ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದ ಎಲ್ಲಾ ಸಂಪುಟ ಸಮಿತಿಯಲ್ಲಿ ರಾಜನಾಥ್‌ಗೆ ಜಾಗ ಇಲ್ಲ, ಶಾಗೆ ಮಣೆ

|
Google Oneindia Kannada News

ನವದೆಹಲಿ, ಜೂನ್ 6: ನರೇಂದ್ರ ಮೋದಿ ಸಂಪುಟದಲ್ಲಿ ಅಮಿತ್ ಶಾ ಅತ್ಯಂತ ಪ್ರಭಾವಿ ಸಚಿವ ಎಂದು ಮತ್ತೊಮ್ಮೆ ಸಾಬೀತಾಗಿದೆ.

ಪ್ರಧಾನಿ ನರೇಂದ್ರ ಮೋದಿಯ ಉತ್ತರಾಧಿಕಾರಿ ಅಥವಾ ಮುಂದಿನ ಬಿಜೆಪಿಯ ಉತ್ತರಾಧಿಕಾರಿ ಅಮಿತ್ ಶಾ ಆಗಲಿದ್ದಾರೆ ಎಂಬ ಮುನ್ಸೂಚನೆ ಲಭ್ಯವಾಗುತ್ತಿವೆ.

ಗೃಹ ಸಚಿವ ಅಮಿತ್ ಶಾ ಕೈಲಿದೆ ಟಾಪ್ 10 ಉಗ್ರರ ಹಿಟ್ ಲಿಸ್ಟ್ಗೃಹ ಸಚಿವ ಅಮಿತ್ ಶಾ ಕೈಲಿದೆ ಟಾಪ್ 10 ಉಗ್ರರ ಹಿಟ್ ಲಿಸ್ಟ್

ಪ್ರಧಾನಿ ಮೋದಿ ನೇಮಿಸಿರುವ ಎಂಟು ಸಂಪುಟ ಸಮಿತಿಗಳಲ್ಲಿ ಅಮಿತ್ ಶಾ ಕಾಣಿಸಿಕೊಂಡಿದ್ದಾರೆ. ಎಲ್ಲಾ ಎಂಟು ಸಮಿತಿಗಳಲ್ಲಿ ಪ್ರಧಾನಿ ಮೋದಿಯವರ ನಂತರದ ಹುದ್ದೆಗಳನ್ನು ಅಮಿತ್ ಶಾ ನಿಭಾಯಿಸುವ ಮುನ್ಸೂಚನೆ ದೊರೆತಿದೆ.

Shah became shadow of Modi after holding eight cabinet commitee

ಅಮಿತ್ ಶಾ ಬಿಟ್ಟರೆ ಅಮಿತ್ ಶಾ ಬಿಟ್ಟರೆ ಇನ್ಯಾವ ಸಚಿವರಿಗೂ ಮನ್ನಣೆ ದೊರೆತಿಲ್ಲ. ಇದು ಮೋದಿ ಎರಡನೇ ಸರ್ಕಾರದಲ್ಲಿ ಅಮಿತ್ ಶಾ ಪ್ರಭಾವಳಿ ಹೆಚ್ಚುತ್ತಿರುವ ಸಂಕೇತವಾಗಿದೆ ಎಂದು ವಿಶ್ಲೇಷಣೆಗಳು ಹೇಳುತ್ತಿವೆ.

ಹಾಗೆಯೇ ಮೋದಿಯ ನಂತರ ಬಿಜೆಪಿ ಅಥವಾ ಎನ್‌ಡಿ ಸರ್ಕಾರದ ಜವಾಬ್ದಾರಿ ಶಾ ಹೆಗಲೇರಿದೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಲಾರಂಭಿಸಿವೆ. ಪ್ರಧಾನಿ ಮೋದಿ ರಚಿಸಿರುವ ಸಂಪುಟ ನೇಮಕಾತಿ ಸಮಿತಿ, ಅಕಮಡೇಷನ್ ಸಮಿತಿ, ಆರ್ಥಿಕ ವ್ಯವಹಾರಗಳ ಸಮಿತಿ, ಸಂಸದೀಯ ವ್ಯವಹಾರಗಳ ಸಮಿತಿ, ರಾಜಕೀಯ ವ್ಯವಹಾರಗಳ ಸಮಿತಿ, ಭದ್ರತಾ ಸಮಿತಿ, ಹೂಡಿಕೆ ಹಾಗೂ ಅಭಿವೃದ್ಧಿ ಕುರಿತು ಸಮಿತಿ, ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ಸಮಿತಿಯಲ್ಲಿ ಅಮಿತ್ ಶಾ ಹೆಸರು ಸೇರಿಕೊಂಡಿದೆ.

ಉಳಿದ ಸಮಿತಿಗಳಲ್ಲಿ ರಾಜನಾಥ್ ಸಿಂಗ್ ಆರು ಸಮಿತಿಗಳಲ್ಲಿದ್ದರೆ ನಿತಿನ್ ಗಡ್ಕರಿ , ನಿರ್ಮಲಾ ಸೀತಾರಾಮನ್ ಕೂಡ ಕೆಲವು ಸಮಿತಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಧಾನಿ ಮೋದಿ ಅನುಪಸ್ಥಿತಿಯಲ್ಲಿ ಈ ಸಮಿತಿಗಳನ್ನು ಅಮಿತ್ ಶಾ ನಡೆಸುವುದು ಬಹುತೇಕ ಖಚಿತವಾಗಿದೆ.

English summary
Amith shah became shadow of Modi after holding eight cabinet commitee,it was announced that under the Transaction of Business Rules, the government has reconstituted eight key cabinet committees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X