸಂಸದರೊಂದಿಗೆ ಸೆಲ್ಫಿ ಹಂಚಿಕೊಂಡಿದ್ದಕ್ಕಾಗಿ ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮನ್ನು ಟ್ರೋಲ್ ಮಾಡಿದ ಒಂದು ದಿನದ ನಂತರ ಕಾಂಗ್ರೆಸ್ ಸಂಸದ ಶಶಿ ತರೂರ್ ಈಗ ಸಂಸತ್ತಿನಲ್ಲಿ ಸಂಸದರೊಂದಿಗಿನ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಅವರು ಇಂದು ಹಂಚಿಕೊಂಡ ಚಿತ್ರಗಳಲ್ಲಿ, ಶಶಿ ತರೂರ್ ಅವರು ಸಂಸದರೊಂದಿಗೆ ಪೋಸ್ ನೀಡಿದ್ದಾರೆ. ಶೀರ್ಷಿಕೆಯಲ್ಲಿ "ಇಂದು ಬೆಳಗ್ಗೆ ಸಂಸತ್ತಿನಲ್ಲಿ ಸಂಸದರೆಲ್ಲರಲ್ಲೂ ಹೆಚ್ಚು ಒಡನಾಟ ಕಂಡು ಬಂಡಿತು, ಆದರೆ ಇದೇ ವೈರಲ್ ಆಗುತ್ತವೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ, ನಾನು ಸಮಾನ ಅವಕಾಶದ ಅಪರಾಧಿಯಾಗಿದ್ದೇನೆ" ಎಂದು ಬರೆದಿದ್ದಾರೆ.

ಹಿರಿಯ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಆರು ಮಂದಿ ಸಂಸದೆರೊಂದಿಗೆ ಸೆಲ್ಫಿಯನ್ನು ತೆಗೆದು ಟ್ವೀಟ್‌ ಮಾಡಿ ಅದಕ್ಕೆ ನೀಡಿದ್ದ ಶೀರ್ಷಿಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಆರು ಮಂದಿ ಮಹಿಳಾ ಸಂಸದರೊಂದಿಗೆ ಸೆಲ್ಫಿಯನ್ನು ತೆಗೆದು ಟ್ವೀಟ್‌ ಮಾಡಿದ್ದ ಕಾಂಗ್ರೆಸ್‌ ನಾಯಕ ಶಶಿ ತರೂರ್‌, "ಕೆಲಸ ಮಾಡಲು ಲೋಕಸಭೆ ಆಕರ್ಷಕ ಸ್ಥಳ ಅಲ್ಲ ಎಂದು ಯಾರು ಹೇಳಿದ್ದು," ಎಂದು ಪ್ರಶ್ನಿಸಿದ್ದಾರೆ. ಇದನ್ನು ಟೀಕೆ ಮಾಡಿರುವ ನೆಟ್ಟಿಗರು ಶಶಿ ತರೂರ್‌ ಸೆಕ್ಸಿಸಂ ಮಾಡುತ್ತಾರೆ ಎಂದು ಆರೋಪ ಮಾಡಿದ್ದಾರೆ. ಮಹಿಳಾ ಸಂಸದರಾದ ಸುಪ್ರಿಯಾ ಸುಳೆ, ಪ್ರೀನೀತ್ ಕೌರ್, ತಮಿಳಚಿ ತಂಗಪಾಂಡಿಯನ್, ಮಿಮಿ ಚಕ್ರವರ್ತಿ, ನುಸ್ರತ್ ಜಹಾನ್ ರೂಹಿ ಮತ್ತು ಜ್ಯೋತಿಮಣಿ ಜೊತೆಗಿನ ಸೆಲ್ಫಿ ಫೋಟೋವೊಂದನ್ನು ನಿನ್ನೆ ಬೆಳಗ್ಗೆ ಶಶಿ ತರೂರ್ ಟ್ವೀಟ್ ಮಾಡಿದ್ದು, ಇದರೊಂದಿಗೆ ಕೆಲಸ ಮಾಡಲು ಲೋಕಸಭೆ ಆಕರ್ಷಕ ಸ್ಥಳ ಅಲ್ಲ ಎಂದು ಯಾರು ಹೇಳಿದ್ದು ಎಂದಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.

Shashi Tharoor Selfie Troll: Photo sharing with male MPs

ವಿವಾದದ ಬಳಿಕ ಶಶಿ ತರೂರ್ ಕ್ಷಮೆಯಾಚಿಸಿದರು. "ಇಡೀ ಸೆಲ್ಫಿ ವಿಷಯವನ್ನು (ಮಹಿಳಾ ಸಂಸದರೊಂದಿಗೆ ಸೆಲ್ಫಿ) ಒಂದು ಹಾಸ್ಯವನ್ನಾಗಿ ಮಾಡಲಾಗಿದೆ. ಈ ಮಹಿಳಾ ಸಂಸದರು ಉತ್ಸಾಹದಲ್ಲಿ ಟ್ವೀಟ್‌ ಮಾಡಲು ನನ್ನಲ್ಲಿ ಹೇಳಿದರು. ಇದರಿಂದಾಗಿ ಕೆಲವರು ಮನ ನೊಂದಿದ್ದಾರೆ, ನನ್ನನ್ನು ಕ್ಷಮಿಸಿ, ಆದರೆ ಈ ಕಾರ್ಯಸ್ಥಳದ ಸೌಹಾರ್ದತೆಯ ಪ್ರದರ್ಶನದಲ್ಲಿ ಭಾಗಿಯಾಗಲು ನನಗೆ ಸಂತೋಷ ಆಗಿದೆ. ಇದೆಲ್ಲವೂ ಇಷ್ಟೇ," ಎಂದು ತಿಳಿಸಿದ್ದಾರೆ.

ಮಹಿಳಾ ಆಯೋಗದ ಮುಖ್ಯಸ್ಥೆಯ ಆಕ್ರೋಶ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಟ್ವೀಟ್‌ಗೆ ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ನೀವು ಮಹಿಳೆಯರನ್ನು ಆಕರ್ಷಣೆಯ ವಸ್ತುವನ್ನಾಗಿ ಮಾಡುವ ಮೂಲಕ ಸಂಸತ್ತು ಮತ್ತು ರಾಜಕೀಯದಲ್ಲಿ ಕೊಡುಗೆಯನ್ನು ಅವಮಾನಿಸು‌ತ್ತಿದ್ದೀರಿ," ಎಂದಿದ್ದಾರೆ, ಇನ್ನು ಮಹಿಳೆಯರನ್ನು ಆಕ್ಷೇಪ ಮಾಡುವುದನ್ನು ನಿಲ್ಲಿಸಿ ಎಂದು ಸುಪ್ರೀಂ ಕೋರ್ಟ್ ವಕೀಲರಾದ ಕರುಣಾ ನಂದಿ ಟ್ವೀಟ್‌ ಮಾಡಿದ್ದಾರೆ. ಈ ಬೆನ್ನಲ್ಲೇ ಶಶಿ ತರೂರ್‌ ಕ್ಷಮೆಯಾಚಿಸಿದ್ದಾರೆ.

ಇನ್ನು ಸುಪ್ರೀಂ ಕೋರ್ಟ್ ವಕೀಲರಾದ ಕರುಣಾ ನಂದಿ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಬಾಡ್ಮಿಂಟನ್ ಆಟಗಾರ್ತಿ ಅರ್ಜುನ ಅವರ್ಧೆ ಜ್ವಾಲಾ, "ನಿಜವಾಗಿ ಅಲ್ಲ ಕರುಣಾ. ನಾವು ಕೆಲವು ವಿಚಾರವನ್ನು ಹಗುರವಾಗಿ ತೆಗೆದುಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ. ಎಲ್ಲವನ್ನೂ ನಾವು ಬೇರೆ ರೀತಿಯಲ್ಲಿ ನೋಡಬಾರದು. ಇದು ಸಂಸತ್ತಿನಲ್ಲಿ ಸಾಮಾನ್ಯವಾಗಿ ಸ್ಟೀರಿಯೊಟೈಪ್ ಆಗಿರುವ ಎಲ್ಲಾ ಮಹಿಳೆಯರಿಗೆ ಒಂದು ಪ್ರಶಂಸೆಯ ಮಾತು ಆಗಿದೆ. ಇದು ಕೇವಲ ನನ್ನ ಅಭಿಪ್ರಾಯ," ಎಂದಿದ್ದಾರೆ.

Recommended Video

ಸರ್ಕಾರದ ನಿರ್ಧಾರ ಎನ್ ಗೊತ್ತಾ? | Oneindia Kannada

"ಲೋಕಸಭೆಯಲ್ಲಿ ಇರುವ ಮಹಿಳೆಯರು ನಿಮ್ಮ ಕೆಲಸದ ಸ್ಥಳವನ್ನು ಆಕರ್ಷಕವಾಗಿಸುವ ಅಲಂಕಾರಿಕ ವಸ್ತುಗಳಲ್ಲ. ಅವರೂ ಕೂಡಾ ಸಂಸತ್ ಸದಸ್ಯರು. ನೀವು ಬಹಳ ಅಗೌರವ ತೋರುತ್ತಿದ್ದೀರಿ ಹಾಗೂ ಲಿಂಗ ಸೆಕ್ಸಿಸ್ಟ್‌ ಆಗಿ ವರ್ತನೆ ಮಾಡುತ್ತಿದ್ದೀರಿ," ಎಂದು ಟ್ವೀಟಿಗರೊಬ್ಬರು ಆರೋಪ ಮಾಡಿದ್ದಾರೆ. "ಇಂತಹ ಸಂದರ್ಭದಲ್ಲಿ ನೀವು ಏನು ಮಾಡುತ್ತಿದ್ದೀರಿ. ಯಾರೂ ಕೂಡಾ ನೀವು ಟ್ವೀಟ್ ಮಾಡುವುದನ್ನು/ಫೋಟೋ ತೆಗೆಯುವುದನ್ನು ತಡೆಯಲಿಲ್ಲ. ಆದರೆ ಈ ದಿನವು ರೈತರಿಗೆ ಸಮರ್ಪಿಸಿದ ದಿನವಾಗಿದೆ," ಎಂದು ಒಬ್ಬರು ಹೇಳಿದರೆ, ಇನ್ನೊಬ್ಬರು "ಕೆಲಸ ಮಾಡಲು ಆಕರ್ಷಕ ಸ್ಥಳವೇ? ಇದು 2021 ಅಂಕಲ್?," ಎಂದು ಟೀಕೆ ಮಾಡಿದ್ದಾರೆ. "ಈ ಸಮಯದಲ್ಲಿ, ನೀವು ಹೆಚ್ಚಿನ ಮೀಮ್‌ಗಳನ್ನು ಕೇಳುತ್ತಿದ್ದೀರಿ," ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಸಂಸತ್ತಿನ ಚಳಿಗಾಲದ ಅಧಿವೇಶನ ಸೋಮವಾರದಿಂದ ಆರಂಭವಾಗಿದ್ದು, ಡಿಸೆಂಬರ್ 23ಕ್ಕೆ ಮುಕ್ತಾಯವಾಗುವ ಸಾಧ್ಯತೆ ಇದೆ.

English summary
Congress MP Shashi Tharoor has now posted pictures of himself with male MPs in Parliament a day after social media users trolled him for sharing a selfie with women MPs on November 29.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X