ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಎ ಮತ್ತು ಶಾಹಿನ್ ಬಾಗ್ ಹೋರಾಟ: ದೆಹಲಿಯಲ್ಲಿ ಗುಂಡಿನ ಮೊರೆತ

|
Google Oneindia Kannada News

ನವದೆಹಲಿ, ಫೆಬ್ರವರಿ.01: ದೆಹಲಿ ವಿಧಾನಸಭಾ ಚುನಾವಣೆಗೆ ಇನ್ನೊಂದು ವಾರವಷ್ಟೇ ಬಾಕಿ ಉಳಿದಿದ್ದು, ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಘಟನೆಗಳು ಜನರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡುತ್ತಿವೆ.

ಕಳೆದ ಮೂರು ದಿನಗಳಲ್ಲಿ ಎರಡನೇ ಬಾರಿ ದೆಹಲಿಯಲ್ಲಿ ಗುಂಡಿನ ಸದ್ದು ಕೇಳಿ ಬಂದಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಶಾಹಿನ್ ಬಾಗ್ ನಲ್ಲಿ ಪ್ರತಿಭಟನೆನೆ ತೀವ್ರಗೊಂಡಿದೆ. ಇದೇ ವೇಳೆ ಶಂಕಿತನೊಬ್ಬ ಗಾಳಿಯಲ್ಲಿ ಮೂರು ಸುತ್ತು ಗುಂಡಿ ಹಾರಿಸಿದ್ದು, ದೆಹಲಿ ಪೊಲೀಸರು ಶಂಕಿತನನ್ನು ವಶಕ್ಕೆ ಪಡೆದಿದ್ದಾರೆ.

Video: ದೆಹಲಿಯಲ್ಲಿ ಮೊಳಗಿದ ಗುಂಡಿನ ಸದ್ದು, 3 ದಿನ 2 ಬಾರಿ ಫೈರಿಂಗ್!Video: ದೆಹಲಿಯಲ್ಲಿ ಮೊಳಗಿದ ಗುಂಡಿನ ಸದ್ದು, 3 ದಿನ 2 ಬಾರಿ ಫೈರಿಂಗ್!

ಇನ್ನು, ಶನಿವಾರ ನಡೆದ ಗುಂಡಿನ ದಾಳಿಯಿಂದ ಶಾಹಿನ್ ಬಾಗ್ ಪ್ರತಿಭಟನಾ ಸ್ಥಳ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಗೊಂದಲ ವಾತಾವರಣ ನಿರ್ಮಾಣವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಶಾಹಿನ್ ಬಾಗ್ ನಲ್ಲಿ ದೆಹಲಿ ಪೊಲೀಸರು ಮತ್ತಷ್ಟು ಭದ್ರತೆಯನ್ನು ಹೆಚ್ಚಿಸಿದ್ದಾರೆ.

ಬಂಧನದ ವೇಳೆಯಲ್ಲೂ ಘೋಷಣೆ ಕೂಗಿದ ಶಂಕಿತ

ಶಾಹಿನ್ ಬಾಗ್ ನಲ್ಲಿ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದ ಶಂಕಿತನನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ದೇಶದಲ್ಲಿ ಹಿಂದೂಗಳದ್ದೇ ಆಟ ನಡೆಯುತ್ತದೆಯೇ ವಿನಃ, ಬೇರೆ ಯಾರ ಆಟವೂ ನಡೆಯುವುದಿಲ್ಲ ಎಂದು ಘೋಷಣೆ ಕೂಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಜನವರಿ.30ರಂದು ಜಾಮೀಯಾ ವಿವಿ ಬಳಿ ಫೈರಿಂಗ್

ಜನವರಿ.30ರಂದು ಜಾಮೀಯಾ ವಿವಿ ಬಳಿ ಫೈರಿಂಗ್

ಕಳೆದ ಜನವರಿ.30ರಂದು ಜಾಮೀಯಾ ವಿಶ್ವವಿದ್ಯಾಲಯದ ಬಳಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿತ್ತು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಗುಂಪಿನಲ್ಲಿ ನಿಂತು ಫೈರಿಂಗ್ ನಡೆಸಿದ್ದನು. ಘಟನೆಯಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದು, ಆರೋಪಿ ಗೋಪಾಲ್ ನನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು.

ದೆಹಲಿ ಗುಂಡಿನ ದಾಳಿ; ಆರೋಪಿಯ ಫೇಸ್‌ಬುಕ್‌ ಸ್ಟೇಟಸ್‌ಗಳುದೆಹಲಿ ಗುಂಡಿನ ದಾಳಿ; ಆರೋಪಿಯ ಫೇಸ್‌ಬುಕ್‌ ಸ್ಟೇಟಸ್‌ಗಳು

49 ದಿನಗಳಿಂದ ಶಾಹಿನ್ ಬಾಗ್ ನಲ್ಲಿ ಹೋರಾಟ

49 ದಿನಗಳಿಂದ ಶಾಹಿನ್ ಬಾಗ್ ನಲ್ಲಿ ಹೋರಾಟ

ದೆಹಲಿಯ ಶಾಹಿನ್ ಬಾಗ್ ನಲ್ಲಿ ಕಳೆದ 49 ದಿನಗಳಿಂದಲೂ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರ ಈ ಮಾರ್ಗದಲ್ಲಿ ಸಂಚಾರಕ್ಕೆ ಕಡಿವಾಣ ಹಾಕಿದ್ದು, ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ.

ಕೇಂದ್ರ ಸರ್ಕಾರದ ವಿರುದ್ಧ ಕೆಂಡ ಕಾರಿದ್ದ ಕೇಜ್ರಿವಾಲ್

ಕೇಂದ್ರ ಸರ್ಕಾರದ ವಿರುದ್ಧ ಕೆಂಡ ಕಾರಿದ್ದ ಕೇಜ್ರಿವಾಲ್

ದೆಹಲಿಯಲ್ಲಿ ಕಾನೂನು-ಸುವ್ಯವಸ್ಥೆ ಕಾಪಾಡುವ ಹೊಣೆ ಹೊತ್ತಿರುವ ಕೇಂದ್ರ ಸರ್ಕಾರ ಕೊಳಕು ರಾಜಕಾರಣವನ್ನು ಮಾಡುತ್ತಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದರು. ಫೆಬ್ರವರಿ.08ರ ಮತದಾನ ನಡೆಯುವವರೆಗೂ ಶಾಹಿನ್ ಬಾಗ್ ಮಾರ್ಗದ ರಸ್ತೆಯನ್ನು ಬಂದ್ ಮಾಡಲಾಗಿದೆ. ಈ ವಿಷಯದಲ್ಲಿ ಬಿಜೆಪಿಗರು ನನ್ನ ವಿರುದ್ಧ ಬೊಟ್ಟು ಮಾಡುತ್ತಿದ್ದು, ನನ್ನ ಅನುಮತಿ ಬೇಕು ಎಂದು ಹೇಳುತ್ತಿದ್ದಾರೆ. ಹಾಗಿದ್ದಲ್ಲಿ ನಾನು ಇಂದೇ ಅನುಮತಿ ನೀಡುತ್ತೇನೆ ಇನ್ನೊಂದು ಗಂಟೆಯಲ್ಲೇ ಶಾಹಿನ್ ಬಾಗ್ ಗೆ ತೆರಳಿ ಶಾಂತಿ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲಿ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಸವಾಲ್ ಹಾಕಿದ್ದರು.

ದೆಹಲಿಯಲ್ಲಿ 'ಡರ್ಟಿ ಪೊಲಿಟಿಕ್ಸ್' ನಡೆಸುತ್ತಿದೆಯಾ ಬಿಜೆಪಿ?ದೆಹಲಿಯಲ್ಲಿ 'ಡರ್ಟಿ ಪೊಲಿಟಿಕ್ಸ್' ನಡೆಸುತ್ತಿದೆಯಾ ಬಿಜೆಪಿ?

ಸಿಎಎ ಗೊಂದಲ ಬಗೆಹರಿಸಲು ಸಿದ್ಧ ಎಂದ ರವಿಶಂಕರ್ ಪ್ರಸಾದ್

ಸಿಎಎ ಗೊಂದಲ ಬಗೆಹರಿಸಲು ಸಿದ್ಧ ಎಂದ ರವಿಶಂಕರ್ ಪ್ರಸಾದ್

ಸಿಎಎ ಮತ್ತು ಎನ್ಆರ್ ಸಿ ವಿರುದ್ಧ ಶಾಹಿನ್ ಬಾಗ್ ಪ್ರತಿಭಟನಾಕಾರರ ಜೊತೆ ಚರ್ಚೆಗೆ ಕೇಂದ್ರ ಸರ್ಕಾರ ಸಿದ್ಧ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದರು. ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನರಲ್ಲಿ ಇರುವ ಎಲ್ಲ ಗೊಂದಲಗಳನ್ನು ಬಗೆಹರಿಸಲಾಗುತ್ತದೆ ಎಂದು ರವಿಶಂಕರ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಪ್ರಚಾರದ ಕಥೆಯೇನು?

ಉತ್ತರ ಪ್ರದೇಶ ಮುಖ್ಯಮಂತ್ರಿ ಪ್ರಚಾರದ ಕಥೆಯೇನು?

ದೆಹಲಿ ವಿಧಾನಸಭಾ ಚುನಾವಣಾ ಹಿನ್ನೆಲೆ ಫೆಬ್ರವರಿ.01ರಿಂದ 04ರವರೆಗೂ ನಾಲ್ಕು ದಿನಗಳ ಕಾಲ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಿಜೆಪಿ ಅಭ್ಯರ್ಥಿಗಳ ಪರ ಅಬ್ಬರ ಪ್ರಚಾರ ನಡೆಸಲಿದ್ದಾರೆ. ಶಾಹಿನ್ ಬಾಗ್ ಸುತ್ತಮುತ್ತಲಿನ 12 ಪ್ರದೇಶಗಳಲ್ಲಿ ಯೋಗಿ ಆದಿತ್ಯನಾಥ್ ಪ್ರಚಾರ ನಡೆಸಲಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ. ಶನಿವಾರ ನಡೆದ ಘಟನೆಯಿಂದ ಶಾಹಿನ್ ಬಾಗ್ ಸುತ್ತಮುತ್ತಲಿನ ಪ್ರದೇಶದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ.

ಯಾವ ಯಾವ ದಿನ ಎಲ್ಲೆಲ್ಲಿ ಯೋಗಿ ಪ್ರಚಾರ?:

ಫೆಬ್ರವರಿ.01: ಕರಾವಲ್ ನಗರ್, ಆದರ್ಶ್ ನಗರ್, ರೋಹಿಣಿ ಮತ್ತು ನರೇಲಾ,

ಫೆಬ್ರವರಿ.02: ಬದರ್ಪುರ್ ಮತ್ತು ತುಘಲಕ್ ಬಾದ್,

ಫೆಬ್ರವರಿ.03: ವಿಕಾಸ್ ಪುರಿ, ಉತ್ತಮ್ ನಗರ್, ದ್ವಾರಕ, ಮೆಹ್ರೌಲಿ,

ಫೆಬ್ರವರಿ.04: ಪತ್ಪರ್ ಗಂಜ್, ಶಾಹ್ದಾರ್,

English summary
Shaheen Bagh Protest Against CAA: Last Three Days, Two Firing Incident In National Capital. Delhi Police Has Taken Accused Into Their Custody.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X