ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಜೆಐ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಸಮಿತಿಗೆ ನ್ಯಾ. ಇಂದೂ ಮಲ್ಹೋತ್ರಾ ನೇಮಕ

|
Google Oneindia Kannada News

ನವದೆಹಲಿ, ಏಪ್ರಿಲ್ 26: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಪ್ರಕರಣದ ವಿಚಾರಣೆಗೆ ನಿಯೋಜಿಸಲಾಗಿರುವ ಸಮಿತಿಗೆ ಮೂರನೇ ಸದಸ್ಯರನ್ನಾಗಿ ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಅವರನ್ನು ನೇಮಿಸಲಾಗಿದೆ.

ವಿಚಾರಣಾ ಸಮಿತಿಯಿಂದ ಹಿಂದಕ್ಕೆ ಸರಿದಿರುವ ನ್ಯಾ. ಎನ್‌ವಿ ರಮಣ ಅವರ ಸ್ಥಾನಕ್ಕೆ ನ್ಯಾ. ಇಂದೂ ಅವರನ್ನು ಅಯ್ಕೆ ಮಾಡಲಾಗಿದೆ ಎಂದು ಸಮಿತಿಯ ಮುಖ್ಯಸ್ಥ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ತಿಳಿಸಿದ್ದಾರೆ.

ಗೊಗೊಯ್ ವಿರುದ್ಧ ಸಂಚು: ತನಿಖೆಗೆ ನಿವೃತ್ತ ನ್ಯಾಯಮೂರ್ತಿ ನೇಮಕಗೊಗೊಯ್ ವಿರುದ್ಧ ಸಂಚು: ತನಿಖೆಗೆ ನಿವೃತ್ತ ನ್ಯಾಯಮೂರ್ತಿ ನೇಮಕ

ರಂಜನ್ ಗೊಗೊಯ್ ಅವರ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ವಿಚಾರಣೆಗೆ ಸೇವಾ ಹಿರಿತನದ ಆಧಾರದಲ್ಲಿ ಸಮಿತಿ ರಚಿಸಲಾಗಿತ್ತು. ನ್ಯಾ. ಎಸ್‌.ಎ. ಬೊಬ್ಡೆ ಮುಖ್ಯಸ್ಥರಾಗಿರುವ ಸಮಿತಿಯಲ್ಲಿ ಎನ್‌.ವಿ. ರಮಣ ಮತ್ತು ಇಂದಿರಾ ಬ್ಯಾನರ್ಜಿ ಸದಸ್ಯರಾಗಿದ್ದರು.

sexual harassment charges CJI Ranjan Gogoi Justice Indu Malhotra replaces NV Ramana on panel

ಗೊಗೊಯ್ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ತನಿಖೆಗೆ ಸಮಿತಿ ರಚನೆ ಗೊಗೊಯ್ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ತನಿಖೆಗೆ ಸಮಿತಿ ರಚನೆ

ಆದರೆ, ಎನ್‌.ವಿ. ರಮಣ ಅವರು ರಂಜನ್ ಗೊಗೊಯ್ ಅವರ ಕುಟುಂಬಕ್ಕೆ ಆಪ್ತರಾಗಿದ್ದಾರೆ. ಹೀಗಾಗಿ ವಿಚಾರಣೆಯಲ್ಲಿ ಸ್ವಜನಪಕ್ಷಪಾತ ನಡೆಯುವ ಸಾಧ್ಯತೆ ಇದೆ ಎಂದು ಆರೋಪ ಮಾಡಿರುವ ಮಹಿಳೆ ಸುಪ್ರೀಂಕೋರ್ಟ್‌ಗೆ ಪತ್ರ ಬರೆದಿದ್ದರು. ಇದರಿಂದಾಗಿ ರಮಣ ಅವರು ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಜತೆಗೆ ಸಮಿತಿಯಲ್ಲಿ ಇನ್ನೂ ಹೆಚ್ಚಿನ ಮಹಿಳಾ ನ್ಯಾಯಮೂರ್ತಿಗಳನ್ನು ಸೇರಿಸಬೇಕು ಎಂದು ಮನವಿ ಮಾಡಿದ್ದರು. ಅದರಂತೆ ಇಂದೂ ಮಲ್ಹೋತ್ರಾ ಅವರನ್ನು ನೇಮಿಸಲಾಗಿದೆ.

English summary
Justice Indu Malhotra replaces NV Ramana in inquiry panel constituted to probe sexual harassment charges against Chief Justice Ranjan Gogoi after Ramana recused himself from the panel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X