ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಶಾಲೆಯಲ್ಲಿ 4ರ ಬಾಲಕಿ ಗುಪ್ತಾಂಗದೊಳಗೆ ಪೆನ್ಸಿಲ್ ಹಾಕಿದ ಸಹಪಾಠಿ

|
Google Oneindia Kannada News

ನವದೆಹಲಿ, ನವೆಂಬರ್ 23: ನಾಲ್ಕು ವರ್ಷದ ಬಾಲಕಿ ಮೇಲೆ ಆಕೆಯ ಸಹಪಾಠಿ ಚೂಪಾದ ಪೆನ್ಸಿಲ್ ಹಾಗೂ ಬೆರಳಿನಿಂದ ಎರಡು ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಶಿಕ್ಷಕಿ ಇಲ್ಲದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂಬುದನ್ನು ಬಾಲಕಿಯ ತಾಯಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಈ ಘಟನೆ ವರದಿಯಾದ ನಂತರ ಶಾಲೆ ಆಡಳಿತ ಮಂಡಳಿ ಪೋಷಕರಿಗೆ ಸ್ಪಷ್ಟನೆ ನೀಡಿದೆ. ಬಾಲಕರಿಗೆ ಪ್ರತ್ಯೇಕ ತರಗತಿ ಮಾಡಿದ್ದೇವೆ. ನಿಮ್ಮ ಮಗಳನ್ನು ಶಾಲೆಗೆ ಧೈರ್ಯವಾಗಿ ಕಳುಹಿಸಬಹುದು ಎಂದು ಹೇಳಿದೆ.

ಪಾಕಿಸ್ತಾನದಲ್ಲಿ ಕೋಳಿ ಮೇಲೆ ಅತ್ಯಾಚಾರ, ಬಾಲಕನ ಬಂಧಿಸಿದ ಪೊಲೀಸರುಪಾಕಿಸ್ತಾನದಲ್ಲಿ ಕೋಳಿ ಮೇಲೆ ಅತ್ಯಾಚಾರ, ಬಾಲಕನ ಬಂಧಿಸಿದ ಪೊಲೀಸರು

ಪೊಲೀಸರು ನಾಲ್ಕು ವರ್ಷದ ಬಾಲಕನ ಮೇಲೆ ದೂರು ದಾಖಲಿಸಿದ್ದಾರೆ. ಏಳು ವರ್ಷದೊಳಗಿನ ಮಕ್ಕಳನ್ನು ಕಾನೂನು ಪ್ರಕಾರ ಯಾವುದೇ ಅಪರಾಧಕ್ಕೆ ಹೊಣೆ ಮಾಡಲು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

Sexual assault on 4 year girl by classmate

ಆದರೆ, ಶಾಲೆಯ ಆಡಳಿತ ಮಂಡಳಿಯ ಬೇಜವಾಬ್ದಾರಿತನದಿಂದ ಹೀಗಾಗಿದೆ. ಆದ್ದರಿಂದ ಅವರಿಗೆ ಶಿಕ್ಷೆ ಆಗಬೇಕು ಎಂದು ಬಾಲಕಿಯ ತಾಯಿ ಒತ್ತಾಯಿಸಿದ್ದಾರೆ. ಆದರೆ ಈ ವರೆಗೆ ಶಾಲೆ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ.

"ಆ ಹುಡುಗ ಆಹಾರ ಸೇವಿಸಿದ ಮೇಲೆ ಕೈ ತೊಳೆಯದೆ ನನ್ನ ಮಗಳ ಗುಪ್ತಾಂಗವನ್ನು ಮುಟ್ಟಿದ್ದಾನೆ. ಆ ಸಂದರ್ಭದಲ್ಲಿ ಆಯಾ ಅಲ್ಲಿರಲಿಲ್ಲ. ಇನ್ನು ತರಗತಿಯಲ್ಲಿ ಶಿಕ್ಷಕಿ ಇಲ್ಲದ ವೇಳೆ ಪೆನ್ಸಿಲ್ ಅನ್ನು ಚೂಪು ಮಾಡಿ ಆಕೆಯ ಜನನಾಂಗದೊಳಗೆ ಅದನ್ನು ಹಾಕಿದ್ದಾನೆ" ಎಂದು ಬಾಲಕಿಯ ತಾಯಿ ತಿಳಿಸಿದ್ದಾರೆ.

15 ಮಂದಿಯಿಂದ ಅತ್ಯಾಚಾರಕ್ಕೆ ಯತ್ನ, ರೈಲಿನಿಂದ ಜಿಗಿದ ತಾಯಿ-ಮಗಳು15 ಮಂದಿಯಿಂದ ಅತ್ಯಾಚಾರಕ್ಕೆ ಯತ್ನ, ರೈಲಿನಿಂದ ಜಿಗಿದ ತಾಯಿ-ಮಗಳು

ಬಾಲಕಿಯ ಗುಪ್ತಾಂಗದಲ್ಲಿ ವಿಪರೀತ ನೋವು ಕಾಣಿಸಿಕೊಂಡ ನಂತರ ಈ ಘಟನೆ ಬಗ್ಗೆ ಪೋಷಕರಿಗೆ ಆಕೆ ತಿಳಿಸಿದ್ದಾಳೆ. ಮಕ್ಕಳ ವೈದ್ಯರು ಸಹ ಲೈಂಗಿಕ ದೌರ್ಜನ್ಯ ನಡೆದಿರುವುದನ್ನು ದೃಢಪಡಿಸಿದ್ದಾರೆ.

ಆದರೆ, ಪೊಲೀಸರು ಸಂದಿಗ್ಧದಲ್ಲಿದ್ದಾರೆ. ನಾಲ್ಕರ ವಯಸ್ಸಿನ ಬಾಲಕನನ್ನು ಅಪರಾಧಕ್ಕೆ ಹೊಣೆ ಮಾಡಲು ಸಾಧ್ಯವೆ? ಮುಂದೆ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಚಿಂತನೆ ನಡೆಸಿದ್ದಾರೆ.

English summary
A four-year-old girl was sexually assaulted twice by her classmate in a Delhi school with a sharpened pencil and his finger, and no teacher was around to prevent the attack that left the child in pain and badly wounded.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X