ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೈಂಗಿಕ ದೌರ್ಜನ್ಯದ ದೂರು ನೀಡುವುದಕ್ಕೆ ಸಮಯದ ಮಿತಿಯಿಲ್ಲ: ಮನೇಕಾ ಗಾಂಧಿ

|
Google Oneindia Kannada News

ನವದೆಹಲಿ, ಅಕ್ಟೋಬರ್ 08: ಯಾವುದೇ ವ್ಯಕ್ತಿ ಲೈಂಗಿಕ ದೌರ್ಜನ್ಯದ ಪ್ರಕರಣಗಳನ್ನು ದಾಖಲಿಸುವುದಕ್ಕೆ ಸಮಯದ ಮಿತಿಯಿಲ್ಲ. 10-15 ಅಥವಾ ಅದಕ್ಕಿಂತ ಹೆಚ್ಚು ವರ್ಷದ ನಂತರವೂ ದೂರು ದಾಖಲಿಸಬಹುದು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಮನೇಕಾ ಗಾಂಧಿ ಹೇಳಿದ್ದಾರೆ.

ಹೆಸರಾಂತ ಲೇಖಕ ಚೇತನ್ ಭಗತ್ ತಪ್ಪಿಗೆ ಕ್ಷಮೆ ಕೇಳಿದರೂ ಚರ್ಚೆ ನಿಂತಿಲ್ಲಹೆಸರಾಂತ ಲೇಖಕ ಚೇತನ್ ಭಗತ್ ತಪ್ಪಿಗೆ ಕ್ಷಮೆ ಕೇಳಿದರೂ ಚರ್ಚೆ ನಿಂತಿಲ್ಲ

ಇತ್ತೀಚೆಗೆ 'Me Too' ಎಂಬ ಆನ್ ಲೈನ್ ಆಂದೋಲನದ ಮೂಲಕ ಹಲವು ಸೆಲೆಬ್ರಿಟಿಗಳು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ ಸಂಗತಿಯನ್ನು ಬಯಲಿಗೆಳೆದಿದ್ದಾರೆ. ಬಾಲಿವುಡ್ ನಟಿ ತನುಶ್ರೀ ದತ್ತಾ ನಟ ನಾನಾ ಪಾಟೇಕರ್ ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ ಮೇಲೆ ಹಲವರು ತಮ್ಮ ಕಹಿ ಅನುಭವಗಳನ್ನೂ ಹೊರಹಾಕಿದ್ದಾರೆ.

ನಾನಾ ಪಾಟೇಕರ್, ಗಣೇಶ್ ವಿರುದ್ಧ ದೂರು ನೀಡಿದ ತನುಶ್ರೀ ದತ್ತಾನಾನಾ ಪಾಟೇಕರ್, ಗಣೇಶ್ ವಿರುದ್ಧ ದೂರು ನೀಡಿದ ತನುಶ್ರೀ ದತ್ತಾ

ದೌರ್ಜನ್ಯ ನಡೆದು ಎಷ್ಟೇ ವರ್ಷಗಳಾಗಿದ್ದರೂ ದೂರು ನೀಡಬಹುದು, ಕೆಲವರು ಕೆಲ ಅನಿವಾರ್ಯ ಕಾರಣಗಳಿಂದ ಆ ಸಂದರ್ಭದಲ್ಲಿ ದೂರು ನೀಡದೆ ಇದ್ದಿರಬಹುದು, ಅವರ ಮೇಲೆ ಒತ್ತಡವಿರಬಹದು. ಅಂಥ ಸಂದರ್ಭದಲ್ಲಿ ವರ್ಷಗಳೇ ಕಳೆದ ನಂತರವೂ ದೂರು ನೀಡಬಹುದು. ಮತ್ತು ಈ ದೂರನ್ನು ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ರೀತಿಯಲ್ಲೂ ತಿರಸ್ಕರಿಸುವಂತಿಲ್ಲ ಎಂದು ಮನೇಕಾ ಗಾಂಧಿ ಹೇಳಿದರು.

'ಬಾಲಿಕಾಗೃಹದಲ್ಲಿ ಲೈಂಗಿಕ ದೌರ್ಜನ್ಯ: ಇಂತಹ ಘಟನೆಗಳು ಇನ್ನೂ ಇವೆ''ಬಾಲಿಕಾಗೃಹದಲ್ಲಿ ಲೈಂಗಿಕ ದೌರ್ಜನ್ಯ: ಇಂತಹ ಘಟನೆಗಳು ಇನ್ನೂ ಇವೆ'

Sexual harassment coplaints should be allowed any time: Maneka Gandhi

ತನುಶ್ರೀ ದತ್ತ ಅವರ ಆರೋಪದ ನಂತರ ಬಾಲಿವುಡ್ ನಟಿ ಕಂಗನಾ ರನೌತ್ ನಿರ್ದೇಶಕ ವಿಕಾಸ್ ಬಾಹ್ಲ್ ಎಂಬುವವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Sexual harassment complaints should be allowed even 10-15 years later, Union Minister Maneka Gandhi has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X