ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ವರ್ ಸಮಸ್ಯೆ: ಜಗತ್ತಿನಾದ್ಯಂತ ಏರ್ ಇಂಡಿಯಾ ವಿಮಾನ 5 ಗಂಟೆ ವಿಳಂಬ

|
Google Oneindia Kannada News

ನವದೆಹಲಿ, ಏಪ್ರಿಲ್ 27: ಏರ್ ಇಂಡಿಯಾ ವಿಮಾನದ ಮೈನ್ ಸರ್ವರ್ ನಲ್ಲಿ ಉಂಟಾದ ಕೆಲ ತಾಂತ್ರಿಕ ಸಮಸ್ಯೆಯಿಂದಾಗಿ ದೇಶದಾದ್ಯಂತ ಏರ್ ಇಂಡಿಯಾ ವಿಮಾನ ಗರಿಷ್ಠ 5 ಗಂಟೆಯಷ್ಟು ವಿಳಂಬವಾದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.

ರಿಪೇರಿ ವೇಳೆ ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ: ವೈರಲ್ ವಿಡಿಯೋ ರಿಪೇರಿ ವೇಳೆ ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ: ವೈರಲ್ ವಿಡಿಯೋ

ಮುಂಬೈಯ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣ ಮತ್ತು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ವಿಮಾನ ವಿಳಂಬವಾದ ಕಾರಣ ಪ್ರಯಾಣಿಕರು ಬೇಸತ್ತು, ಜನಜಂಗುಳಿಯ ವಿಡಿಯೋಗಳನ್ನು ಸಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದುದು ಕಂಡುಬಂತು.

Server problem affects Air India operation across the world for 5 hours

ಬೆಳಿಗ್ಗಿನ ಜಾವ ಸುಮಾರು 3 ಗಂಟೆಯ ಹೊತ್ತಿಗೆ ಏರ್ ಇಂಡಿಯಾ ಸರ್ವರ್ ನಲ್ಲಿ ಸಮಸ್ಯೆ ಕಂಡುಬಂದಿತ್ತು. ಇದರಿಂದಾಗಿ ವಿಶ್ವದಾದ್ಯಂತ ಇದ್ದ ಏರ್ ಇಂಡಿಯಾ ಪ್ರಯಾಣಿಕರಿಗೆ ಬೋರ್ಡಿಂಗ್ ಪಾಸ್ ನೀಡುವುದಕ್ಕೆ ವಿಳಂಬವಾಗಿತ್ತು. ಇದರಿಂದಾಗಿ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಯ್ತು. ಬೋರ್ಡಿಂಗ್ ಪಾಸ್ ಗಾಗಿ ಪ್ರಯಾಣಿಕರ ನೂಕುನುಗ್ಗುಲು ಸಹ ಕಂಡುಬಂತು.

ಏರ್ ಇಂಡಿಯಾದಲ್ಲಿ 79 ಹುದ್ದೆಗಳಿಗೆ ವಾಕ್ ಇನ್ ಸಂದರ್ಶನ ಏರ್ ಇಂಡಿಯಾದಲ್ಲಿ 79 ಹುದ್ದೆಗಳಿಗೆ ವಾಕ್ ಇನ್ ಸಂದರ್ಶನ

ಏರ್ ಇಂಡಿಯಾದ ಚೆಕ್ ಇನ್, ಬೋರ್ಡಿಂಗ್ ಮತ್ತು ಬ್ಯಾಗೇಜ್ ಟ್ರಾಕಿಂಗ್ ತಂತ್ರಜ್ಞಾನವನ್ನು ನೋಡಿಕೊಳ್ಳುತ್ತಿದ್ದ ಸಿಟಾ(SITA) ಸಾಫ್ಟ್ ವೇರ್ ಶಟ್ ಡೌನ್ ಆಗಿದ್ದರಿಂದ ಈ ಸಮಸ್ಯೆ ಕಾಣಿಸಿಕೊಂಡಿತ್ತು ಎನ್ನಲಾಗಿದೆ. "ಇದು ತಾಂತ್ರಿಕ ಸಮಸ್ಯೆ. ನಾವು ಕೂಡಲೇ ಈ ಬಗ್ಗೆ ಗಮನ ಹರಿಸಿದ್ದೇವೆ. ನಮ್ಮಿಂದ ಪ್ರಯಾಣಿಕರಿಗೆ ಉಂಟಾದ ಸಮಸ್ಯೆಗೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ" ಎಂದು ಏರ್ ಇಂಡಿಯಾ ಟ್ವೀಟ್ ಮಾಡಿದೆ.

English summary
Due to problem in main server, Aiir India flights' operation across the world were affected for over 5 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X