ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2 ಕೋಟಿ ವಕೀಲಿಕೆ ಶುಲ್ಕಕ್ಕೆ ಕೇಜ್ರಿವಾಲ್ ಗೆ ಜೇಠ್ಮಲಾನಿ ಪತ್ರ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜುಲೈ 26: ತಮ್ಮ ವಕೀಲಿಕೆ ಶುಲ್ಕ ಎರಡು ಕೋಟಿ ರುಪಾಯಿ ನೀಡುವಂತೆ ಹಿರಿಯ ವಕೀಲ ರಾಮ್ ಜೇಠ್ಮಲಾನಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಪತ್ರ ಬರೆದಿದ್ದಾರೆ. ಅದರ ಬೆನ್ನಲ್ಲೇ ಅರುಣ್ ಜೇಟ್ಲಿ ಹಾಕಿದ್ದ ಮಾನನಷ್ಟ ಮೊಕದ್ದಮೆಯಿಂದ ಹಿಂದೆ ಸರಿದಿದ್ದಾರೆ.

'ಕೇಜ್ರಿವಾಲ್ ಬಡ ಕಕ್ಷೀದಾರ ಅಂದುಕೊಂಡು ಪುಕ್ಕಟೆ ವಾದ ಮಾಡ್ತೀನಿ''ಕೇಜ್ರಿವಾಲ್ ಬಡ ಕಕ್ಷೀದಾರ ಅಂದುಕೊಂಡು ಪುಕ್ಕಟೆ ವಾದ ಮಾಡ್ತೀನಿ'

ಅರುಣ್ ಜೇಟ್ಲಿ ವಿರುದ್ಧ ಅವಮಾನ ಆಗುವಂಥ ಭಾಷೆ ಬಳಸುವಂತೆ ನಾನೇನೂ ಹೇಳಿರಲಿಲ್ಲ ಎಂದು ಕೇಜ್ರಿವಾಲ್ ಹೇಳಿಕೆ ನೀಡಿದ್ದರು. ಆ ಹೇಳಿಕೆ ನೀಡಿದ ನಂತರ ಜೇಠ್ಮಲಾನಿ ಪತ್ರ ಬರೆದಿದ್ದಾರೆ. ಖಾಸಗಿ ಸಭೆಗಳಲ್ಲಿ ತಮಗಿಂತ ಹೆಚ್ಚು ಖಾರವಾಗಿ ಜೇಟ್ಲಿ ವಿರುದ್ಧ ಕೇಜ್ರಿವಾಲ್ ಮಾತನಾಡಿದ್ದಾರೆ ಎಂದು ಜೇಠ್ಮಲಾನಿ ಹೇಳಿದ್ದಾರೆ.

Settle Rs 2 crore dues, Jethmalani tells Kejriwal while quitting as his counsel

ಕೇಜ್ರಿವಾಲ್ ವಿರುದ್ಧ ಜೇಟ್ಲಿ ಹಾಕಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ಕೋರ್ಟ್ ವಿಚಾರಣೆ ವೇಳೆ ವಕೀಲ ಜೇಠ್ಮಲಾನಿ ಅವರು ಅವಮಾನ ಆಗುವಂಥ ಪದ ಬಳಕೆ ಮಾಡಿದ್ದಾರೆ ಎಂದು ಹತ್ತು ಕೋಟಿ ರುಪಾಯಿಗೆ ಮತ್ತೊಂದು ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಜೇಟ್ಲಿ V/S ಜೇಠ್ಮಲಾನಿ: ದೆಹಲಿ ಹೈಕೋರ್ಟ್ ನಲ್ಲಿ ಮದಗಜಗಳ ವಾಗ್ವಾದ ಜೇಟ್ಲಿ V/S ಜೇಠ್ಮಲಾನಿ: ದೆಹಲಿ ಹೈಕೋರ್ಟ್ ನಲ್ಲಿ ಮದಗಜಗಳ ವಾಗ್ವಾದ

ಆ ನಂತರ ಕೇಜ್ರಿವಾಲ್ ದೆಹಲಿ ಹೈ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ್ದರು. ಜತೆಗೆ ಜೇಠ್ಮಲಾನಿ ಅವರಿಗೆ ಪತ್ರ ಬರೆದಿದ್ದರು. ಅದರಲ್ಲಿ, ಜೇಟ್ಲಿ ವಿರುದ್ಧ ಅವಮಾನಕರ ಪದ ಬಳಕೆಗೆ ನಾನೇನೂ ಸೂಚನೆ ನೀಡಿರಲಿಲ್ಲ. ಹಿರಿಯ ವಕೀಲರಿಗೆ ಅಂಥ ಪದ ಬಳಕೆಗೆ ಸೂಚನೆ ನೀಡುವುದು ಒಪ್ಪಲು ಸಾಧ್ಯವೇ ಇಲ್ಲ ಎಂದಿದ್ದರು.

English summary
Senior advocate, Ram Jethmalani has asked Delhi Chief Minister Arvind Kejriwal to settle his dues of Rs 2 crore. The demand was made in a letter written to Kejriwal following which Jethmalani quit as his counsel in the Arun Jaitley defamation case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X