ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೈಂಗಿಕ ಹಗರಣ: ತೆಹಲ್ಕಾ ಸಂಪಾದಕ ತೇಜಪಾಲ್ ಮನೆಗೆ

By Srinath
|
Google Oneindia Kannada News

Sexual Harassment to woman journalist- Tehelka editor Tarun Tejpal steps-down
ನವದೆಹಲಿ, ನ.21- ದೀಪದ ಕೆಳಗೆ ಕತ್ತಲು. ಭ್ರಷ್ಟಾಚಾರ ಪ್ರಕರಣಗಳು ಬಯಲಿಗೆಳೆದು ಪ್ರಸಿದ್ಧಿಗೆ ಬಂದಿದ್ದ ತೆಹಲ್ಕಾ ಸುದ್ದಿಸಂಸ್ಥೆಯಲ್ಲೇ ಅನಾಚಾರವೊಂದು ನಡೆದಿದೆ. ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆಪಾದನೆ ಮೇಲೆ ಖುದ್ದು Tehelka magazine ಸಂಪಾದಕರೇ ಕೆಲಸಬಿಟ್ಟು ಮನೆಗೆ ಹೋಗಿದ್ದಾರೆ.

ಖ್ಯಾತ ಪತ್ರಕರ್ತ, ತೆಹಲ್ಕಾ ಸಹ ಸಂಸ್ಥಾಪಕ, ಸಂಪಾದಕ ತರುಣ್ ತೇಜಪಾಲ್ ತಮ್ಮ ಮಹಿಳಾ ಸಹೋದ್ಯೋಗಿ ಜತೆ ತಾವು ಅಸಭ್ಯವಾಗಿ ನಡೆದುಕೊಂಡಿರುವುದನ್ನು ಒಪ್ಪಿಕೊಂಡು ನೈತಿಕತೆ ಮೇಲೆ 6 ತಿಂಗಳ ಕಾಲ ಕೆಲಸ ಬಿಟ್ಟು ಮನೆಗೆ ಹೋಗುತ್ತಿರುವುದಾಗಿ ತಿಳಿಸಿದ್ದಾರೆ.

ಗಮನಾರ್ಹವೆಂದರೆ, ಘಟನೆ ಆಂತರಿಕವಾಗಿ ನಡೆದಿರುವುದು. ಈಗಾಗಲೇ ಬಾಧಿತ ಮಹಿಳೆಯ ಕ್ಷಮಾಪಣೆ ಕೋರಿದ್ದು, ಇದಕ್ಕೆ ಹೆಚ್ಚು ಮಹತ್ವ ಕೊಡಬೇಕಿಲ್ಲ ಎಂದು ತೆಹಲ್ಕಾದ ವ್ಯವಸ್ಥಾಪಕ ನಿರ್ದೇಶಕಿ ಶೋಮಾ ಚೌಧರಿ ಅವರಿಂದ ಪ್ರಕರಣವನ್ನು ಮುಚ್ಚಿಹಾಕುವ ಯತ್ನವೂ ನಡೆದಿತ್ತು.

ಆದರೆ ಘಟನೆಯಿಂದ ತೀವ್ರವಾಗಿ ನೊಂದ Editor-in-Chief, ಪ್ರಕರಣದ ಆರೋಪಿ ತರುಣ್ ತೇಜಪಾಲ್, ನೈತಿಕತೆ ಹೊತ್ತು ಸೇವೆಯಿಣದ ದೂರ ಸರಿದಿದ್ದಾರೆ.

'ಅದು (ಲೈಂಗಿಕ ಕಿರುಕುಳ) ನಡೆಯಬಾರದ ಘಟನೆಯಾಗಿತ್ತು. ಪರಿಸ್ಥಿತಿಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾವು ನಂಬಿಕೊಂಡು ಬಂದಿರುವ ಮೌಲ್ಯಗಳಿಗೆ ವಿರುದ್ಧವಾದ ವರ್ತನೆ ಇದಾಗಿದೆ. ಆದ್ದರಿಂದ ನಾನೀಗಾಗಲೇ ಬೇಷರತ್ ಕ್ಷಮೆಯಾಚಿಸಿರುವೆ. ನನ್ನ ತಪ್ಪಿನ ಅರಿವಾಗಿದೆ. ಹಾಗಾಗಿ 6 ತಿಂಗಳ ಕಾಲ ಕಚೇರಿಗೆ ಬರುವುದಿಲ್ಲ' ಎಂಬ ಒಕ್ಕಣೆಯ ಪತ್ರವನ್ನು ಆರೋಪಿ ತರುಣ್, ಮ್ಯಾನೇಜಿಂಗ್ ಎಡಿಟರ್ ಶೋಮಾಗೆ ಇಮೇಲ್ ಮಾಡಿ ತಿಳಿಸಿದ್ದಾರೆ.

ಬಾಧಿತ ಮಹಿಳೆ ಆರೋಪಿ ತರುಣ್ ತೇಜಪಾಲ್ ಅವರ ಕ್ಷಮಾಪಣೆಗೆ ಅತೃಪ್ತಿ ವ್ಯಕ್ತಪಡಿಸಿದ್ದು, ಪ್ರಕರಣ ಮುಕ್ತಾಯಗೊಂಡಿದೆ ಎಂದು ಶೋಮಾ ಹೇಳಿದ್ದಾರೆ. 'ಆತನದು (ಆರೋಪಿ ತರುಣ್ ತೇಜಪಾಲ್) ಲೈಂಗಿಕ ದುರ್ವತನೆ. ನಾನು ಆತನ ಮಗಳಿಗೆ ಸಮಾನವಾಗಿದ್ದೇನೆ. ಆದರೂ ಆತ ಸತತವಾಗಿ ಸುಮಾರು ಕಾಲದಿಂದ ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಅದೆಲ್ಲಾ ನನ್ನ ಜತೆ ಮಾಡಬೇಡಿ ಎಂದು ಎಷ್ಟೋ ಬಾರಿ ಅಂಗಾಲಾಚಿದ್ದೆ. ಆದರೂ ಅದು ಆತನ ಕಿವಿಗೆ ಬೀಳಲಿಲ್ಲ. ನಿರಂತರವಾಗಿ ನಡೆದೇ ಇತ್ತು' ಎಂದು ಬಾಧಿತ ಪತ್ರಕರ್ತೆ NDTVಗೆ ತಿಳಿಸಿದ್ದಾರೆ.

English summary
Sexual Harassment to woman journalist- Tehelka editor Tarun Tejpal steps-down. In a shocking incident on Wednesday, Tarun Tejpal, the Editor of the news giant Tehelka, has "removed himself" from the position for a period of 6 months. Tarun has recused himself for six months as the Editor-in-Chief of Tehelka, after what is being described, in an official statement, as 'an incident with a journalist'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X