ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ನಾಯಕನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ತರೂರ್

|
Google Oneindia Kannada News

ನವದೆಹಲಿ, ಡಿಸೆಂಬರ್ 10: ತಮ್ಮನ್ನು 'ಕೊಲೆ ಆರೋಪಿ' ಎಂದು ಲೇವಡಿ ಮಾಡಿದ ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್ ಅವರ ವಿರುದ್ಧ ಕಾಂಗ್ರೆಸ್ ಮುಖಂಡ ಶಶಿ ತರೂರ್ ಮಾನಷ್ಟ ಮೊಕದ್ದಮೆ ಹೂಡಿದ್ದಾರೆ.

ಮೋದಿಯನ್ನು ಚೇಳು ಎಂದಿದ್ದ ತರೂರ್ ವಿರುದ್ಧ ಮಾನನಷ್ಟ ಮೊಕದ್ದಮೆ ಮೋದಿಯನ್ನು ಚೇಳು ಎಂದಿದ್ದ ತರೂರ್ ವಿರುದ್ಧ ಮಾನನಷ್ಟ ಮೊಕದ್ದಮೆ

"ಪ್ರಧಾನಿ ನರೇಂದ್ರ ಮೋದಿಯವರು ಶಿವಲಿಂಗದ ಮೇಲಿರುವ ಚೇಳಿನ ಹಾಗೆ. ಅದನ್ನು ಕೈಯಿಂದ ಓಡಿಸುವುದಕ್ಕೂ ಬರುವುದಿಲ್ಲ, ಚಪ್ಪಲಿಯಿಂದ ಹೊಡೆಯುವುದಕ್ಕೂ ಬರುವುದಿಲ್ಲ" ಎಂಬ ಹೇಳಿಕೆ ನೀಡಿದ್ದ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರನ್ನು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ತರಾಟೆಗೆ ತೆಗೆದುಕೊಂಡಿದ್ದರು.

'ಮೋದಿ ಎಂಬ ಚಾಯ್ ವಾಲಾನನ್ನೂ ಪ್ರಧಾನಿ ಮಾಡಿದ್ದು ನೆಹರು!''ಮೋದಿ ಎಂಬ ಚಾಯ್ ವಾಲಾನನ್ನೂ ಪ್ರಧಾನಿ ಮಾಡಿದ್ದು ನೆಹರು!'

"ಒಬ್ಬ ಕೊಲೆ ಆರೋಪಿಯಾಗಿರುವ ಶಶಿ ತರೂರ್, ಭಗವಾನ್ ಶಿವನಿಗೆ ಹೇಗೆ ಗೌರವ ನೀಡಬೇಕು" ಎಂಬುದನ್ನು ತಿಳಿದಿಲ್ಲ ಎಂದಿದ್ದರು.

Shashi Taroor files criminal defamation against Ravi Shankar Prasad

ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದ ಶಶಿ ತರೂರ್, 'ರವಿ ಶಂಕಾರ್ ಪ್ರಸಾದ್ ಅವರು ತಮ್ಮ ಈ ಹೇಳಿಕೆ(ಕೊಲೆ ಆರೋಪಿ) ಇರುವ ವಿಡಿಯೋ ಕ್ಲಿಪ್ಪಿಂಗ್ ಅನ್ನು ಡಿಲೀಟ್ ಮಾಡಬೇಕು ಮತ್ತು ನನ್ನನ್ನು ಕೊಲೆ ಆರೋಪಿ ಎಂದು ಕರೆದ ಟ್ವೀಟ್ ಅನ್ನು ಡಿಲೀಟ್ ಮಾಡಬೇಕು. ಹಾಗೆಯೇ ನನ್ನ ಬಳಿ ಕ್ಷಮೆ ಕೇಳಬೇಕು' ಎಂದಿದ್ದರು. 48 ಗಂಟೆಗಳೊಳಗೆ ಕ್ಷಮೆ ಕೇಳದಿದ್ದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದ ಶಶಿ ತರೂರ್, ಇದೀಗ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಸುಷ್ಮಾ ಚುನಾವಣೆ ನಿವೃತ್ತಿ... ಚಿದು ಟ್ವೀಟ್ ನಲ್ಲಿ ಕಂಡ ವಿಕೃತಿ! ಸುಷ್ಮಾ ಚುನಾವಣೆ ನಿವೃತ್ತಿ... ಚಿದು ಟ್ವೀಟ್ ನಲ್ಲಿ ಕಂಡ ವಿಕೃತಿ!

ಮೋದಿ ಅವರನ್ನು ಚೇಳಿಗೆ ಹೋಲಿಸಿದ್ದ ಶಶಿ ತರೂರ್ ಅವರ ಮೇಲೂ ಈ ಮೊದಲೇ ಬಿಜೆಪಿ ಮಾನನಷ್ಟ ಮೊಕದ್ದಮೆ ದಾಖಲಿಸಿತ್ತು.

English summary
Congress leader Shahsi Taroor filed a criminal defamation complaint against BJP minister Ravi Shankar Prasad for calling him an accused in a case of murder.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X