ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛೀ.. ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ 'ಅಡ್ಜೆಸ್ಟ್ ಮಾಡಿಕೊಂಡ್ರೆ' ಕೆಲಸ ಪಕ್ಕಾ?

|
Google Oneindia Kannada News

ದೆಹಲಿ, ನವೆಂಬರ್.27: ಹೆಣ್ಣು ಮಕ್ಕಳು ಅಂದ್ರೆ ಈತನ ಕಲ್ಲು ಹೃದಯವೂ ಕರಗಿ ನೀರಾಗಿ, ನದಿಯಾಗಿ ಹರಿಯುತ್ತೆ. ಆದರೆ ಸ್ವಲ್ಪ ಯಾಮಾರಿದರೆ ಜಡೆಗೆ ಕೈ ಹಾಕಿ ಬಿಡುತ್ತಾರಂತೆ. ಇಂಥ ಗಂಭೀರ ಆರೋಪ ಯಾವುದೋ ಜನಸಾಮಾನ್ಯನ ಮೇಲಂತೂ ಅಲ್ಲ.

ನಾಡು-ನುಡಿ ಸಂಸ್ಕೃತಿ ಬಗ್ಗೆ ನಿತ್ಯ ಉದ್ದುದ್ದ ಮಾತನಾಡುವ ವ್ಯಕ್ತಿಯನ್ನೇ ಅನುಮಾನದಿಂದ ನೋಡುವಂತಾ ಪರಿಸ್ಥಿತಿ ಇದೀಗ ನಿರ್ಮಾಣವಾಗಿದೆ. ಏಕೆಂದರೆ, ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಕೆ.ಶ್ರೀನಿವಾಸ್ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಮಾಡಿದ್ದಾರೆ.

ಗೊಗೋಯಿಗೆ ಕಪ್ಪು ಚುಕ್ಕೆಯಾಗಿ ಉಳಿದ ಲೈಂಗಿಕ ಕಿರುಕುಳ ಕೇಸ್ಗೊಗೋಯಿಗೆ ಕಪ್ಪು ಚುಕ್ಕೆಯಾಗಿ ಉಳಿದ ಲೈಂಗಿಕ ಕಿರುಕುಳ ಕೇಸ್

ಕಳೆದ ನವೆಂಬರ್.07ರಂದು ದೆಹಲಿಯ ತಿಲಕ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಬಗ್ಗೆ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಶ್ರೀನಿವಾಸ್ ರಾವ್ ವಿರುದ್ಧ ದೂರು ನೀಡಲಾಗಿದೆ. ಶ್ರೀನಿವಾಸ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ಕಾರ್ಯದರ್ಶಿಗಳೇ ಕೊಟ್ಟರಾ ಪ್ರಪೋಸಲ್?

ಕಾರ್ಯದರ್ಶಿಗಳೇ ಕೊಟ್ಟರಾ ಪ್ರಪೋಸಲ್?

ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಕೆ.ಶ್ರೀನಿವಾಸ್ ರಾವ್ ತಮ್ಮ ಜೊತೆ ಅಸಭ್ಯವಾಗಿ ವರ್ತಿಸಿದ್ದರು ಎಂದು ಮಹಿಳೆ ದೂರು ದಾಖಲಿಸಿದ್ದಾರೆ. ಕಚೇರಿಯಲ್ಲಿ ಮಹಿಳೆಯ ಕೈ ಹಿಡಿದು ಎಳೆದಾಡಿದ್ದರು. ಅಷ್ಟೇ ಅಲ್ಲದೇ, ಕಾರ್ಯದರ್ಶಿಗಳು ತಮ್ಮ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದರು. ಲೈಂಗಿಕವಾಗಿ ಸಹಕರಿಸುವಂತೆ ಡಿಮ್ಯಾಂಡ್ ಮಾಡುತ್ತಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.

ಕೆಲಸಕ್ಕಾಗಿ ಸ್ವಲ್ಪ ಅಡ್ಜೆಸ್ಟ್ ಮಾಡಿಕೊಳ್ಳಬೇಕಾ?

ಕೆಲಸಕ್ಕಾಗಿ ಸ್ವಲ್ಪ ಅಡ್ಜೆಸ್ಟ್ ಮಾಡಿಕೊಳ್ಳಬೇಕಾ?

ಕಳೆದ 2018 ಫೆಬ್ರುವರಿಯಲ್ಲಿ ಮಹಿಳೆ ಸಾಹಿತ್ಯ ಅಕಾಡೆಮಿಗೆ ಕೆಲಸಕ್ಕೆ ಸೇರಿಕೊಂಡಿದ್ದರು. ತಾತ್ಕಾಲಿಕ ಉದ್ಯೋಗಿಯಾಗಿದ್ದ ಮಹಿಳೆ ತಮ್ಮ ಜೊತೆಗೆ ಸಹಕರಿಸಬೇಕು. ಹಾಗಿದ್ದಲ್ಲಿ ಮಾತ್ರ ಅವರ ಉದ್ಯೋಗವನ್ನು ಪರ್ಮನೆಂಟ್ ಮಾಡುವುದಾಗಿ ಕಾರ್ಯದರ್ಶಿ ಶ್ರೀನಿವಾಸ್ ರಾವ್ ಬೇಡಿಕೆ ಇಟ್ಟಿದ್ದರಂತೆ. ಇದರ ಬಗ್ಗೆಯೂ ಮಹಿಳೆ ಪೊಲೀಸರಲ್ಲಿ ಹೇಳಿಕೊಂಡಿದ್ದಾರೆ.

ನನ್ನ ಮಗಳು ಸಮಾನ ಎಂದರಾ ಸಾಹೇಬರು?

ನನ್ನ ಮಗಳು ಸಮಾನ ಎಂದರಾ ಸಾಹೇಬರು?

ಇನ್ನು, ಎಫ್ಐಆರ್ ದಾಖಲಿಸಿದ ಪೊಲೀಸರು ವಿಚಾರಣೆ ನಡೆಸಲು ಮುಂದಾದರು. ತಮ್ಮ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಏನು ಹೇಳುತ್ತೀರಾ ಎಂದು ಪ್ರಶ್ನೆ ಮಾಡಲಾಯಿತು. ಆದರೆ, ಈ ವೇಳೆ ಮಹಿಳೆ ತಮ್ಮ ಮಗಳ ಸಮಾನರಾಗಿದ್ದು, ಆರೋಪಗಳನ್ನೆಲ್ಲ ತಳ್ಳಿ ಹಾಕಿದ್ದಾರೆ.

ಸಾಹಿತ್ಯ ಅಕಾಡೆಮಿಯಲ್ಲಿ ಖಾಕಿ ತನಿಖೆ

ಸಾಹಿತ್ಯ ಅಕಾಡೆಮಿಯಲ್ಲಿ ಖಾಕಿ ತನಿಖೆ

ಮಹಿಳೆ ನೀಡಿರುವ ದೂರು ಆಧರಿಸಿ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಐಪಿಸಿ ಸೆಕ್ಷನ್ 354ಎ ಅಡಿ ತನಿಖೆ ನಡೆಸುತ್ತಿರುವ ಪೊಲೀಸರು, ಸಾಹಿತ್ಯ ಅಕಾಡೆಮಿಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗುತ್ತಿದೆಯಾ ಎಂಬುದರ ಬಗ್ಗೆ ಆಂತರಿಕ ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಎದುರಿಸುತ್ತಿರುವ ಶ್ರೀನಿವಾಸ್ ರಾವ್, ಕಳೆದ 2013ರಿಂದಲೂ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎನ್ನಲಾಗಿದೆ.

English summary
Women Alleges Sexual Harassment By Kendra Sahitdy Akademi Secretary K.Sreenivasrao. Delhi Police Registered Fir On November 07.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X