ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಜಾಮುದ್ದೀನ್ ಸಭೆಗೆ ಅನುಮತಿ ಯಾರು ನೀಡಿದ್ದರು?: ಶರದ್ ಪವಾರ್ ಪ್ರಶ್ನೆ

|
Google Oneindia Kannada News

ನವದೆಹಲಿ, ಏಪ್ರಿಲ್ 6: ದೇಶದಲ್ಲಿ ಕೊರೊನಾ ವೇಗವಾಗಿ ಹಬ್ಬಲು ಕಾರಣವಾದ ದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ಅನುಮತಿ ನೀಡಿದವರು ಯಾರು ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಪ್ರಶ್ನಿಸಿದ್ದಾರೆ.

ಇದೇ ರೀತಿಯ ದೊಡ್ಡ ಮಟ್ಟದ ಸಭೆ ಮುಂಬೈನಲ್ಲೂ ಕೂಡ ಮಾಡಲು ನಿರ್ಧರಿಸಲಾಗಿತ್ತು. ಆದರೆ ಅವರಿಗೆ ಅನುಮತಿ ದೊರೆತಿರಲಿಲ್ಲ. ನಿಯಮ ಉಲ್ಲಂಘನೆ ಉಲ್ಲಂಘಿಸಿ ಸೊಲ್ಲಾಪುರದಲ್ಲಿ ಸಭೆ ನಡೆಸಿದಾಗ ಕಠಿಣ ಕ್ರಮ ಕೈಗೊಳ್ಳಲಾಗಿತ್ತು. ಹಾಗಿದ್ದ ಮೇಲೆ ಇಲ್ಲಿ ಸಭೆ ನಡೆದಿದ್ದು ಹೇಗೆ ಎನ್ನುವ ಪ್ರಶ್ನೆಯನ್ನು ಎಲ್ಲರ ಮುಂದಿಟ್ಟಿದ್ದಾರೆ.

ಈ ಕುರಿತು ಫೇಸ್‌ಬುಕ್‌ನಲ್ಲಿ ಲೈವ್‌ನಲ್ಲಿ ಪವಾರ್ ಪ್ರಶ್ನೆ ಹಾಕಿದ್ದಾರೆ. ಅನುಮತಿ ನೀಡುವ ಮುನ್ನ ಯೋಚಿಸಬೇಕಿತ್ತಲ್ಲವೇ , ಆವರಿಗೆ ಅನುಮತಿ ನೀಡಿದ್ದಾದರೂ ಯಾರು? ಎಂದು ಪ್ರಶ್ನಿಸಿದ್ದಾರೆ.

Sharad Pawar Questions Who Gave Permission For Nizamuddin Religious Event

ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶಮುಖ್ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಅನುಮತಿ ನೀಡದೇ, ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಿರುವಾಗ ದೆಹಲಿಯಲ್ಲಿ ಇಂತಹ ನಿರ್ಧಾರವನ್ನು ಏಕೆ ತೆಗೆದುಕೊಂಡಿದ್ದ ಎಂದು ಪ್ರಶ್ನಿಸಿದ್ದಾರೆ.

ನಿಜಾಮುದ್ದೀನ್ ಸಭೆಯಿಂದ ದೇಶದಲ್ಲಿ 400ಕ್ಕೂ ಹೆಚ್ಚಿನ ಸೋಂಕಿತರಾಗಿದ್ದಾರೆ. 15ಕ್ಕೂ ಅಧಿಕ ಸಾವಾಗಿದೆ. ಕನಿಷ್ಠ 9 ಸಾವಿರ ಮಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೆ ತಾವೇ ಖುದ್ದಾಗಿ ಬಂದು ಆಸ್ಪತ್ರೆಗೆ ಯಾರೂ ಕೂಡ ಅಡ್ಮಿಟ್ ಆಗಿಲ್ಲ. ಅವರು ಬೇರೆಡೆಗೆ ಓಡಾಡಿದ್ದರಿಂದ ಬೇರೆಯವರಿಗೂ ವೈರಸ್ ತಗುಲಿದೆ. ದೇಶದಲ್ಲಿ ಕಳೆ 24 ಗಂಟೆಗಳಲ್ಲಿ 704 ಹೊಸ ಕೇಸುಗಳು ದಾಖಲಾಗಿವೆ. 28 ಮಂದಿ ಸಾವನ್ನಪ್ಪಿದ್ದಾರೆ.

English summary
NCP chief Sharad Pawar Monday asked who gave permission for the religious congregation of Tablighi Jamaat at Nizamuddin in New Delhi, which has emerged as one of the major coronavirus hotspots in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X